ಸೋಮವಾರಪೇಟೆ, ಅ. 27: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ವತಿಯಿಂದ ನವೆÀಂಬರ್ 1 ರಂದು 10ನೇ ವರ್ಷದ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಮಾರಂಭ ಮತ್ತು 25 ನೇ ವರ್ಷದ ವಾರ್ಷಿಕೋತ್ಸವಕ್ಕೆ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್. ಮೋಹನ್ ತಿಳಿಸಿದರು. ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 8 ಗಂಟೆಗೆ ಆಟೋ ನಿಲ್ದಾಣದಲ್ಲಿ ಧ್ವಜಾರೋಹಣ, ಬೆಳಿಗ್ಗೆ 8.30ಕ್ಕೆ ಸರಕಾರಿ ಆಸ್ಪತ್ರೆಯ ಒಳರೋಗಿಗಳಿಗೆ ಹಣ್ಣು - ಹಂಪಲು ವಿತರಣೆ, 9 ಗಂಟೆಗೆ ಕಕ್ಕೆಹೊಳೆ ಜಂಕ್ಷನ್ ಬಳಿಯಿಂದ ಡೊಳ್ಳು ಕುಣಿತದೊಂದಿಗೆ ಆಟೋಗಳ ಮೆರವಣಿಗೆ ಹಾಗೂ ಪಟ್ಟಣದಲ್ಲಿರುವ ಎಲ್ಲಾ ಪ್ರತಿಮೆಗಳಿಗೆ ಮಾಲಾರ್ಪಣೆ ಮಾಡಲಾಗುವದು ಎಂದರು.
ಖಾಸಗಿ ಬಸ್ ನಿಲ್ದಾಣದಲ್ಲಿ 11.30ಕ್ಕೆ ನಡೆಯುವ ಶಾಲಾ ಮಕ್ಕಳ ಕುಣಿಯೋಣು ಬಾರಾ ನೃತ್ಯ ಸ್ಪರ್ಧೆಯನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಉದ್ಘಾಟಿಸಲಿದ್ದು, ಮಾಜಿ ಸಚಿವ ಜೀವಿಜಯ, ಮಾಜಿ ಎಂಎಲ್ಸಿ ಮೇದಪ್ಪ, ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಉದ್ಯಮಿ ಹರಪಳ್ಳಿ ರವೀಂದ್ರ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕರಿಗೆ ಅನ್ನದಾನ ನಡೆಯಲಿದೆ ಎಂದರು.
ಸಂಜೆ 6 ಗಂಟೆಗೆ ಕನ್ನಡ ರಾಜೋತ್ಸವ ಸಮಾರೋಪ ಸಮಾರಂಭ ನಡೆಯಲಿದ್ದು, ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಕೆ.ಜಿ. ಬೋಪಯ್ಯ, ಜಿ.ಪಂ. ಅಧ್ಯಕ್ಷ ಹರೀಶ್, ತಾ.ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್, ಪ.ಪಂ. ಅಧ್ಯಕ್ಷೆ ವಿಜಯಲಕ್ಷ್ಮೀ ಸುರೇಶ್, ಕಾಂಗ್ರೆಸ್ ಮುಖಂಡ ನಾಪಂಡ ಮುತ್ತಪ್ಪ ಅವರುಗಳು ಭಾಗವಹಿಸಲಿದ್ದಾರೆ ಎಂದರು.
ಅಲಂಕೃತ ಆಟೋಗಳಿಗೆ ಬಹುಮಾನ ವಿತರಣೆ, ಸಂಘದಲ್ಲಿ ಸೇವೆ ಸಲ್ಲಿಸಿರುವ ಮಾಜಿ ಅಧ್ಯಕ್ಷರುಗಳಾದ ಮರ್ವಿನ್ ಡಿಸೋಜ, ಇಂದುಕುಮಾರ್, ಜರ್ಮಿ ಡಿಸೋಜ, ಎನ್.ಡಿ. ಕೃಷ್ಣಪ್ಪ, ಸಿ.ಡಿ. ನೆಹರೂ, ಉಮೇಶ್, ಪ್ರವೀಣ್ಕುಮಾರ್, ಮಾಜೀ ಸೈನಿಕ ಸುಕುಮಾರ್, ಸಮಾಜ ಸೇವಕ ಹಾಸನದ ಮೈಲಾರಿ ಶೆಟ್ಟಿ ಅವರುಗಳನ್ನು ಸನ್ಮಾನಿಸಲಾಗುವದು ಎಂದು ತಿಳಿಸಿದರು.
ಇದೇ ಸಂದರ್ಭ ಉದಯ ಟಿವಿ ರೂಪೇಶ್ ಅರ್ಪಿಸುವ ಜಾಲಿಬಾಯ್ಸ್ ತಂಡದವರಿಂದ ರಸಮಂಜರಿ, ಝೀ ಕನ್ನಡದ ಸರಿಗಮಪ ಖ್ಯಾತಿಯ ಅತಿಶಯ್ ಜೈನ್ ಮತ್ತು ಪುಟಾಣಿ ಪಂಟ್ರು ಖ್ಯಾತಿಯ ಮಧುಸೂಧನ್ ಅವರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಮಂಜುನಾಥ್, ಸಿ.ಡಿ. ನೆಹರೂ, ಶಶಿಧರ್, ಗಣೇಶ್, ಗಂಗಾಧರ್, ರವಿ, ಮಹಮ್ಮದ್ ಶಫಿ ಅವರುಗಳು ಉಪಸ್ಥಿತರಿದ್ದರು.