ಮಡಿಕೇರಿ, ಸೆ. 18: ರಾಜ್ಯ ಅನುದಾನಿತ ನೌಕರರ ಸಂಘದ ಅಧ್ಯಕ್ಷ ಗೋಪಿನಾಥ್ ಅವರ ಸಮ್ಮುಖದಲ್ಲಿ ಜಿಲ್ಲಾ ಸಂಘದ ಸಭೆಯು ಚಿನ್ಮಯಿ ಗೆಸ್ಟ್ ಹೌಸ್ನಲ್ಲಿ ನಡೆಯಿತು. ಈ ಸಂದರ್ಭ ಅಧ್ಯಕ್ಷರು ಮೂರು ತಾಲೂಕಿನ ಸಂಘದ ಚಟುವಟಿಕೆಗಳ ಬಗ್ಗೆ ವಿವರವನ್ನು ಪಡೆದು ನಂತರ ಮಾತನಾಡುತ್ತ ಜಿಲ್ಲೆಯಲ್ಲಿ ಸಂಘ ಅನುದಾನಿತ ಶಿಕ್ಷಕರ ಅಭಿವೃದ್ಧಿಗೆ ಶ್ರಮಿಸಬೇಕು. ರಾಜ್ಯದಲ್ಲಿ ನಾವು ಅನುದಾನಿತ ನೌಕರರ ಅನೇಕ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದು, ಜ್ಯೋತಿ ಸಂಜೀವಿನಿ ಅತಿ ಶೀಘ್ರದಲ್ಲೆ ಅನುದಾನಿತ ನೌಕರರಿಗೂ ದೊರೆಯುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ ಎಂದರು.
ಈ ಸಂದರ್ಭ ಕಾಲ್ಪನಿಕ ವೇತನ ಬಗೆಯು ಚರ್ಚೆ ನಡೆಯಿತು. ಜಿಲ್ಲೆಯಲ್ಲಿ ಅನುದಾನಿತ ನೌಕರರ ಜಿಲ್ಲಾ ಸಮ್ಮೇಳನ ನಡೆಸಲು ಸೂಚಿಸಿದರು. ಸಭೆಯಲ್ಲಿ ಅದಕ್ಕೆ ಸರ್ವಾನುಮತದ ಒಪ್ಪಿಗೆ ದೊರೆಯಿತು. ಸಭೆಯಲ್ಲಿ ಜಿಲ್ಲಾಧ್ಯಕ್ಷ ಡಿ.ಎ ಮೋಹನ್, ಕಾರ್ಯದರ್ಶಿ ಪ್ರಭು ಕುಮಾರ್, ಮೂರು ತಾಲೂಕಿನ ಅಧ್ಯಕ್ಷರುಗಳು, ಕಾರ್ಯಕಾರಿ ಮಂಡಳಿ ಸದಸ್ಯರು, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷ ಜೋಯಪ್ಪ ಉಪಸ್ಥಿತರಿದ್ದರು.