ಶನಿವಾರಸಂತೆ, ಆ. 4: ಕೊಡ್ಲಿಪೇಟೆ ಗ್ರಾಮದ ಪಾಳುಬಿದ್ದ ಜಾಗದಲ್ಲಿ ಆರೋಪಿಗಳು ಅಕ್ರಮವಾಗಿ ಜೂಜಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಧಾಳಿ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಅಕ್ರಮವಾಗಿ ಜೂಜಾಡುತ್ತಿದ್ದ ಆರೋಪಿಗಳಾದ 11 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿ ರೂ. 4,250 ನಗದನ್ನು ವಶಪಡಿಸಿಕೊಂಡು ಆರೋಪಿಗಳನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಯಿತು.

ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ಮರಿಸ್ವಾಮಿ, ಸಿಬ್ಬಂದಿಗಳಾದ ಪ್ರದೀಪ್, ಶಷೀರ್, ವಿಶ್ವನಾಥ್, ಇ.ಜೆ. ಸುರೇಶ್, ಸಂತೋಷ್, ಹರೀಶ್, ಶಿವಪ್ಪ, ಮಹೇಶ್ ಇದ್ದರು.