ಶನಿವಾರಸಂತೆ, ಜೂ. 19: ಜೀವನದ ದೈನಂದಿನ ಚಟುವಟಿಕೆಗಳಲ್ಲಿ ಯೋಗಕ್ಕೂ ನಿರ್ದಿಷ್ಟ ಸಮಯ ಮೀಸಲಿಡಬೇಕು ಎಂದು ಉಚ್ಚಂಗಿಯ ಅಂತರ್ರಾಷ್ಟ್ರೀಯ ಕರಾಟೆಪಟು ಹಾಗೂ ಯೋಗ ಸ್ಪರ್ಧಿ ಕೆ.ಎಸ್. ಮೂರ್ತೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪಟ್ಟಣದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಅಂತರ್ರಾಷ್ಟ್ರೀಯ ಯೋಗ ದಿನದ ಅಂಗವಾಗಿ ನಡೆದಿರುವ ಯೋಗ ಶಿಬಿರದಲ್ಲಿ ಅವರು ದೈಹಿಕ ಆರೋಗ್ಯಕ್ಕೆ ಯೋಗದ ಬಗ್ಗೆ ಚಿಂತನೆ ವಿಷಯದ ಕುರಿತು ಉಪನ್ಯಾಸ ನೀಡಿದರು.

ಪರಿಸರ ಮಾಲಿನ್ಯ ಹಾಗೂ ವಿಷಯುಕ್ತ ಆಹಾರ ಪದಾರ್ಥಗಳ ಸೇವನೆಯಿಂದ ಆರೋಗ್ಯ ಕಾಪಾಡಿಕೊಳ್ಳಲು ಯೋಗ ಅವಶ್ಯಕ ಎಂದರು.

ಯೋಗ ಶಿಕ್ಷಕರಾದ ಎ.ಡಿ. ಮೋಹನ್‍ಕುಮಾರ್, ಕುಮಾರ್, ಬೀನಾ ಅರವಿಂದ್ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.