*ಗೋಣಿಕೊಪ್ಪಲು, ಜು. 29: ಬೈಕ್, ಕಾರು ನಡುವಿನ ಅಪಘಾತದಲ್ಲಿ ಬೈಕಿನ ಹಿಂಬದಿ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.
ಇಲ್ಲಿನ ಹರಿಶ್ಚಂದ್ರಪುರ ನಿವಾಸಿ ಪ್ರದೀಪ್ (35) ಮೃತ ದುರ್ದೈವಿ.
ಬುಧವಾರ ರಾತ್ರಿ 11.30ರ ಸಮಯ ತಿತಿಮತಿ ಸಮೀಪದ ಮಜ್ಜಿಗೆ ಹಳ್ಳ ಮೈಸೂರು ಮುಖ್ಯ ರಸ್ತೆಯಲ್ಲಿ ಘಟನೆ ನಡೆದಿದೆ. ಪ್ರದೀಪ್ ಹಾಗೂ ಸುಭಾಷ್ ಬೈಕ್ (ಕೆಎ 45- ಕ್ಯೂ 6412)ನಲ್ಲಿ ಪಂಚವಳ್ಳಿಯಿಂದ ಗೋಣಿಕೊಪ್ಪಕ್ಕೆ ಬರುತ್ತಿದ್ದ ಸಂದರ್ಭ ಎದುರಿಗೆ ಬಂದ (ಕೆಎ 41 4500) ಸ್ಕೋಡ ಕಾರಿಗೆ ಡಿಕ್ಕಿ ಹೊಡೆದಿದೆ. ಬೈಕನ್ನು ಮೃತನ ಸ್ನೇಹಿತ ಸುಭಾಷ್ ಚಾಲನೆ ಮಾಡುತ್ತಿದ್ದ. ಹಿಂಬದಿ ಕುಳಿತಿದ್ದ ಪ್ರದೀಪ್ ಹೆಲ್ಮೆಟ್ ಧರಿಸದ ಕಾರಣ ತಲೆ ರಸ್ತೆಗೆ ಬಡಿದು ತೀವ್ರ ಪೆಟ್ಟಾಗಿದ್ದು, ಪ್ರದೀಪ್‍ನನ್ನು ಗೋಣಿಕೊಪ್ಪಲು ಸಮುದಾಯ ಆರೋಗ್ಯ ಕೇಂದ್ರಕ್ಕೆ ತರುವ ಸಂದರ್ಭ ಮೃತಪಟ್ಟಿದ್ದಾನೆ. ಕೆ.ಹೋಸಳ್ಳಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದು, ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ಸಂದರ್ಭ ಘಟನೆ ನಡೆದಿದ್ದು, ಮೃತ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.