ಮಡಿಕೇರಿ, ಡಿ.20 : ದಿಡ್ಡಳ್ಳಿಯಲ್ಲಿ ಆದಿವಾಸಿಗಳನ್ನು ಬೀದಿ ಪಾಲು ಮಾಡಲು ಕಾರಣಕರ್ತರಾದ ಅರಣ್ಯಾ ಧಿಕಾರಿಗಳನ್ನು ಅಮಾನತು ಗೊಳಿಸಬೇಕೆಂದು ಭಾರತ ಕಮ್ಯೂನಿಸ್ಟ್ ಪಕ್ಷ, ವೆಲ್‍ಫೇರ್ ಫಾರ್ಟಿ ಆಫ್ ಇಂಡಿಯಾ ಹಾಗೂ ದಲಿತ ಸಂಘರ್ಷ ಸಮಿತಿ ಆದಿವಾಸಿ ಮಹಾಸಭಾ ಒತ್ತಾಯಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಪಿಐಎಂ ಪಕ್ಷದ ಮುಖಂಡ ಕೆ.ವಿ. ಸುನಿಲ್, ದಿಡ್ಡಳ್ಳಿ ಪ್ರಕರಣವನ್ನು ಖಂಡಿಸಿದರು. ಜಿಲ್ಲೆÉಯಲ್ಲಿ ನಿರಾಶ್ರಿತರ ಸಂಖ್ಯೆ ಬೆರಳೆಣಿಕೆಯಷ್ಟು ಇದೆಯೆಂದು ಅಧಿಕಾರಿಗಳು ಸುಳ್ಳು ವರದಿಯನ್ನು ನೀಡುತ್ತಿದ್ದಾರೆ. ಜಿಲ್ಲೆಯ ಶಾಸಕರಾದಿಯಾಗಿ ಬಹುತೇಕ ಎಲ್ಲಾ ಜನ ಪ್ರತಿನಿಧಿಗಳು ಬಿಜೆಪಿಯವ ರಾಗಿದ್ದು, ದುರ್ಬಲ ವರ್ಗ ಆದಿವಾಸಿ ಸಮುದಾಯದ ಬಗ್ಗೆ ಯಾವದೇ ಕಾಳಜಿ ತೋರುತ್ತಿಲ್ಲ. ಜಿಲ್ಲಾಡಳಿತ ಸರ್ಕಾರಕ್ಕೆ ಸುಳ್ಳು ಮಾಹಿತಿಯನ್ನು ನೀಡುತ್ತಿರು ವದರಿಂದಲೆ ಗಿರಿಜನರು ನಿರಾಶ್ರಿತ ರಾಗುತ್ತಿರುವದೆಂದು ಆರೋಪಿಸಿದರು.
ಜಿಲ್ಲೆಯಲ್ಲಿರುವ ಎಲ್ಲಾ ಆದಿವಾಸಿಗಳು ಹಾಗೂ ಕಾರ್ಮಿಕರ ಸಮೀಕ್ಷೆ ನಡೆಸಿ ನಿವೇಶನ ರಹಿತರಿಗೆ ನಿವೇಶನ ನೀಡಬೇಕು, ದಿಡ್ಡಳ್ಳಿಯಲ್ಲಿ ಗುಡಿಸಲು ತೆರವು ಕಾರ್ಯಾಚರಣೆ ಯಿಂದ ಉಂಟಾದ ನಷ್ಟವನ್ನು ಅರಣ್ಯ ಅಧಿಕಾರಿಗಳಿಂದಲೇ ಭರಿಸಬೇಕು, ಭ್ರಷ್ಟಾಚಾರದ ಆರೋಪ ಎದುರಿಸುತ್ತಿ ರುವ ಅಧಿಕಾರಿಗಳನ್ನು ತಕ್ಷಣ ವರ್ಗಾವಣೆ ಮಾಡಬೇಕೆಂದು ಸುನಿಲ್ ಒತ್ತಾಯಿಸಿದರು. ವೆಲ್‍ಫೇರ್ ಪಾರ್ಟಿ ಆಫ್ ಇಂಡಿಯಾದ ಕಾರ್ಯದರ್ಶಿ ಕೆ.ಟಿ. ಬಷೀರ್ ಮಾತನಾಡಿ, ಗಿರಿಜನರಿಂದ ಹಣ ಪಡೆದಿರುವ ಆರೋಪ ಎದುರಿಸುತ್ತಿರುವ ಅರಣ್ಯ ಅಧಿಕಾರಿಗಳನ್ನು ಅಮಾನತು ಗೊಳಿಸಬೇಕು ಮತ್ತು ಪ್ರಕರಣದ ಕುರಿತು ಸೂಕ್ತ ತನಿಖೆÉ ನಡೆಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಸಿಪಿಐ ಪಕ್ಷದ ಮುಖಂಡರಾದ ಎಂ.ಹೆಚ್. ನವಲಗುಂದ, ಸಹ ಸಂಚಾಲಕ ಬಿ.ಆರ್. ರಜನೀಕಾಂತ್ ಹಾಗೂ ಆದಿವಾಸಿ ಮಹಾಸಭಾದ ಪ್ರಮುಖ ಪಿ.ಎನ್. ಮುತ್ತ ಉಪಸ್ಥಿತರಿದ್ದರು.