*ಗೋಣಿಕೊಪ್ಪಲು, ಸೆ. 20 : ಅಕ್ರಮವಾಗಿ ಗೋಮಾಂಸ ಮಾರುತ್ತಿದ್ದ ಬಾಂಗ್ಲಾ ಮೂಲದ ವ್ಯಕ್ತಿಯನ್ನು ಹಿಂದೂಪರ ಸಂಘಟನೆಯ ಕಾರ್ಯಕರ್ತರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪಟ್ಟಣದ ಮಾಂಸ ಮಾರುಕಟ್ಟೆ ಸಮೀಪ ಅಕ್ಬರ್ ಎಂಬಾತ 2 ಕೆ.ಜಿ ಮಾಂಸವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ. ಈತ ಕಾಳುಮೆಣಸು ಕದ್ದು ತಂದು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭ ಈತನ ಬಳಿ ಇದ್ದ ಚೀಲವನ್ನು ಪರಿಶೀಲಿಸಿದಾಗ ಮೆಣಸು ಹಾಗೂ ಗೋಮಾಂಸ ಇರುವದು ಪತ್ತೆಯಾಗಿದೆ.

ಹಿಂದೂಪರ ಸಂಘನೆಯ ಕಾರ್ಯಕರ್ತ ಸುರೇಶ್ ರೈ ಈತನಲ್ಲಿ ಗೋಮಾಂಸ ಮಾರಾಟ ಮಾಡುತ್ತಿರುವ ಬಗ್ಗೆ ವಿಚಾರಿಸಿದಾಗ ವೀರಾಜಪೇಟೆ ಭಾಗದಿಂದ ತಂದಿರುವದಾಗಿ ಮಾಹಿತಿ ನೀಡಿದ್ದಾನೆ. ಈ ಮಾಹಿತಿ ಆದಾರದ ಮೆಲೆ ಗೋಣಿಕೊಪ್ಪ ಪೊಲೀಸರರು ವೀರಾಜಪೇಟೆ ಠಾಣೆಗೆ ಮಾಹಿತಿ ನೀಡಿದ್ದು, ವೀರಾಜಪೇಟೆ ಪೊಲೀಸರು ಅಕ್ರಮ ಗೋಮಾಂಸ ಮಾರಾಟದ ಬಗ್ಗೆ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ಕೊಡಗಿನಲ್ಲಿ ಬಾಂಗ್ಲಾ ಮೂಲದ ನಿವಾಸಿಗಳು ಕಾರ್ಮಿಕರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಇವರಿಂದ ಜಿಲ್ಲೆಗೆ ಬಹುದೊಡ್ಡ ಸಮಸ್ಯೆ ಎದುರಾಗುತ್ತಿದೆ. ತೋಟದ ಮಾಲೀಕರು ಬಾಂಗ್ಲಾ ತೋಟ ಕಾರ್ಮಿಕರ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಮಾಹಿತಿ ನೀಡಬೇಕು. ಇವರಿಂದ ಆಗುವ ಅನಾಹುತಗಳ ಹೊಣೆಯನ್ನು ತೋಟ ಮಾಲೀಕರೇ ಹೊರಬೇಕಾದ ಪರಿಸ್ಥಿತಿ ಎದುರಾಗಬಲ್ಲದು. ಮುಂಜಾಗೃತವಾಗಿ ಕ್ರಮ ಕೈಗೊಳ್ಳುವದು ಒಳಿತು ಎಂದು ಬಿ.ಜೆ.ಪಿ ಮಾಜಿ ಜಿಲ್ಲಾಧ್ಯಕ್ಷ ಮಾಚಿಮಾಡ ಎಂ. ರವೀಂದ್ರ ತಿಳಿಸಿದ್ದಾರೆ.