ಗೋಣಿಕೊಪ್ಪಲು, ನ. 16: ಕನಿಷ್ಟ ಆರು ತಿಂಗಳಿಗೊಮ್ಮೆ ನಡೆಯಬೇಕಿದ್ದ ಗ್ರಾಮ ಸಭೆ ವರ್ಷದ ಬಳಿಕ ಇಂದು ನಡೆಯಬೇಕಿತ್ತು. ಆದರೆ ಪ್ರಮುಖ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆ ಇಂದಿನ ಗ್ರಾಮ ಸಭೆ ಮುಂದೂಡಲಾಯಿತು.ಇಲ್ಲಿನ ಗ್ರಾಮಸಭೆಯ ನೋಡೆಲ್ ಅಧಿಕಾರಿಯಾಗಿ ಜಿ.ಪಂ. ಇಂಜಿನಿಯರಿಂಗ್ ವಿಭಾಗದ ಪೂಣಚ್ಚ ಅವರು ಪಾಲ್ಗೊಳ್ಳಬೇಕಿತ್ತು. ಆದರೆ ಅನಾರೋಗ್ಯದ ನಿಮಿತ್ತ ಪಾಲ್ಗೊಳ್ಳಲಿಲ್ಲ. ನೋಡೆಲ್ ಅಧಿಕಾರಿ ಇಲ್ಲದೆ ಗ್ರಾಮ ಸಭೆ ನಡೆಸಲು ಗ್ರಾಮಸ್ಥರು ಹಿಂದೇಟು ಹಾಕಿದರು. ಈ ಹಂತದಲ್ಲಿ ಗ್ರಾ.ಪಂ. ಅಧ್ಯಕ್ಷತೆ ಸೆಲ್ವಿ ಅಧ್ಯಕ್ಷತೆಯಲ್ಲಿ ನಡೆಯಬೇಕಿದ್ದ ಪ್ರಥಮ ಗ್ರಾಮಸಭೆಗೆ ತಾಲೂಕು ಪಂಚಾಯಿತಿ ಇಓ ಫೆಡ್ನೇಕರ್ ಅವರನ್ನು ಕರೆಸಲು ತೀರ್ಮಾನಿಸಲಾಯಿತು. ಆದರೆ, ಪೆಡ್ನೇಕರ್ ಜೀಪ್‍ಗೆ ಚಾಲಕನಿಲ್ಲ ಎಂಬ ಉತ್ತರ ಬಂತು.

ಒಟ್ಟಾರೆ ಒಂದು ಗ್ರಾಮಸಭೆ ಸುಸೂತ್ರವಾಗಿ ನಡೆಯಲು ಪ್ರಮುಖವಾಗಿ ಕಂದಾಯ ಇಲಾಖೆ, ಅಹಾರ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆ ಯಾದರೂ ಇರಬೇಕಿತ್ತು. ಆದರೆ, ಹಾಜರಾಗಿದ್ದದು ಕೃಷಿ ಇಲಾಖೆ, ತೋಟಗಾರಿಕಾ ಹಾಗೂ ಪಶು ವೈದ್ಯಕೀಯ ಇಲಾಖೆ ಇತ್ಯಾದಿ. ಗೋಣಿಕೊಪ್ಪಲು ತಾಲೂಕಿನ ಪ್ರಮುಖ ವಾಣಿಜ್ಯ ನಗರಿಯಾಗಿದ್ದು, ಇಲ್ಲಿ ಕೃಷಿ, ತೋಟಗಾರಿಕೆ, ಪಶುಪಾಲನೆಗೆ ಅಷ್ಟಾಗಿ ಅವಕಾಶವಿಲ್ಲ.

ಅಧ್ಯಕ್ಷೆ ಸೆಲ್ವಿ ಹಾಗೂ ಪಿಡಿಓ ಚಂದ್ರಮೌಳಿ ಅವರು ಗ್ರಾಮಸ್ಥರ ಒತ್ತಡದಿಂದಾಗಿ ಸುಮಾರು ಎರಡು ಗಂಟೆ ಅಧಿಕಾರಿಗಳಿಗೆ ಫೆÇೀನ್ ಕರೆ ಮಾಡುವದರಲ್ಲಿಯೆ ಕಳೆದರು. ಯಾವದೇ ಪ್ರಯೋಜನವಾಗಲಿಲ್ಲ. ಗೋಣಿಕೊಪ್ಪಲು ನಗರ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಕುಟ್ಟಪ್ಪ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಕೆ.ಎಂ.ಗಣೇಶ್ ತಿಮ್ಮಯ್ಯ, ಕಾದಿರ ಪೆÇನ್ನಪ್ಪ, ಗೋಣಿಕೊಪ್ಪಲು ಚೇಂಬರ್ ಆಫ್ ಕಾಮರ್ಸ್ ಉಪಾಧ್ಯಕ್ಷ ಪೆÇನ್ನಿಮಾಡ ನಂಜಪ್ಪ ಮುಂತಾದವರು ಗ್ರಾಮಸಭೆ ಮುಂದೂಡಲು ಮನವಿ ಮಾಡಿದರು.

ಒಟ್ಟು 20 ಸ್ಥಾನ ಬಲದ ಗೋಣಿಕೊಪ್ಪಲು ಗ್ರಾಮಸಭೆಗೆ 3 ಗ್ರಾ.ಪಂ. ಸದಸ್ಯರು ಗೈರುಹಾಜರಾಗಿ ದ್ದರು. ಅಲ್ಲದೆ ಇಲ್ಲಿನ ಹಳೇ ಗ್ರಾ.ಪಂ. ಸಭಾಂಗಣ ಸುಣ್ಣ-ಬಣ್ಣವಿಲ್ಲದೆ, ಧೂಳಿನಿಂದ ಕೂಡಿದ್ದು, ಸಾರ್ವಜನಿಕರ ಉಸಿರಾಟಕ್ಕೂ ತೊಂದರೆ ಉಂಟಾಗು ತ್ತಿದೆ. 20 ಗ್ರಾ.ಪಂ. ಸದಸ್ಯರಿಗೆ ಕನಿಷ್ಟ ತಲಾ 50 ಗ್ರಾಮಸ್ಥರನ್ನು ಸಭೆಗೆ ಕರೆತರಲು ಸಾಧ್ಯವಿದ್ದು, ಈ ಬಾರಿ ಕೇವಲ ನೂರಕ್ಕೂ ಕಡಿಮೆ ಗ್ರಾಮಸ್ಥರು ಹಾಜರಾಗಿದ್ದಾರೆ. ಕೇವಲ ಎರಡು-ಮೂರು ದಿನದಲ್ಲಿ ಪ್ರಚಾರ ಕಾರ್ಯ ನಡೆಸಿದ ಹಿನ್ನೆಲೆ ಹೆಚ್ಚಿನ ಗ್ರಾಮಸ್ಥರು ಭಾಗವಹಿಸಿಲ್ಲ. ಆದ್ದರಿಂದ ಮುಂದಿನ ಗ್ರಾಮ ಸಭೆಯನ್ನು ವಿಶಾಲವಾದ ಸಭಾಂಗಣದಲ್ಲಿ ನಡೆಸುವ ನಿಟ್ಟಿನಲ್ಲಿ ಒತ್ತಾಯಿಸಿದ ಗ್ರಾಮಸ್ಥರು ಸಭೆ ರದ್ದು ಪಡಿಸಲು ಒತ್ತಾಯಿಸಿದರು.

ಪಿಡಿಓ ಚಂದ್ರಮೌಳಿ ಎಲ್ಲಾ ಇಲಾಖೆಗೂ ಪತ್ರ ಬರೆದಿದ್ದರಾದರೂ ಪ್ರಮುಖ ಅಧಿಕಾರಿಗಳು ಗೈರು ಹಾಜರಾದ ಹಿನ್ನೆಲೆ ಅಂತಿಮವಾಗಿ ಗ್ರಾಮ ಸಭೆಯನ್ನು ಮುಂದೂಡಿದರು. ಸಭೆಯಲ್ಲಿ ಉಪಾಧ್ಯಕ್ಷೆ ಕಾವ್ಯ ಹಾಗೂ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಸುನೀಲ್ ಮುಂತಾದವರು ಪಾಲ್ಗೊಂಡಿದ್ದರು.

-ಟಿ.ಎಲ್. ಶ್ರೀನಿವಾಸ್