*ಗೋಣಿಕೊಪ್ಪ, ಡಿ. 7: ಅತ್ಯಾಚಾರ ಹಾಗೂ ಕೊಲೆಯಾದ ಶಿಕ್ಷಕಿ ಪ್ರಮೀಳಾ ಅವರ ಮಕ್ಕಳಿಗೆ ಸರಕಾರ ಕೂಡಲೇ ವಿದ್ಯಾಭ್ಯಾಸಕ್ಕೆ ಉಚಿತ ವ್ಯವಸ್ಥೆ ಕಲ್ಪಿಸಬೇಕು ಹಾಗೂ ಅವರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಎಂದು ಒತ್ತಾಯಿಸಿ ಶ್ರೀಮಂಗಲ ಪಟ್ಟಣದಲ್ಲಿ ಮಾನವ ಹಕ್ಕುಗಳ ಜಾಗೃತಿ ಸಮಿತಿ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಕರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅತಿಥಿ ಶಿಕ್ಷಕಿ ಪ್ರಮಿಳ ಅವರ ಮೇಲೆ ಅತ್ಯಾಚಾರ ಹಾಗೂ ಕೊಲೆ ನಡೆಸಿದ ಆರೋಪಿ ಹರೀಶನಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಸಮಿತಿಯ ಅಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜ, ಸಂಘಟನಾ ಕಾರ್ಯದರ್ಶಿ ಪರ್ಮಾಲೆ, ಗಣೇಶ್, ಕಾರ್ಯದರ್ಶಿ ಹೆಚ್.ಎಂ. ಚಂದ್ರ, ಸದಸ್ಯ ಲಿಪಿನ್ ಕುಮಾರ್ ಸೇರಿದಂತೆ ಸಮಿತಿ ಸದಸ್ಯರು ಗ್ರಾಮಸ್ಥರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.