ಕೂಡಿಗೆ, ಆ. 1: ಇಲ್ಲಿನ ಸರ್ಕಾರಿ ಕ್ರೀಡಾಶಾಲೆಯು ಇತ್ತೀಚೆಗೆ ರೋಟರಿ ಇಂದಿರಾನಗರ ಬೆಂಗಳೂರು ಹಾಗೂ ಹಾಕಿ ಬೆಂಗಳೂರು ಇವರ ಸಹಯೋಗದಿಂದ ಬೆಂಗಳೂರಿನ ಅಕ್ಕಿತಿಮ್ಮನಹಳ್ಳಿ ಹಾಕಿ ಕ್ರೀಡಾಂಗಣ ದಲ್ಲಿ ಇತ್ತೀಚೆಗೆ ನಡೆದ ಡಾ. ಜಿ.ಎಸ್.ರಾಂಧವ ಅಂತರ ಶಾಲಾ ಬಾಲಕರ ಹಾಕಿ ಪಂದ್ಯಾವಳಿ ಯಲ್ಲಿ ಕೂಡಿಗೆ ಕ್ರೀಡಾಶಾಲೆಯ ಹಾಕಿ ಪಟುಗಳು ಪಾಲ್ಗೊಂಡು ಪ್ರಥಮ ಸ್ಥಾನ ಪಡೆಯುವದರ ಮೂಲ ಹಾಕಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಅಂತಿಮ ಪಂದ್ಯಾವಳಿಯಲ್ಲಿ ಪೊನ್ನಂಪೇಟೆಯ ಪದವಿ ಪೂರ್ವ ಕಾಲೇಜಿನ ಹಾಕಿ ತಂಡವನ್ನು 4-2 ಗೋಲಿನ ಅಂತರದಲ್ಲಿ ಮಣಿಸಿ ಜಯಗಳಿಸಿತು. ಪಂದ್ಯಾವಳಿಯಲ್ಲಿ ಕ್ರೀಡಾಶಾಲೆಯ ಮಲ್ಲಿಕಾರ್ಜುನ ಪಂದ್ಯದ ಶ್ರೇಷ್ಠ ಹಾಗೂ ರವಿ ಅತ್ಯುತ್ತಮ ಗೋಲ್ ಕೀಪರ್ ಎಂಬ ಪ್ರಶಸ್ತಿ ಪಡೆದರು. ಶಾಲೆಯ ಮುಖ್ಯೋಪಾಧ್ಯಾಯಿನಿ ಕುಂತಿ ಬೋಪಯ್ಯ, ತರಬೇತುದಾರ ರಾದ ಅಂತೋಣಿ ಡಿಸೋಜ ಹಾಗೂ ಸಂಜಯ್ ಬಾಣದ್ ಸೇರಿದಂತೆ ಶಾಲಾ ಶಿಕ್ಷಕ ವೃಂದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.