ಪೊನ್ನಂಪೇಟೆ, ಡಿ. 12 : ಬಾಳೆಲೆಯಲ್ಲಿ 2017ರ ಏಪ್ರಿಲ್ ತಿಂಗಳಿನಲ್ಲಿ ನಡೆಯಲಿರುವ ಅಳೆಮೇಂಗಡ ಕಪ್ ಕ್ರಿಕೆಟ್ ಪಂದ್ಯಾವಳಿಯ ಲಾಂಛÀನವನ್ನು ಬಾಳೆಲೆ ಕೊಡವ ಸಮಾಜದಲ್ಲಿ ಅಳೆಮೇಂಗಡ ಕಪ್ ಪಂದ್ಯಾವಳಿಯ ಅಧ್ಯಕ್ಷ ಅಳೆಮೇಂಗಡ ಬೋಸ್ ಮಂದಣ್ಣ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಲಾಂಛನವನ್ನು ಇಲ್ಲಿನ ಕೊಡವ ಸಮಾಜದಲ್ಲಿ ಅನಾವರಣ ಗೊಳಿಲಾಯಿತು.

ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ 2017ರ ಏಪ್ರಿಲ್‍ನಲ್ಲಿ ಬಾಳೆಲೆಯಲ್ಲಿ ಅಳಮೇಂಗಡ ಕ್ರಿಕೆಟ್ ಕಪ್ 2017ರ ಟೂರ್ನಿ ನಡೆಯಲಿದೆ. ಬಳಿಕ ಬೋಸ್ ಮಂದಣ್ಣ ಮಾತನಾಡಿ, ಕೊಡವ ಕ್ರಿಕೆಟ್ ಅಕಾಡೆಮಿ ಸಹಯೋಗದಲ್ಲಿ 18ನೇ ಕೊಡವ ಕೌಟುಂಬಿಕ ಕ್ರಿಕೆಟ್ ಟೂರ್ನಿಯನ್ನು ಅಳೆಮೇಂಗಡ ಕಟುಂಬಸ್ಥರು ನಡೆಸಿಕೊಡಲಿದೆÉ. ಬಾಳೆಲೆಯ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಒಂದು ತಿಂಗಳ ಕಾಲ ಪಂದ್ಯಾವಳಿಯನ್ನು ನಡೆಸಲಾಗುವದು.

ಪಂದ್ಯಾವಳಿಯನ್ನು ಯಶಸ್ವಿ ಗೊಳಿಸಲು ಕುಟುಂಬದ ಎಲ್ಲಾ ಸದಸ್ಯರೊಂದಿಗೆ ಶ್ರಮಿಸಲಾಗುತ್ತಿದೆ. ಇದು ಅಳೆಮೇಂಗಡ ಕಪ್ ಟೂರ್ನಿಯಾದರೂ ಬಾಳೆಲೆ ಕೇಂದ್ರದ ಪಂದ್ಯಾವಳಿಯಾಗಿ ನಡೆಸಲು ಚಿಂತಿಸಲಾಗುತ್ತಿದೆ. ಕೇಂದ್ರದ ಎಲ್ಲಾ ಜನರಿಗೂ ಇದರ ರಸದೌತಣ ನೀಡಲಾಗುವದು. ಈ ಮೂಲಕ ಪಂದ್ಯಾವಳಿಯನ್ನು ಜನಪ್ರಿಯ ಗೊಳಿಸಲಾಗುವದು ಎಂದರು.

ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲಚೀರ್ ಬೋಸ್ ಮಾತನಾಡಿ ಈಗಾಗಲೆ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಮೈದಾನದಲ್ಲಿ ಕಾಂಡೇರ, ಬಲ್ಲಿಮಾಡ, ಅಡ್ಡೆಂಗಡ, ಕೊಕ್ಕೆಂಗಡ ಕೌಟುಂಬಿಕ ಟೂರ್ನಿಗಳು ನಡೆದಿವೆ. ಇದೀಗ ನಡೆಯಲಿರುವ ಅಳೆಮೇಂಗಡ ಕಪ್ ಟೂರ್ನಿ ಐದನೇಯದಾಗಿದೆ. 2020ರಲ್ಲಿ ಬಾಳೆಲೆಯಲ್ಲಿ ಕೊಡವ ಕೌಟುಂಬಿಕ ಹಾಕಿ ಉತ್ಸವ ನಡೆಯಲಿದೆ. ಇದರಿಂದ ಬಾಳೆಲೆ ಕೇಂದ್ರದ ಜನರಿಗೆ ಕ್ರೀಡಾ ಪ್ರೇಮ ಹಾಗೂ ಸಂತೋಷ ಲಭಿಸಲಿದೆ ಎಂದು ಹೇಳಿದರು.

ಬಾಳೆಲೆಯಲ್ಲಿ ನಡೆಯುವ ಕ್ರಿಕೆಟ್ ಹಾಗೂ ಹಾಕಿ ಟೂರ್ನಿಯ ಸಂದರ್ಭದಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಕೊಡವ ಸಮಾಜದ ಸಭಾಂಗಣವನ್ನು ಉಚಿತವಾಗಿ ನೀಡಲಾಗುವದು ಎಂದರು.

ಕೊಡವ ಕ್ರಿಕೆಟ್ ಅಕಾಡೆಮಿ ಅಧ್ಯಕ್ಷ ಕೀತಿಯಂಡ ಕಾರ್ಸನ್ ಕಾರ್ಯಪ್ಪ ಮಾತನಾಡಿ, ಇದುವರೆಗಿನ ವಿವಿಧ ಕೌಟುಂಬಿಕ ಟೂರ್ನಿಯಲ್ಲಿ 228 ತಂಡಗಳು ಪಾಲ್ಗೊಂಡಿವೆ. ಬಾಳೆಲೆಯಲ್ಲಿ ನಡೆಯಲಿರುವ ಅಳೆಮೇಂಗಡ ಕಪ್ ಟೂರ್ನಿಯಲ್ಲಿ ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಳೆಮೇಂಗಡ ಕುಟುಂಬಸ್ಥರು ಅತ್ಯಂತ ಶಿಸ್ತುಬದ್ಧ ಹಾಗೂ ಕ್ರಿಯಾಶೀಲವಾಗಿ ಪಂದ್ಯಾವಳಿ ಆಯೋಜಿಸಲು ಉತ್ಸುಕರಾಗಿದ್ದಾರೆ ಎಂದರು.

ಅಳಮೇಂಗಡ ಕುಟುಂಬದ ಹಿರಿಯರಾದ ಅಳೆಮೇಂಗಡ ಮುದ್ದಪ್ಪ, 2008ರಲ್ಲಿ ಅಳೆಮೇಂಗಡ ಕೌಟುಂಬಿಕ ಕಪ್ ಟೂರ್ನಿ ಅಧ್ಯಕ್ಷ ರಾಗಿದ್ದ ಅಳಮೇಂಗಡ ಪೊನ್ನಪ್ಪ, ಹಿರಿಯರಾದ ಅಳೆಮೇಂಗಡ ವಿಠಲ, ಕುಟುಂಬದ ಅಧ್ಯಕ್ಷ ಅಳೆಮೇಂಗಡ ವಿವೇಕ್, ಕ್ರಿಕೆಟ್ ಟೂರ್ನಿ ಕಾರ್ಯದರ್ಶಿ ಮೋಹನ್ ಚಂಗಪ್ಪ, ಕಾರ್ಯಪ್ಪ ಹಾಜರಿದ್ದರು. ಪೊನ್ನಂಪೇಟೆ ಹಳ್ಳಿಗಟ್ಟು ಸಿಐಟಿ ಕಾಲೇಜಿನ ಸ್ಮಾರ್ಟ್ ಕೂರ್ಗ್ ತಂಡದ ಮಾರಮಾಡ ಸೋಮಣ್ಣ, ಅಳಮೇಂಗಡ ಕ್ರಿಕೆಟ್ ಟೂರ್ನಿಯ ವೆಬ್‍ಸೈಟ್ ವಿನ್ಯಾಸಗೊಳಿಸಿದ್ದರು. ಅಳೆಮೇಂಗಡ ಮಾಳವಿಕ ರಮೇಶ್ ಲಾಂಛನ ವಿನ್ಯಾಸಗೊಳಿಸಿದ್ದರು. ಕಾಂಡೇರ ಡಾನ್ ಕುಶಾಲಪ್ಪ ನಿರೂಪಿಸಿದರು.