ನಾಪೋಕ್ಲು, ಜು. 7: ಅಖಿಲ ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘದ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಅಮ್ಮಕೊಡವ ಜನಾಂಗದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪ್ರೋತ್ಸಾಹ ಧನ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

8ನೇ ತರಗತಿ ಮೇಲ್ಪಟ್ಟ ಜನಾಂಗದ ವಿದ್ಯಾರ್ಥಿಗಳು ಅಂಕಪಟ್ಟಿ, ವ್ಯಾಸಂಗದ ಪ್ರಮಾಣ ಪತ್ರ ಅಥವಾ ಶುಲ್ಕ ಪಾವತಿಸಿದ ರಸೀತಿಯ ನಕಲು ಪತ್ರದೊಂದಿಗೆ ಆಗಸ್ಟ್ 15 ರೊಳಗಾಗಿ ಆಯಾ ಗ್ರಾಮದ ಸಂಘದ ಪ್ರತಿನಿಧಿಗಳಾದ ಎನ್.ಕೆ. ಉಮೇಶ್ ಕೇಚಮ್ಮಯ್ಯ, ಗೌರವ ಕಾರ್ಯದರ್ಶಿ, ಅಮ್ಮಕೊಡವ ವಿದ್ಯಾಭಿವೃದ್ಧಿ ಸಂಘ, ಪೊನ್ನಂಪೇಟೆ, ಕುಟ್ಟಂದಿ ಗ್ರಾಮ ಮತ್ತು ಅಂಚೆ. ಮೊ.ಸಂಖ್ಯೆ: 9480425773 ಅಥವಾ ಸಿ.ಜಿ. ಪ್ರಸಾದ್ ಛಾಪಾ ಕಾಗದ ಬರಹಗಾರರು, ಕಾರ್ ಸ್ಟ್ಯಾಂಡ್ ಎದುರು, ಪೊನ್ನಂಪೇಟೆ. ಮೊ. 9845646340. ಇವರುಗಳನ್ನು ಸಂಪರ್ಕಿಸಬಹುದಾಗಿದೆ.