1904ರ ಅಕ್ಟೋಬರ್ 27 ರಂದು ಈ ನೆಲ ಮಾಳಿಗೆ ರೈಲು ಆರಂಭವಾಯಿತು. ಪ್ರತಿನಿತ್ಯ, ವಾರದ ದಿನಗಳಲ್ಲಿ 57 ಲಕ್ಷ ಜನರು ಇದರಲ್ಲಿ ಸಂಚರಿಸಿದರೆ, ಶನಿವಾರ 27 ಲಕ್ಷ, ಭಾನುವಾರಗಳಂದು 27 ಲಕ್ಷ ಜನರು ಮೆಟ್ರೋ ರೈಲಿನಲ್ಲಿ ಸಂಚರಿಸುತ್ತಾರೆ. ಪ್ರತಿನಿತ್ಯ 34 ಟ್ರ್ಯಾಕ್‍ಗಳಲ್ಲಿ 24 ಗಂಟೆಗಳ ಕಾಲವೂ ಸಂಚಾರ ವ್ಯವಸ್ಥೆ ಇರುತ್ತದೆ. ಜನಸಂದಣಿ ವೇಳೆ 2 ರಿಂದ 5 ನಿಮಿಷಕ್ಕೊಂದು ರೈಲು ಸಂಚರಿಸಿದರೆ ಬೇರೆ ಸಮಯದಲ್ಲಿ 10 ರಿಂದ 20 ನಿಮಿಷಕ್ಕೊಂದು ಸಂಚರಿಸುತ್ತದೆ. ವ್ಯವಸ್ಥೆಯೇನೋ ತುಂಬಾ ಚೆನ್ನಾಗಿದೆ. ಮೆಟ್ರೋ ರೈಲು ಪ್ರಯಾಣವೂ ಸುಗಮವಾಗಿರುತ್ತದೆ. ಪ್ರತೀ ಬಾರಿ ಕೂರಲು ಸ್ಥಳ ಸಿಗದಿದ್ದರೂ, ಆರಾಮವಾಗಿ ನಿಲ್ಲಲಿಕ್ಕಂತೂ ತೊಂದರೆಯಾಗುವದಿಲ್ಲ. ಆದರೆ, ಆಗುವ ಒಂದೇ ತೊಂದರೆಯೆಂದರೆ, ಹೊಸಬರಿಗೆ, ತುಂಬಾ ಆತಂಕ, ಗೊಂದಲಗಳುಂಟಾಗುತ್ತವೆ. ಏಕೆಂದರೆ, ನಮ್ಮ ಗೊಂದಲಗಳನ್ನು ಪರಿಹರಿಸಲು, ಸಂಬಂಧಪಟ್ಟ ಅಧಿಕಾರಿಗಳು ಸ್ಟೇಷನ್‍ಗಳಲ್ಲಿ ಇರುವದೇ ಇಲ್ಲ. ಎಲ್ಲವೂ ಯಂತ್ರಗಳ ಮೂಲಕವೇ ನಡೆಯುವದು ಅವುಗಳನ್ನು ಬಳಸುವ ಕನಿಷ್ಟ ಜ್ಞಾನವೂ ಇಲ್ಲದಿದ್ದರೆ, ಹೊರದೇಶಗಳಲ್ಲಿ ಓಡಾಟ ಬಹಳ ಕಷ್ಟ ಎನಿಸಿತು ನಮಗೆ.

ನ್ಯೂಯಾರ್ಕ್ ನಗರದಲ್ಲಿ ಪಾದಚಾರಿ ರಸ್ತೆಯ ಅಲ್ಲಲ್ಲೇ ನೆಲಮಾಳಿಗೆಗಳಿರುತ್ತವೆ. ನಾವು ಹೋಗಬೇಕಾದ ಸ್ಥಳದ ನೆಲಮಾಳಿಗೆ ಎಲ್ಲಿದೆ ಎಂದು ಹುಡುಕಿಕೊಂಡು ಹೋಗಬೇಕು. ನೆಲಮಾಳಿಗೆಯ ಆರಂಭದಲ್ಲೇ ಹೆಸರು ನಮೂದಿಸಿರುತ್ತಾರೆ. ಮೆಟ್ಟಿಲುಗಳನ್ನು ಹತ್ತಿ, ಇಳಿದು ಹೋಗುವಾಗ ರೈಲ್ವೆ ಟ್ರ್ಯಾಕ್‍ನ ಸಮೀಪ ಗೋಡೆಗಳಿಗೆ ಮೆಷೀನುಗಳನ್ನು ಅಳವಡಿಸಿರುವದು ಕಾಣುತ್ತದೆ. ಅಲ್ಲಿ ‘ಸ್ಮಾರ್ಟ್ ಕಾರ್ಡ್’ ಪಡೆದುಕೊಂಡು ಅದನ್ನು ಮೆಷಿನ್‍ನಿಂದ ಉಚಿತವಾಗಿ ಪಡೆದುಕೊಳ್ಳಲೂ ಕೆಲವೊಂದು ವಿವರಗಳನ್ನು ನೀಡಿ ನಂತರ ಬೇರೊಂದು ಮೆಷಿನ್‍ನ ಮೂಲಕ ಇಂತಿಷ್ಟು ಹಣಕ್ಕೆ ‘ಟಿಕೆಟ್‍ನ ಕಾರ್ಡ್’ ಕೊಂಡುಕೊಳ್ಳಬೇಕು. ನಂತರ ಹುಂಡಿಯಂತಿರುವ ಗೋಲಾಕಾರದ ಮೆಷಿನ್‍ಗೆ ಕಾರ್ಡ್ ತೋರಿಸಿ, ಅದು ಒಪ್ಪಿಗೆ ಕೊಟ್ಟ ನಂತರವೇ ಪುಟ್ಟ ಗೇಟ್ ತೆರೆದುಕೊಳ್ಳು ತ್ತದೆ. ಇಷ್ಟಲ್ಲಾ ಕೆಲಸ ಕ್ರಮಬದ್ಧವಾಗಿ ಆಗುವ ವೇಳೆಗೆ ಅಭ್ಯಾಸವಿಲ್ಲದವರಿಗೆ ಬಹಳ ಗೊಂದಲವಾಗಿ ಬಿಡುತ್ತದೆ. ಅಳಿಯ, ಮಗಳು ಜೊತೆಯಲ್ಲಿದ್ದುದ್ದರಿಂದ ನಮಗೆ ಅದರ ತೀವ್ರತೆಯ ಅರಿವಾಗಲಿಲ್ಲ. ಹೀಗೆ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್ ನಡುವೆ 24 ಗಂಟೆಗಳೂ ನಿರಂತರವಾಗಿ ರೈಲುಗಳು ಓಡಾಡುತ್ತವೆ. ಇವೆರಡೂ ಅವಳಿ ನಗರಗಳಿದ್ದಂತೆ, ನ್ಯೂಯಾರ್ಕ್‍ನ ರಸ್ತೆಗಳು ಬೆಂಗಳೂರಿನ ಅವೆನ್ಯೂ ರಸ್ತೆ, ಚಿಕ್ಕಪೇಟೆ, ಕಮರ್ಷಿಯಲ್ ಸ್ಟ್ರೀಟ್‍ಗಳನ್ನೇ ಹೋಲುತ್ತದೆ. ಆದರೆ, ಇಲ್ಲಿಯಂತೆ ಪುಟ್ಟ-ಪುಟ್ಟ ಅಂಗಡಿಗಳಿರುವದಿಲ್ಲ. ದಾರಿಯುದ್ದಕ್ಕೂ ಜನಜಂಗುಳಿಯಿರುವದ ರಿಂದ ಹೆಚ್ಚಿನವರು ಕಾರನ್ನು ನಗರದ ಹೊರಗಡೆಯೇ ನಿಲ್ಲಿಸುತ್ತಾರೆ. ನ್ಯೂಯಾರ್ಕ್‍ನಲ್ಲೇ ಪಾರ್ಕ್ ಮಾಡಿದರೂ ಹೆಚ್ಚಿನ ಶುಲ್ಕ ತೆರಬೇಕಾಗುತ್ತದೆ. ರೈಲಿನಿಂದ ಇಳಿದು, ರಸ್ತೆಯಲ್ಲಿ ನಡೆಯುತ್ತಾ ಎಂಪೈರ್ ಸ್ಟೇಟ್ ಬಿಲ್ಡಿಂಗ್ ತಲಪಿದೆವು. ಇದೊಂದು 102 ಮಹಡಿಗಳ ಬೃಹತ್ ಕಟ್ಟಡ. ಲಿಫ್ಟ್ ಮೂಲಕ ಕ್ಷಣ ಮಾತ್ರದಲ್ಲಿ ಮೇಲು ತುದಿಗೆ ತಲಪಿಬಿಡುತ್ತದೆ. ಅಲ್ಲಲ್ಲೇ ಜನರು ನಿಂತಿದ್ದು, ಸ್ವಾಗತಿಸು ತ್ತಾರೆ. ಸೂಕ್ತ ರೀತಿ ಯಲ್ಲಿ ಸಲಹೆ ನೀಡು ತ್ತಾರೆ. ಈ ಕಟ್ಟಡವನ್ನು ‘ಅಮೇರಿಕಾ ಸಂಸ್ಕøತಿಯ ಪ್ರತಿಮೆ’ (Iಅಔಓ) ಆಗಿ ಪರಿಭಾವಿಸುತ್ತಾರೆ. 1931ರಲ್ಲಿ ಪೂರ್ಣಗೊಂಡ ಈ ಕಟ್ಟಡವನ್ನು ಆಗಿನ ಅಧ್ಯಕ್ಷರಾಗಿದ್ದ ‘ಹೂವರ್’ ಉದ್ಘಾಟಿಸಿದರು. ಅಲ್ಲಿ ಆಗಲೇ ಅದೆಷ್ಟೋ ತಂತ್ರಜ್ಞಾನ ಮುಂದುವರಿದಿತ್ತೆಂದರೆ, ‘ಹೂವರ್’ ಅವರು ವಾಷಿಂಗ್‍ಟನ್ ಡಿ.ಸಿ. ಯಲ್ಲಿರುವ ವೈಟ್ ಹೌಸ್‍ನಲ್ಲಿ ಕುಳಿತು, ಬಟನ್ ಅದುಮಿದಾಗ ನ್ಯೂಯಾರ್ಕ್‍ನಲ್ಲಿರುವ ಈ ಕಟ್ಟಡದ ದೀಪಗಳು ಬೆಳಗಿದವು. ಹೀಗೆ ಆ ಕಟ್ಟಡ ಉದ್ಘಾಟಿಸಲ್ಪಟ್ಟಿತು. ಎಂಪೈರ್ ಸ್ಟೇಟ್ ಕಟ್ಟಡದ 86ನೇ ಮಹಡಿಯಲ್ಲಿ ಅಲ್ಲಿಯವರೆಗೆ ಹೋಗಲು ಸೌಲಭ್ಯವಿದೆ. ಅಲ್ಲಿ ನಿಂತು ಸುತ್ತಲೂ ನೋಡಿದರೆ ನ್ಯೂಯಾರ್ಕ್ ನಗರದ ಮನಮೋಹಕ ಸೌಂದರ್ಯ ಕಣ್ಮನ ಸೆಳೆಯು ತ್ತದೆ. ಸುತ್ತಲೂ ಬೃಹದಾಕಾರದ ಕಟ್ಟಡಗಳು, ನಡುವೆ ಹಡ್ಸನ್ ನದಿ ಹರಿಯುತ್ತದೆ. ಅತ್ಯಂತ ವ್ಯವಸ್ಥಿತವಾಗಿ, ಸುಂದರವಾಗಿ, ನಿರ್ಮಾಣ ಗೊಂಡಿರುವ ನಗರ ನ್ಯೂಯಾರ್ಕ್ ನದಿಯ ದಂಡೆಯಲ್ಲಿ ಗಗನ ಚುಂಬಿ ಕಟ್ಟಡಗಳು, ರಾತ್ರಿಯ ಜಗಮಗಿಸುವ ಬೆಳಕಿನಲ್ಲಂತೂ ಕಣ್ಣಿಗೆ ಮತ್ತಷ್ಟು ಹಬ್ಬ. ಕಟ್ಟಡದ ಮೂಲೆ-ಮೂಲೆಗಳಲ್ಲೂ ನಿಂತು ಫೋಟೋ ಕ್ಲಿಕ್ಕಿಸಿಕೊಳ್ಳಲು ಅವಕಾಶವಿದೆ. ನಗರದ ಸೌಂದರ್ಯವನ್ನು ಆಸ್ವಾಧಿಸುತ್ತಿದ್ದಂತೆ ಇತಿಹಾಸವನ್ನೇ ಸಾರುವ ಕಹಿ ನೆನಪು ಧುತ್ತೆಂದು ಕಣ್ಣೆದುರು ನಿಲ್ಲುತ್ತದೆ. 2001, ಸೆಪ್ಟೆಂಬರ್ ಹನ್ನೊಂದರಂದು ತಿಣಛಿ-ತಿoಡಿಟಜ ಣಡಿಚಿಜe ಛಿeಟಿಣeಡಿ ಕಟ್ಟಡ ದುಷ್ಟರಿಂದ ಧಾಳಿಗೊಳಗಾಗಿತ್ತು. ಆ ಘಟನೆ ನಡೆದಾಗ, ಟಿ.ವಿ.ಯಲ್ಲಿ ವೀಕ್ಷಿಸಿದ್ದೆ. ಆದರೆ, ಕಣ್ಣೆದುರಿಗೆ ಅದನ್ನು ನೋಡಬಹುದೆಂದು ಕನಸಿನಲ್ಲೂ ನೆನೆಸಿಕೊಂಡಿರಲಿಲ್ಲ. ಕ್ಷಣಕಾಲ ಮನಸ್ಸಿನಲ್ಲಿ ಯಾವದೋ ದುಗುಡ ಭಾವೋದ್ವೇಗಗಳು ಸುಳಿದು ಹೋದವು. ನಾನು ಈ ಕಟ್ಟಡವನ್ನು ನೋಡುತ್ತ್ತಿರುವದು ನಿಜವೇ ಎಂದು ಮತ್ತೆ-ಮತ್ತೆ ಪ್ರಶ್ನಿಸಿಕೊಳ್ಳುವಂತಾಗು ತ್ತಿತ್ತು. ಅಂದು ಧಾಳಿಗೊಳಗಾಗಿ, ನುಚ್ಚು ನೂರಾಗಿದ್ದ ಕಟ್ಟಡದ ಜಾಗದಲ್ಲೇ ಈಗ 110 ಮಹಡಿಯ ಬೃಹತ್ ಕಟ್ಟಡ ಎದ್ದಿದೆ. ಈಗ ಅದನ್ನು ಒನ್ ವಲ್ರ್ಡ್‍ಟ್ರೇಡ್ ಸೆಂಟರ್ ಅಥವಾ ‘ಫ್ರೀಡಂ ಟವರ್’ ಅಂತಲೂ ಕರೆಯುತ್ತಾರೆ. ಎಂಪೈರ್ ಸ್ಟೇಟ್ ಕಟ್ಟಡದ 86ನೇ ಮಹಡಿಯಿಂದ ‘ಫ್ರೀಡಂ ಟವರ್’ ಅನ್ನು ತೀರಾ ಸಮೀಪದಿಂದ ಅಲ್ಲದಿದ್ದರೂ ಸ್ವಲ್ಪ ದೂರದಿಂದ ವೀಕ್ಷಿಸಲು ಸಾಧ್ಯವಾಯಿತು. 86ನೇ ಮಹಡಿಯಿಂದ ‘ಬೃಹತ್ ಎನಿಸಬಹುದಾದ ಕಟ್ಟಡಗಳು, ಕೆಳಗೆ ರಸ್ತೆಯಲ್ಲಿ ಸಂಚರಿಸುತ್ತಿರುವ ಕಾರು, ಬಸ್ಸುಗಳೆಲ್ಲವೂ ಪುಟ್ಟ ಆಟಿಕೆಗಳಂತೆ ತೋರುತ್ತವೆ. ನಗರದ ಮಧ್ಯೆ ಹರಿಯುವ ನದಿಯಲ್ಲಿ ಹಡಗು, ಬೋಟ್ ಗಳು ತೇಲುತ್ತಿರುತ್ತವೆ. ಅಷ್ಟೆತ್ತರದಿಂದ ನಗರವನ್ನು ನೋಡುವದೇ ಇಲ್ಲಿಯ ಪ್ರಮುಖ ಆಕರ್ಷಣೆ.

(ಮುಂದುವರಿಯುವದು)