ಗೋಣಿಕೊಪ್ಪಲು, ಜು.28: ಕೊಡಗು ಹಾಗೂ ಹೊರಜಿಲ್ಲೆಯಲ್ಲಿ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ 10 ಮಂದಿ ಆರೋಪಿಗಳ ಕೃತ್ಯವನ್ನು ಭೇದಿಸಿರುವ ಕೊಡಗು ಜಿಲ್ಲಾ ಪೆÇಲೀಸರ ಕ್ರಮವನ್ನು ಶ್ಲಾಘಿಸಿರುವ ಜಿಲ್ಲಾ ಪೆÇಲೀಸ್ ಅಧೀಕ್ಷಕ ರಾಜೇಂದ್ರಪ್ರಸಾದ್ ಅವರು ಇಲಾಖೆ ವತಿಯಿಂದ ರೂ.20 ಸಾವಿರ ನಗದು ಬಹುಮಾನ ಘೋಷಣೆ ಮಾಡಿದ್ದರೆ, ಗೋಣಿಕೊಪ್ಪಲು ಎಪಿಎಂಸಿ ಯಾರ್ಡ್‍ನಲ್ಲಿ ಕಾಳು ಮೆಣಸು ಹಾಗೂ ನಗದು ಮೊತ್ತ ಕಳೆದುಕೊಂಡಿದ್ದ ಕಾಳುಮೆಣಸು ರಫ್ತು ವ್ಯಾಪಾರಿ ಸೌರಭ್ ಬಂಕ ಅವರು ರೂ.25 ಸಾವಿರ ನಗದು ಬಹುಮಾನ ವನ್ನು ಪೆÇಲೀಸರಿಗೆ ನೀಡುವದಾಗಿ ಘೋಷಿಸಿದ್ದು ಮಾತಿನಂತೆ ತಾ. 27 ರಂದು ಪೆÇಲೀಸ್ ಅಧೀಕ್ಷಕ ರಾಜೇಂದ್ರ ಪ್ರಸಾದ್ ಮೂಲಕ ರೂ.25000 ನಗದು ಬಹುಮಾನ ಹಸ್ತಾಂತರಿಸಿದರು.

ಕುಶಾಲನಗರ ಪೆÇಲೀಸರು ಹಾಗೂ ಹೋಂ ಗಾರ್ಡ್ ಮೂಲಕ ಕೃತ್ಯ ಬಯಲಾಗಿದ್ದು, ಗೋಣಿಕೊಪ್ಪಲು ಕಾಳುಮೆಣಸು ಕಳವು ಹಾಗೂ ವಿವಿಧ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಮತ್ತೂರು ನಿವಾಸಿಗಳಾದ ಹರೀಶ್ ಹಾಗೂ ಸೋನು ಇದೇ ಪ್ರಥಮ ಬಾರಿಗೆ ಜೈಲು ಕಂಬಿ ಎಣಿಸು ವಂತಾಗಿದೆ. ಕಳವು ಮಾಡಲಾದ ಕಾಳುಮೆಣಸಿನಲ್ಲಿ ಕೆಲವು ಭಾಗವನ್ನು ಗೂಡ್ಸ್ ಆಟೋ ಚಾಲಕ ಕಾರ್ಯಪ್ಪ ಎಂಬವರ ಮೂಲಕ ಪೆÇನ್ನಂಪೇಟೆಯ ವರ್ತಕರಿಗೆ ಮಾರಾಟ ಮಾಡಿ ಬರಲು ತಿಳಿಸಿದ ಮೇರೆ ಚಾಲಕ ಕಾರ್ಯಪ್ಪ ಎಂಬವರು ಮಾರಾಟ ಮಾಡಿದ್ದಾರೆ. ಕಾರ್ಯಪ್ಪನಿಗೆ ಇಂತಹಾ ಒಂದು ಕಾರ್ಯಕ್ಕೆ ರೂ.15 ಸಾವಿರ ಭಕ್ಷೀಸು ನೀಡಲಾಗಿದೆ. ಇದೀಗ ಕೇವಲ ರೂ.15 ಸಾವಿರ ಹೊಂದಿಕೊಂಡ ತಪ್ಪಿಗೆ ಸದರಿ ಚಾಲಕನೂ ಜೈಲು ಕಂಬಿ ಎಣಿಸುವಂತಾಗಿದೆ.

ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಪ್ರಕರಣದ ಹಿಂದೆ ಬಿದ್ದು ಕೇವಲ ಮೂರು-ನಾಲ್ಕು ದಿನಗಳಲ್ಲಿ ವ್ಯವಸ್ಥಿತವಾಗಿ ಕಳವು ಮಾಡುತ್ತಿದ್ದ ಜಾಲವನ್ನು ಭೇದಿಸಿದ್ದಾರೆ. ಒಟ್ಟು ರೂ.6.46 ಲಕ್ಷ ಕಳವು ಮಾಡಲಾದ ನಗದು ಮೊತ್ತದಲ್ಲಿ 6 ಮಂದಿಯೂ ತಲಾ ರೂ.90000 ದಂತೆ ಹಂಚಿ ಕೊಂಡಿದ್ದಾರೆ ಎಂದು ವಿಚಾರಣೆ ಸಂದರ್ಭ ತಿಳಿಸಿದ್ದಾರೆ. ಉಳಿಕೆ ಮೊತ್ತ ಊಟ, ಮದ್ಯಪಾನ ಇತ್ಯಾದಿಗಳಿಗೆ ಖರ್ಚು ಮಾಡಿದ್ದಾರೆ ಎನ್ನಲಾಗಿದೆ.

ನೂತನ ಬೈಕ್ ಹಾಗೂ ಆಟೋವನ್ನು ಇದೇ ಕಳವು ಮೊತ್ತದಲ್ಲಿ ಖರೀದಿಸಿದ್ದಾರೆ ಎನ್ನಲಾಗಿದೆ. ಮತ್ತೊಂದು ಮಾಕ್ಸಿಮಾ ಗೂಡ್ಸ್ ಆಟೋವನ್ನು ಖರೀದಿಸಿದ್ದಾರೆ ಎನ್ನಲಾಗುತ್ತಿದೆ. ಇದೀಗ ಪೆÇಲೀಸರು 8 ಪ್ರಕರಣವನ್ನು ಭೇದಿಸಿದ್ದು, ಎಷ್ಟೋ ಪ್ರಕರಣಗಳಲ್ಲಿ ಕಳವು ಪ್ರಕರಣ ಬಗ್ಗೆ ಮಾಲೀಕರು ಪೆÇಲೀಸರಿಗೆ ದೂರನ್ನೇ ನೀಡಿಲ್ಲ ಎನ್ನುವ ಅಂಶವೂ ಬೆಳಕಿಗೆ ಬಂದಿದೆ. ಇದು ಖದೀಮರಿಗೆ ವರದಾನವಾಗಿದೆ.

ಗೋಣಿಕೊಪ್ಪಲು ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ರಾತ್ರಿ ಕಾವಲುಗಾರನಿಗೆ ಪೆÇಲೀಸರು ಧರ್ಮದೇಟು ನೀಡಿ ಬಾಯಿ ಬಿಡಿಸಲು ನೋಡಿದ್ದಾರೆ. ಆದರೆ, ನಂತರ ಆತನ ಪಾತ್ರವಿಲ್ಲ ಎಂಬದು ದೃಢಪಟ್ಟಿದೆ. ದೊಡ್ಡ ಮಟ್ಟದಲ್ಲಿ ಕಾಳು ಮೆಣಸು, ಕಾಫಿ ವಹಿವಾಟು ನಡೆಸುವವರು ಭದ್ರತಾ ಸಿಬ್ಬಂದಿ ನೇಮಕ ಮಾಡದಿರುವದು, ಸಿಸಿ ಕ್ಯಾಮೆರಾ ಅಳವಡಿಸದಿರುವದು ಕಳ್ಳರ ತಂಡಕ್ಕೆ ಕೃತ್ಯ ಎಸಗಲು ಸುಲಭ ಸಾಧ್ಯವಾಗಿದೆ. ಇತ್ತೀಚೆಗೆ ಮಾರಕಾ ಯುಧ, ಚಾಕು ಇತ್ಯಾದಿಗಳನ್ನು ಇಟ್ಟು ಕೊಂಡಿರುವ ಇದೀಗ ಸೆರೆಯಾಗಿರುವ ತಂಡ ಅಗತ್ಯ ಬಿದ್ದರೆ ಹತ್ಯೆಗೈಯಲು ಹಿಂಜರಿಯುತ್ತಿರಲಿಲ್ಲ ಎಂಬ ಅಂಶ ತನಿಖೆ ಸಂದರ್ಭ ಬೆಳಕಿಗೆ ಬಂದಿದೆ. ಜಿಲ್ಲೆಯಲ್ಲಿ ಮತ್ತಷ್ಟು ಕಳವು ಪ್ರಕರಣ ನಡೆಯುವದನ್ನು ಜಿಲ್ಲಾ ಪೆÇಲೀಸರ ತಂಡ ತಡೆಗಟ್ಟುವಲ್ಲಿ ಯಶಸ್ವಿಯಾಗಿದೆ.

- ಟಿ.ಎಲ್.ಶ್ರೀನಿವಾಸ್