ಮಡಿಕೇರಿ, ನ.23 : ಐಗೂರಿನ ಮಸೀದಿಯಲ್ಲಿದ್ದ ಕುರ್ಆನ್ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಶಾಸಕರುಗಳು ಸ್ಥಳ ಪರಿಶೀಲನೆ ಮಾಡುವ ಸೌಜನ್ಯವನ್ನು ಕೂಡ ತೋರಿಲ್ಲವೆಂದು ವಿಷಾದಿಸಿರುವ ಕೊಡಗು ಮುಸ್ಲಿಂ ಯುವ ಒಕ್ಕೂಟ ಬಿಜೆಪಿಗೆ ಅಲ್ಪ ಸಂಖ್ಯಾತರ ಮತ ಬೇಡವೆಂದಾದರೆ ಬಹಿರಂಗವಾಗಿ ಘೋಷಣೆ ಮಾಡಲಿ ಎಂದು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಕಾರ್ಯದರ್ಶಿ ಕೆ.ಅಲ್ತಾಫ್, ಐಗೂರಿನಲ್ಲಿ ನಡೆದ ಕುರ್ಆನ್ ಹಾಗೂ ಕಾರಿಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಗಳನ್ನು ಮುಂದಿನ 15 ದಿನಗಳ ಒಳಗೆ ಬಂಧಿಸದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಆರಂಭಿಸುವದಾಗಿ ಎಚ್ಚರಿಕೆ ನೀಡಿದರು.
ಎರಡೂ ಪ್ರಕರಣಗಳ ಬಗ್ಗೆ ಜಿಲ್ಲಾ ಅಪರಾಧ ಪತ್ತೆದಳ ಪಕ್ಷಾತೀತವಾಗಿ ತನಿಖೆ ನಡೆಸಿದಲ್ಲಿ ಆರೋಪಿಗಳ ಬಂಧನ ಶೀಘ್ರವಾಗಿ ಆಗಲಿದೆ ಎಂದು ಅಭಿಪ್ರಾಯಪಟ್ಟರು. ತನಿಖೆ ಸಂದರ್ಭ ರಾಜಕೀಯ ಪ್ರಭಾವ ಬಳಕೆಯಾಗುವ ಸಾಧ್ಯತೆ ಇದೆಯೆಂದು ಸಂಶಯ ವ್ಯಕ್ತಪಡಿಸಿದ ಅಲ್ತಾಫ್ ಕುರ್ಆನ್ಗೆ ಬೆಂಕಿ ಹಾಕಿದ ನಂತರ ಪದ್ಮನಾಭ ಅವರ ಕಾರಿಗೆ ಬೆಂಕಿ ಹಚ್ಚಲಾಗಿದ್ದು, ಈ ಪ್ರಕರಣದ ಹಿಂದೆ ಕುರ್ಆನ್ ಪ್ರಕರಣದ ಹಾದಿ ತಪ್ಪಿಸುವ ಯತ್ನವಿದೆಯೆಂದು ಆರೋಪಿಸಿದರು. ಆರೋಪಿಗಳನ್ನು ಇಲ್ಲಿಯವರೆಗೆ ಬಂಧಿಸದೆ ಇರುವ ಬಗ್ಗೆ ಬೇಸರ ವ್ಯಕಪಡಿಸಿದ ಅವರು, ಈ ಹಿಂದೆ ಜಿಲ್ಲೆಯ ವಿವಿಧೆಡೆ ಮಸೀದಿಗಳ ಮೇಲೆ ನಡೆದ ಧಾಳಿಯ ಆರೋಪಿಗಳÀನ್ನು ಬಂಧಿಸದಿರುವದೆ ಇಂತಹ ಘಟನೆಗಳು ಮರುಕಳಿಸಲು ಕಾರಣವೆಂದು ಅಭಿಪ್ರಾಯಪಟ್ಟರು.
ಕಂದಾಯ ಇಲಾಖೆÉಯ ಎಡಿಎಲ್ಆರ್ ಷಂಶುದ್ದೀನ್ ಅವರು ಪ್ರಾಮಾಣಿಕವಾಗಿ ಸಂವಿಧಾನ ಬದ್ಧವಾಗಿ ಕಾರ್ಯನಿರ್ವ ಹಿಸುತ್ತಿದ್ದಾರೆ. ಆದರೆ, ಕೆಲವರು ಇಲ್ಲಿಯೂ ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಅಲ್ತಾಫ್