ಶನಿವಾರಸಂತೆ, ಸೆ. 17: ಪ್ರಸಕ್ತ ಸಾಲಿನ ಎಸ್.ಸಿ.ಪಿ. ಮತ್ತು ಟಿ.ಎಸ್.ಪಿ. ಯೋಜನೆಯಲ್ಲಿ 8 ಪಂಚಾಯಿತಿಗಳ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ 40 ಮಂದಿ ಫಲಾನುಭವಿಗಳಿಗೆ ಶನಿವಾರಸಂತೆ ಅರಣ್ಯ ಇಲಾಖಾ ವತಿಯಿಮದ ಉಚಿತವಾಗಿ ಎಲ್.ಪಿ.ಜಿ. ಸ್ಟವ್ ಮತ್ತು ಸಿಲಿಂಡರ್‍ಗಳನ್ನು ವಿತರಣೆ ಮಾಡಲಾಯಿತು.

ಶನಿವಾರಸಂತೆ ಅರಣ್ಯ ವಲಯಾಧಿಕಾರಿ ಎಂ.ಎಂ. ಅಚ್ಚಪ್ಪ ಹಾಗೂ ಶನಿವಾರಸಂತೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಹರೀಶ್ ವಿತರಿಸಿ, ಮಾತನಾಡಿದರು. ಈ ಸಂದರ್ಭ ಶನಿವಾರಸಂತೆ ಗ್ರಾ.ಪಂ. ಸದಸ್ಯೆ ಸೌಭಾಗ್ಯಲಕ್ಷ್ಮಿ, ಉಪ ಅರಣ್ಯ ಇಲಾಖಾಧಿಕಾರಿ ಶ್ರೀನಿವಾಸ್, ಅರಣ್ಯ ರಕ್ಷಕ ಲೋಹಿತ್, ಚಾಲಕ ಹರೀಶ್ ಕುಮಾರ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.