ನವೆಂಬರ್ 8ರಂದು ಸಂಜೆ 8 ಗಂಟೆಗೆ ಮಾಡಿದ ಭಾಷಣ ಇಡೀ ದೇಶದಲ್ಲಿ ಅಲ್ಲೋಲಕಲ್ಲೋಲವೆಬ್ಬಿಸಿತ್ತು.ನೋಟು ನಿಷೇಧದಿಂದ ದೇಶದ ಜನತೆ, ಅದರಲ್ಲೂ ಬಡವರು, ಗ್ರಾಮೀಣ ಪ್ರದೇಶದವರು ಸಾಕಷ್ಟು ಸಂಕಷ್ಟಕ್ಕೀಡಾಗಿದ್ದರೂ, ಅಪನಗದೀಕರಣ 50ನೇ ದಿನ ತಲಪುತ್ತಿದ್ದಂತೆ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ಮೋದಿಯವರು ಈಗೇನು ಕಲರವ ಎಬ್ಬಿಸಲಿದ್ದಾರೆ ಎಂಬದು ಸಾಕಷ್ಟು ಕುತೂಹಲಕ್ಕೆ ಕಾರಣ ವಾಗಿತ್ತು. ಅಪನಗದೀಕರಣ ಬಳಿಕದ ತೊಂದರೆಗಳನ್ನು ತಾಳ್ಮೆಯಿಂದ ಸಹಿಸಿ ಕೊಂಡು ದೇಶದ ಉಜ್ವಲ ಭವಿಷ್ಯಕ್ಕಾಗಿ ಕೈ ಜೋಡಿಸಿದ ಕೋಟ್ಯಂತರ ಜನರಿಗೆ ಪ್ರಧಾನಿ ಮೋದಿ ಅಂತರಾಳದ ಕೃತಜ್ಞತೆ ಸಲ್ಲಿಸಿದರು.