ಮಡಿಕೇರಿ, ಸೆ. 10: ಪೂರ್ವ ನಿಗದಿತ ಕಾರ್ಯ ಕ್ರಮಗಳಲ್ಲಿ ಅನಿವಾರ್ಯವಾಗಿ ಭಾಗವಹಿಸಲೇಬೇಕಾದುದರಿಂದ ಮಡಿಕೇರಿ ನಗರಸಭಾ ಅಧ್ಯಕ್ಷ - ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ಲಿಖಿತ ಹೇಳಿಕೆ ನೀಡಿದ್ದಾರೆ.ಕೊಡಗಿಗೆ ರೈಲ್ವೆ ಮಾರ್ಗ ಯೋಜನೆಯ ರೂಪುರೇಷೆ ನಿರ್ಧರಿ ಸುವಲ್ಲಿ ಅತ್ಯಂತ ಮಹತ್ವದ್ದಾಗಿದ್ದ ರೈಲ್ವೆ ಸಲಹಾ ಸಮಿತಿ ಸಭೆಯಲ್ಲಿ ಸಂಸದನಾಗಿ ಪಾಲ್ಗೊಂಡು ಕೊಡಗಿಗೆ ರೈಲ್ವೆ ಮಾರ್ಗ ಯೋಜನೆ ವಿಳಂಬವಾಗದಂತೆ ಗಮನಹರಿ ಸುವದು ತನ್ನ ಕರ್ತವ್ಯವಾಗಿತ್ತು. ಹೀಗಾಗಿ ಪೂರ್ವ ನಿಗಧಿಯಾದಂತೆ ತಾ. 8 ರಂದು ತಾನು ಹುಬ್ಬಳ್ಳಿಗೆ ತೆರಳಿದ್ದೆ. ತಾ.9 ರಂದು ಬಿಜೆಪಿ ಮುಖಂಡ ಜಗದೀಶ್ ಶೆಟ್ಟರ್ ಅವರೊಂದಿಗೂ ಪೂರ್ವ ನಿಗಧಿತ ಸಭೆಯಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನಾಗಿ ಅದರಲ್ಲಿ ಭಾಗವಹಿಸುವದು ಅನಿವಾರ್ಯ ವಾಗಿತ್ತು. ಮಡಿಕೇರಿ ನಗರಸಭೆ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ಸಂಬಂಧಿತ ಮಾಹಿತಿ ಮತ್ತು ತನ್ನ ಓಟಿನ ಅನಿವಾರ್ಯತೆಯ ವಿಚಾರ ತÀನಗೆ ಮೊದಲೇ ಸಿಗದಿದ್ದ ಕಾರಣ ಈ ಸನ್ನಿವೇಶವನ್ನು ನಿರ್ಮಾಣ ಮಾಡಿತ್ತು. ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಕೊನೇ
(ಮೊದಲ ಪುಟದಿಂದ) ಕ್ಷಣದಲ್ಲಿ ತನಗೆ ಚುನಾವಣೆಗೆ ಬರುವಂತೆ ಕೇಳಿಕೊಂಡರು. ಆದರೆ, ಅದಾಗಲೇ ಪೂರ್ವ ನಿಗಧಿತ ಕಾರ್ಯಕ್ರಮ, ರಾಜ್ಯ ನಾಯಕರ ಸಭೆಯಲ್ಲಿ ಪಾಲ್ಗೊಳ್ಳಲೇಬೇಕಾದ ಅನಿವಾರ್ಯತೆ ಹಿನ್ನಲೆಯಲ್ಲಿ ಮೊದಲೇ ಕೊಡಗು ಜಿಲ್ಲೆಯ ಬಿಜೆಪಿ ಮುಖಂಡರಿಗೆ ಮಾಹಿತಿ ನೀಡಿದ್ದಂತೆ ತಾನು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ನಗರಸಭಾ ಸದಸ್ಯೆ ಅನಿತಾ ಪೂವಯ್ಯ ಅವರ ಬಗ್ಗೆ ವೈಯಕ್ತಿಕವಾಗಿ ತನಗೂ ಅಪಾರ ಗೌರವವಿದ್ದು, ಅವರಿಗೆ ತನ್ನ ಸಂದಿಗ್ಧತೆಯಿಂದಾಗಿ ಮಡಿಕೇರಿ ನಗರ ಸಭೆ ಅಧ್ಯಕ್ಷರಾಗುವ ಅವಕಾಶ ಕೈ ಜಾರಿ ಹೋಗಿತ್ತಲ್ಲವೇ ಎಂಬ ವೈಯಕ್ತಿಕ ನೋವು ತನಗೂ ಇದೆ ಹಾಗೂ ತನ್ನ ಗೈರುಹಾಜರಿಗೆ ಅಪಾರ್ಥ ಕಲ್ಪಿಸಿಕೊಳ್ಳುವ ಅಗತ್ಯವಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.