ಮಡಿಕೇರಿ, ಜು. 7: ಆಟೋ ಮಾಲೀಕರ ಮತ್ತು ಚಾಲಕರ ಸಂಘದ ವಾರ್ಷಿಕ ಮಹಾಸಭೆ ತಾ. 19 ರಂದು ನಗರದ ಹೊಟೇಲ್ ಸಮುದ್ರ ಸಭಾಂಗಣದಲ್ಲಿ ಸಂಘÀದ ಅಧ್ಯಕ್ಷ ಎ. ಅರುಣ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆಯಲಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ, ಸಭೆÉಗೆ ಎಲ್ಲಾ ಸದಸ್ಯರು ಹಾಜರಾಗುವ ಮೂಲಕ ಆರೋಗ್ಯಕರ ಚರ್ಚೆಗೆ ಅವಕಾಶ ಕಲ್ಪಿಸಬೇಕೆಂದು ತಿಳಿಸಿದರು. ಮಾಸಿಕ ರೂ. 30 ಶುಲ್ಕವನ್ನು ಸಂಘಕ್ಕೆ ಪಾವತಿಸುತ್ತಿರುವ ಸದಸ್ಯರಿಗೆ ಮಾತ್ರ ಮುಕ್ತ ಚರ್ಚೆಗೆ ಅವಕಾಶವಿದ್ದು, ಯಾವದೇ ರಾಜಕೀಯ ಭಿನ್ನಾಭಿಪ್ರಾಯ ಪ್ರದರ್ಶಿಸುವಂತಿಲ್ಲ ವೆಂದು ಸ್ಪಷ್ಟಪಡಿಸಿದರು.

10ನೇ ತರಗತಿ ಮತ್ತು ಪಿಯುಸಿಯಲ್ಲಿ ಶೇ. 80 ಕ್ಕಿಂತ ಹೆಚ್ಚು ಅಂಕ ಗಳಿಸಿದ ಸದಸ್ಯರ ಮಕ್ಕಳಿಗೆ ಸಭೆಯಲ್ಲಿ ಪೆÇ್ರೀತ್ಸಾಹ ಧನ ನೀಡಲಾಗುವದು. ಅರ್ಹ ಫಲಾನುಭವಿಗಳು ತಾ. 15 ರೊಳಗೆ ಅಂಕಪಟ್ಟಿಯ ನಕಲು ಪ್ರತಿಯನ್ನು ಹಾಗೂ ಅರ್ಜಿಯನ್ನು ಸಲ್ಲಿಸಬಹುದಾಗಿದೆಯೆಂದು ಮೇದಪ್ಪ ಹೇಳಿದರು. ನಗರ ಮತ್ತು ಸಂಚಾರಿ ಠಾಣಾಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡು ವಿದ್ಯಾರ್ಥಿಗಳಿಗೆ ಪೆÇ್ರೀತ್ಸಾಹ ಧನ ವಿತರಿಸಲಿದ್ದಾರೆ.

ಪ್ರತಿ ತಿಂಗಳು ಸದಸ್ಯರಿಂದ ರೂ. 30 ನ್ನು ಸಂಗ್ರಹಿಸಲಾಗುತ್ತಿದ್ದು, ಈ ಹಣವನ್ನು ಚಾಲಕರ ಕುಟುಂಬದ ಯೋಗ ಕ್ಷೇಮಕ್ಕಾಗಿ ವಿತರಿಸಲಾಗುತ್ತಿದೆ ಎಂದು ಮೇದಪ್ಪ ತಿಳಿಸಿದರು. ಅಪಘಾತ ಅಥವಾ ಸಾವು ಸಂಭವಿಸಿದಾಗ ತುರ್ತಾಗಿ ನೆರವನ್ನು ನೀಡಲಾಗುತ್ತದೆ. ಕಳೆದ ವರ್ಷ 14 ಮಂದಿಗೆ ಹಾಗೂ ಈ ಬಾರಿ 9 ಮಂದಿಗೆ ಧನ ಸಹಾಯವನ್ನು ನೀಡಲಾಗಿದೆಯೆಂದು ಮೇದಪ್ಪ ತಿಳಿಸಿದರು. ಅರ್ಜಿ ಸಲ್ಲಿಸುವ ವಿದ್ಯಾರ್ಥಿಗಳು ಈ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಮೊ. 9686300738, 9900500120)

ಗೋಷ್ಠಿಯಲ್ಲಿ ನಗರಾಧ್ಯಕ್ಷ ಎ. ಅರುಣ್ ಕುಮಾರ್, ಉಪಾಧ್ಯಕ್ಷ ಪಿ.ಆರ್. ಡೆನ್ನಿ, ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್, ಸಹ ಕಾರ್ಯದರ್ಶಿ ಯು.ಎಂ. ರಮೇಶ್, ಖಜಾಂಚಿ ಎಸ್.ಬಿ. ದಿಲೀಪ್ ಉಪಸ್ಥಿತರಿದ್ದರು.