ಮಡಿಕೇರಿ, ಸೆ. 1: ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಮಡಿಕೇರಿ ಇದರ ವತಿಯಿಂದ ಗರುಡ ಯುವಕ ಮಂಡಲ ಚೊಕ್ಕಾಡಿ ಇವರ ಸಹಯೋಗದಲ್ಲಿ ಇತ್ತೀಚೆಗೆ ಸುಳ್ಯದ ಸ.ಉ.ಹಿ.ಪ್ರಾ. ಶಾಲೆ ಅಜ್ಜನಗದ್ದೆಯಲ್ಲಿ ಆಟಿ ಉತ್ಸವ ಕಾರ್ಯಕ್ರಮ ನಡೆಸಲಾಯಿತು.
ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಅರೆಭಾಷೆಗೆ ತನ್ನದೇ ಆದ ವಿಶೇಷತೆ ಇದೆ. ನಮ್ಮ ಭಾಷೆಯಾದ ಇದನ್ನು ನಾವೇ ಉಳಿಸಿ ಬೆಳೆಸಿ ವಿಶ್ವವ್ಯಾಪಿ ಮಾಡಬೇಕು. ಅರೆಭಾಷೆ ಇಂದು ಅಳಿವಿನಂಚಿನಲ್ಲಿದ್ದು, ಅರೆಭಾಷೆ ಮಾತನಾಡುವವರನ್ನು ಸುಳ್ಯ ಮತ್ತು ಕೊಡಗು ಜಿಲ್ಲೆಯಲ್ಲಿ ಮಾತ್ರ ಹೆಚ್ಚಾಗಿ ಕಾಣಬಹುದು. ಇತರರೊಂದಿಗೆ ಮಾತನಾಡುವಾಗ ಅರೆಭಾಷೆಯನ್ನೇ ಹೆಚ್ಚು ಉಪಯೋಗ ಮಾಡಬೇಕು. ಇದರಿಂದ ಅರೆಭಾಷೆ ಬೆಳೆಯಲು ಸಹಕಾರಿಯಾಗುತ್ತದೆ. ಈ ಭಾಷೆಯಲ್ಲಿ ಅನೇಕ ಸಂಸ್ಕøತಿಯು ಅಡಕವಾಗಿದ್ದು, ಅದನ್ನು ಉಳಿಸಿ-ಬೆಳೆಸುವ ಕೆಲಸ ನಡೆಯಬೇಕಾಗಿದೆ ಎಂದು ಹೇಳಿದರು.
ಸುಳ್ಯ ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ದೀಪಕ್ ಕುತ್ತಮೊಟ್ಟೆ, ಸುಳ್ಯ ಕನ್ನಡ ಸಾಹಿತ್ಯ ಪರಿಷತ್ ಕಾರ್ಯದರ್ಶಿ ತೇಜಸ್ವಿ ಕಡಪಳ, ವ್ಯವಸಾಯ ಸೇವಾ ಸಹಕಾರಿ ಸಂಘ ಉಪಾಧ್ಯಕ್ಷ ಯಶವಂತ ಪಿಲಿಕಜೆ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟರಮಣ ಹಾಗೂ ಅಕಾಡೆಮಿ ಸದಸ್ಯರಾದ ಮದುವೆಗದ್ದೆ ಬೋಜಪ್ಪಗೌಡ, ಅಣ್ಣಾಜಿಗೌಡ, ಮೋಹನ್ ಸೋನ, ಬಿ.ಸಿ. ವಸಂತ, ಡಾ. ಪೂವಪ್ಪ ಕಾಣಿಯೂರು, ಮೋಹನ್ ದಾಸ್, ಯಶವಂತ ಕುಡೆಕಲ್ ಉಪಸ್ಥಿತರಿದ್ದರು. ಆಟಿ ಮಹತ್ವದ ಬಗ್ಗೆ ಯು. ಸುಬ್ರಾಯ ಗೌಡ, ಪ್ರಾಂಶುಪಾಲರು, ಸ.ಪ.ಪೂ. ಕಾಲೇಜು ಬೆಳ್ಳಾರೆ ವಿಚಾರ ಮಂಡನೆ ಮಾಡಿದರು. ಯುವಕ ಮಂಡಲದ ಅಧ್ಯಕ್ಷ ಮುರುಳಿ ನಳಿಯೂರು ಸ್ವಾಗತಿಸಿ, ಬಿ.ಸಿ. ವಸಂತ ವಂದಿಸಿದರು. ಗಣೇಶ್ ಪಿಲಿಕಜೆ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭ ವಿವಿಧ ಗ್ರಾಮೀಣ ಆಟೋಟ ಸ್ಪರ್ಧೆಗಳು ನಡೆದವು. ಆಟಿ ಉತ್ಸವದ ವಿಶೇಷವಾಗಿ ಆಟಿಯ ಭೋಜನದಲ್ಲಿ ಬೊಡ್ ರೊಟ್ಟಿ, ಮೆಣಸಿನಕಾಯಿ ಪಜ್ಜಿ ಪತ್ರೊಡೆ ವಿಶೇಷವಾಗಿತ್ತು. ಭೋಜನದ ನಂತರ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಲಕ್ಷ್ಮೀಕಾಂತ್ ಮೂಲೆಮಜಲು ಅವರಿಂದ ಅರೆಭಾಷೆ ಗಾಯನ ನಡೆಯಿತು.