ನಾಪೆÇೀಕ್ಲು, ನ. 10: ಸ್ಥಳೀಯ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ವತಿಯಿಂದ ಏರ್ಪಡಿಸಲಾಗಿದ್ದ ಅಂತರ ಪ್ರೌಢಶಾಲಾ ಭಾವಗೀತೆ ಸ್ಪರ್ಧೆಯಲ್ಲಿ ಅಂಕುರ್ ಪಬ್ಲಿಕ್ ಶಾಲೆಯ ಪಿ.ಪಿ. ಶ್ರೀರಕ್ಷಾ ಪ್ರಥಮ ಸ್ಥಾನಗಳಿಸಿದ್ದಾಳೆ.

ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಸಜನ್ ಅಯ್ಯಪ್ಪ ದ್ವಿತೀಯ ಸ್ಥಾನವನ್ನೂ ಹಾಗೂ ಕೃಪಾಲಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಚೋಕಿರ ಯಾನಾ ದೇಚಮ್ಮ ಮತ್ತು ಅನನ್ಯ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಮತ್ತು ಅಂಕುರ್ ಪಬ್ಲಿಕ್ ಶಾಲೆಯ ಸ್ಮøತಿ ತೃತೀಯ ಸ್ಥಾನವನ್ನು ಗಳಿಸಿದ್ದಾರೆ.

ಶಾಲೆಯಲ್ಲಿ ನಡೆದ ಸಮಾರಂಭ ದಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಹಾಗೂ ನಗದು ಪುರಸ್ಕಾರವನ್ನು ನೀಡಲಾಯಿತು. ಇಂಟರ್ಯಾಕ್ಟ್ ಕ್ಲಬ್ ಹಾಗೂ ದಾನಿಗಳಾದ ಸವೆನ್ ಸ್ಟಾರ್‍ನ ಮಾಲಿಕ ಸಂಶು ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ರೋಟರಿ ಮಿಸ್ಟಿ ಹಿಲ್ಸ್‍ನ ಉಪ ರಾಜ್ಯಪಾಲ ಡಾ. ಸಿ.ಆರ್. ಪ್ರಶಾಂತ್ ಮಾತನಾಡಿ, ಸಂಗೀತದಿಂದ ಎರಡು ಮೆದುಳಿಗೂ ಕೆಲಸ ಸಿಗುತ್ತದೆ. ಸಂಗೀತ ಕಲಿಯುವದರಿಂದ ಸಾಹಿತ್ಯ, ರಾಗ-ತಾಳಗಳ ಅಭ್ಯಾಸದೊಂದಿಗೆ ಸದಾ ಚಟುವಟಿಕೆಯಿಂದ ಇರಲು ಸಾಧ್ಯ. ಸಂಗೀತವನ್ನು ಅನುಕರಿಸಬಾರದು. ಸ್ವಂತಿಕೆ, ಸೃಜನ ಶೀಲತೆ ಬೆಳೆಸಿಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ಘರಾನ ಸಂಗೀತದ ಮೂಲಕ ಉದ್ಘಾಟಿಸಿದ ಸಂಗೀತ ವಿದ್ವಾನ್ ಡಾ. ಅಭಿಷೇಕ್ ಬಂಡೆಪ್ಪನವರ್ ಮಾತನಾಡಿ, ಸಂಗೀತ ಸಾಧನೆಗೆ ಮಾತ್ರವಲ್ಲ. ಎಲ್ಲರಿಗೂ ಸಂಗೀತದ ಧ್ಯಾನ ಇರಬೇಕು. ಸಂಗೀತದ ಧ್ಯಾನ ಇದ್ದರೆ ಇತರ ಪಠ್ಯ ಚಟುವಟಿಕೆಗಳಲ್ಲಿ ಸಂತೋಷದಿಂದ ಪಾಲ್ಗೊಳ್ಳಲು ಸಾಧ್ಯ ಎಂದರು.

ಶ್ರೀ ರಾಮ ಟ್ರಸ್ಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ. ಜಾಲಿ ಬೋಪಯ್ಯ, ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ನಿರ್ದೇಶಕ ಎಂ.ಎಸ್. ಸುಬ್ರಮಣ್ಯ, ಪ್ರಾಂಶುಪಾಲ ಪೆÇ್ರ. ಕಲ್ಯಾಟಂಡ ಪೂಣಚ್ಚ, ತೀರ್ಪುಗಾರರಾದ ಸಂಗೀತ ಶಿಕ್ಷಕಿ ಸರಸ್ವತಿ ಮನೋಹರಿ, ಡಯಾನ ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಿಂದ ಪ್ರಾರ್ಥನೆ, ಶಿಕ್ಷಕಿ ಕಂಗಾಂಡ ಸ್ಮಿತಾ ಸ್ವಾಗತ, ಪಾಡಿಯಮ್ಮಂಡ ಚಂದ್ರಕಲಾ ನಿರೂಪಿಸಿ, ಡಿಂಪಲ್ ವ್ಯಕ್ತಿ ಪರಿಚಯಿಸಿದರೆ, ಹಿರಿಯ ಶಿಕ್ಷಕಿ ಸುಬ್ಬಮ್ಮ ವಂದಿಸಿದರು.