ಮಡಿಕೇರಿ, ಜು. 28: ಯುವತಿಯ ಮೇಲೆ ಅತ್ಯಾಚಾರವೆಸಗಿ ದ್ದಲ್ಲದೆ, ದೂರನ್ನು ಹಿಂಪಡೆಯುವಂತೆ ಜೀವ ಬೆದರಿಕೆಯೊಡ್ಡಿದ ಕಾರಣಕ್ಕಾಗಿ ವಕೀಲ ಸೇರಿದಂತೆ ನಾಲ್ವರ ವಿರುದ್ಧ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ.ಪೊನ್ನಂಪೇಟೆ ನಿವಾಸಿ ಸಿ.ಜಿ. ಸುನಿತಾ ಎಂಬಾಕೆಯ ಮೇಲೆ 2013ರಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಾಚಾರವೆಸಗಿದ್ದು, ಈ ಸಂಬಂಧ ಆಕೆ ನೀಡಿದ ದೂರಿನ ಆಧಾರದಲ್ಲಿ ಇಸ್ಮಾಯಿಲ್ ಹಾಗೂ ಅಬ್ಬಾಸ್ ಎಂಬವರುಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಯುತ್ತಿದೆ. ಆರೋಪಿಗಳ ಪರ ಮಡಿಕೇರಿಯ ವಕೀಲ ಎ.ಜಿ. ಗಿರೀಶ್ ವಕಾಲತ್ತು ವಹಿಸಿಕೊಂಡಿದ್ದು, ಆರೋಪಿಗಳೊಡಗೂಡಿ ವಕೀಲ ಗಿರೀಶ್ ಕೂಡ ಮೊಕದ್ದಮೆಯನ್ನು ಹಿಂಪಡೆಯುವಂತೆ ಬೆದರಿಕೆಯೊಡ್ಡುತ್ತಿ ದ್ದಾರೆ. ಅಲ್ಲದೆ ಗೋಣಿಕೊಪ್ಪದ ಚಿನ್ನಾಭರಣ ಮಳಿಗೆಯೊಂದರಲ್ಲಿ ಕೆಲಸ ನಿರ್ವಹಿಸುತ್ತಿದ್ದ ಎಂ.ಡಿ. ಗುರುರಾಜ್ ಎಂಬಾತ ಕೂಡ ಕಳೆದ ಜೂನ್ 16ರಂದು ದೂರವಾಣಿ ಕರೆ ಮಾಡಿ ಮೊಕದ್ದಮೆ ಹಿಂಪಡೆಯು ವಂತೆ ಬೆದರಿಕೆಯೊಡ್ಡಿದ್ದಾರೆ ಎಂದು ಸುನಿತಾ ನೀಡಿದ ದೂರಿನ ಆಧಾರದಲ್ಲಿ ಪೊನ್ನಂಪೇಟೆ ಠಾಣಾಧಿಕಾರಿ ಜಯರಾಂ ಅವರು ಸೆಕ್ಷನ್ 506, 507, 195(ಎ)ರಡಿ ಮೊಕದ್ದಮೆ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ತಾ. 21ರಂದು ಮೊಕದ್ದಮೆ ದಾಖಲಾಗಿದೆ.
ಎಸ್.ಪಿ. ಅಭಯ
ತನಗೆ ಜೀವಬೆದರಿಕೆಯಿದ್ದು, ತಾನು ಆತ್ಮಹತ್ಯೆ ಮಾಡಿಕೊಳ್ಳುವದಾಗಿ ಇತ್ತೀಚೆಗಷ್ಟೇ ಸಂತ್ರಸ್ತೆ ಯುವತಿ ಮರಣಪತ್ರ ಬರೆದಿಟ್ಟು, ಮಾಧ್ಯಮದೆದುರು ಅಳಲು ತೋಡಿಕೊಂಡಿದ್ದಳು. ಈ ಬಗ್ಗೆ ಮಾಧ್ಯಮದವರು ಪೊಲೀಸ್ ವರಿಷ್ಠಾಧಿಕಾರಿಗಳ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಆಕೆಯನ್ನು ಕರೆಸಿಕೊಂಡಿದ್ದ ಎಸ್.ಪಿ. ರಾಜೇಂದ್ರ ಪ್ರಸಾದ್ ಅವರು, ಆಕೆಗೆ ಅಭಯ ಹಸ್ತ ನೀಡಿದ್ದಲ್ಲದೆ, ಅತ್ಯಾಚಾರಿಗಳ, ಬೆದರಿಕೆಯೊಡ್ಡುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿ ಗಳಿಗೆ ಸೂಚನೆ ನೀಡಿದ್ದರು. ಇದೀಗ ಮೊಕದ್ದಮೆ ದಾಖಲಾಗಿದ್ದು, ಇನ್ನು ಕ್ರಮ ಜರುಗಿಸಬೇಕಿದೆಯಷ್ಟೆ...