ಸುಂಟಿಕೊಪ್ಪ, ಜೂ. 18: ನಾಕೂರು-ಶಿರಂಗಾಲ ವ್ಯಾಪ್ತಿಯಲ್ಲಿ ಕಂಡು ಬಂದ ಅಪರಿಚಿತ ಮಹಿಳೆಯನ್ನು ಪೊಲೀಸರ ಮುಖಾಂತರ ಕೂಡಿಗೆಯ ಶಕ್ತಿ ವೃದ್ಧಾಶ್ರಮಕ್ಕೆ ಸೇರ್ಪಡೆ ಮಾಡಲಾಯಿತು.

ಇಲ್ಲಿಗೆ ಸಮೀಪದ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನ್‍ಬೈಲ್ ಗ್ರಾಮದಲ್ಲಿ ಕಳೆದ 3 ದಿನಗಳಿಂದ ಮಹಿಳೆಯೋರ್ವಳು ಅನಾಥವಾಗಿ ಅಲೆದಾಡುತ್ತಿರುವದನ್ನು ಗಮನಿಸಿದ ಗ್ರಾಮಸ್ಥರು ಗ್ರಾಮ ಪಂಚಾಯಿತಿಯ ಗಮನಕ್ಕೆ ತಂದಿದ್ದು ಕೂಡಲೇ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಂಜನಿ ಹಾಗೂ ಉಪಾಧ್ಯಕ್ಷೆ ಯಶೋದ ಅವರು ಮಹಿಳೆಯ ಪೂರ್ವಪರ ವಿಚಾರಿಸಿದಾಗ ಕೊಂಚ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದುದನ್ನು ಕಂಡು ಸುಂಟಿಕೊಪ್ಪ ಠಾಣೆಗೆ ಕರೆತಂದು ಪೊಲೀಸರ ಮುಖಾಂತರ ಮಹಿಳೆಯ ಪೂರ್ವಾಪರ ವಿಚಾರಿಸಲಾಗಿ ಸಾಲಿಗ್ರಾಮದ ನಿವಾಸಿ ಪುಟ್ಟಮ್ಮ ಎಂದು ತಿಳಿದು ಬಂದಿದ್ದು, ಅಂದಾಜು 65 ರಿಂದ 70 ವಯೋಮಾನದ ವೃದ್ಧೆಯಾಗಿದ್ದು, ಪೊಲೀಸರು ಹಾಗೂ ನಾಕೂರು-ಶಿರಂಗಾಲ ಗ್ರಾಮ ಪಂಚಾಯಿತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಕುಶಾಲನಗರ ಸಮೀಪದ ಕೂಡಿಗೆ ಶಕ್ತಿ ವೃದ್ಧಾಶ್ರಮಕ್ಕೆ ಸೇರ್ಪಡೆಗೊಳಿಸುವ ಮೂಲಕ ಮಾನವೀಯತೆ ಮೆರೆದರು.