ಶ್ರೀಮಂಗಲ, ಜು. 23: ವೀರಾಜಪೇಟೆ ತಾಲೂಕು, ಬಿ.ಜೆ.ಪಿ. ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿರುವ ಟಿ. ಶೆಟ್ಟಿಗೇರಿಯ ಕುಂಞಂಗಡ ಅರುಣ್ ಭೀಮಯ್ಯ ಹಾಗೂ ಶ್ರೀಮಂಗಲ ಕ್ಷೇತ್ರದಿಂದ ತಾ.ಪಂ. ಸದಸ್ಯರಾಗಿ ಅಯ್ಕೆಯಾಗಿರುವ ಸರೋಜ ಅವರನ್ನು ಟಿ. ಶೆಟ್ಟಿಗೇರಿಯಲ್ಲಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಸನ್ಮಾನಿಸಿತು.

ಈ ಸಂದರ್ಭ ಟಿ. ಶೆಟ್ಟಿಗೇರಿ ಬಿ.ಜೆ.ಪಿ. ಸ್ಥಾನೀಯ ಸಮಿತಿ ಅಧ್ಯಕ್ಷ ಕಟ್ಟೇರ ಈಶ್ವರ, ಉಪಾಧ್ಯಕ್ಷ ಮಚ್ಚಮಾಡ ಶ್ಯಾಂ, ಕಾರ್ಯದರ್ಶಿ ಮಾಣೀರ ಉಮೇಶ, ಗ್ರಾ.ಪಂ. ಅಧ್ಯಕ್ಷ ಮಚ್ಚಮಾಡ ಸುಮನ್, ಉಪಾಧ್ಯಕ್ಷೆ ಯಶೋದ, ಸದಸ್ಯರಾದ ಉಳುವಂಗಡ ದಮಯಂತಿ, ಬಾಚೀರ ಶೈಲ, ಕಂದ, ಹರೀಶ್, ಗೌರಿ, ಕರುಂಬಯ್ಯ, ತಡಿಯಂಗಡ ಮೀನಾ, ಅಯ್ಯಪ್ಪ ಹಾಗೂ ಹಿರಿಯ ಕಾರ್ಯಕರ್ತರಾದ ಅರುಣ, ರಮೇಶ್, ತಮ್ಮುಣಿ, ಕಾರ್ಯಪ್ಪ ಮತ್ತಿತರರು ಹಾಜರಿದ್ದರು.