ಮಡಿಕೇರಿ, ಜೂ.10 : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ಜಿಲ್ಲಾ ಬಾಲಭವನದÀ ಸಂಯುಕ್ತ ಆಶ್ರಯದಲ್ಲಿ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ಎರಡು ದಿನಗಳು ನಡೆಯುವ ಅಂತರ ಜಿಲ್ಲಾ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ದೊರೆಯಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹರೀಶ್ ಬಿ.ಎ. ಅವರು ಮಾತನಾಡಿ, ಬಾಲಭವನದ ಮಕ್ಕಳಲ್ಲಿ ಹುದುಗಿರುವ ಪ್ರತಿಭೆಗೆ ಶೈಕ್ಷಣಿಕವಾಗಿ ಅಲ್ಲದೆ ಕ್ರಿಯಾತ್ಮಕ ಹಾಗೂ ಸೃಜನಾತ್ಮಕವಾಗಿ ಸೂಕ್ತ ವೇದಿಕೆ ಕಲ್ಪಿಸುವಲ್ಲಿ ಕಾರ್ಯಕ್ರಮ ನಡೆಯಬೇಕು. ಹಾಗೆಯೇ ಮಕ್ಕಳಿಗೆ ವಿವಿಧ ಕಲೆ, ಸಾಂಸ್ಕøತಿಕ ಅರಿವನ್ನು ಉಂಟುಮಾಡುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದು ಆಶಿಸಿದರು.

ಕಾರ್ಯಕ್ರಮಕ್ಕೆ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಚಾಲನೆ ನೀಡಿ, ನಂತರ ಮಾತನಾಡಿ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಕ್ಕಳಿಗೆ ಸಾಂಸ್ಕøತಿಕ ಕಲಾ ಚಟುವಟಿಕೆಗಳ ಜೊತೆಗೆ ಆಯಾಯ ಜಿಲ್ಲೆಯ ಮಕ್ಕಳು ತಮ್ಮ ಜಿಲ್ಲೆಗಳ ಬಗೆಗಿನ ಅಭಿಮಾನದೊಂದಿಗೆ ಕಲೆ, ಸಂಸ್ಕøತಿಯನ್ನು ಪ್ರದರ್ಶಿಸುವಲ್ಲಿ ಉತ್ತಮ ವೇದಿಕೆಯಾಗುವಲ್ಲಿ ಬಾಲಭವನ ಸಮಿತಿ ಅವಕಾಶ ಕಲ್ಪಿಸಿಕೊಟ್ಟಿದೆ. ಅಂತರ ಜಿಲ್ಲಾ ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮದಲ್ಲಿ ಎಲ್ಲಾ ಮಕ್ಕಳು ಭಾಗವಹಿಸುವ ಮೂಲಕ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಎಂ.ವಿ.ಜಯರಾಮ್ ಪ್ರಾಸ್ತಾವಿಕವಾಗಿ ಮಾತನಾಡಿ ಬಾಲಭವನದ ವತಿಯಿಂದ ಎರಡು ದಿನಗಳು ನಡೆಯುವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ವಿವಿಧ ಕಲೆ ಹಾಗೂ ಸಂಸ್ಕøತಿಯ ಅರಿವನ್ನು ಮೂಡಿಸುವಲ್ಲಿ ರಸಪ್ರಶ್ನೆ, ನೃತ್ಯೋತ್ಸವ ಮಕ್ಕಳ ದಿನಾಚರಣೆ, ವಾರ್ಷಿಕ ಶಿಬಿರ, ಕಲಾಶ್ರಿ ಶಿಬಿರ, ನಾಟಕೋತ್ಸವ, ವಿಜ್ಞಾನ ಮಾದರಿಗಳ ಪ್ರದರ್ಶನ, ಸಾಂಸ್ಕøತಿಕ ವಿನಿಮಯ ಕಾರ್ಯಕ್ರಮ, ಬೇಸಿಗೆ ಶಿಬಿರ ಮುಂತಾದವುಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ರಾಜ್ಯದ ಬೀದರ್, ವಿಜಯಪುರ, ಕಲ್ಬುರ್ಗಿ, ಯಾದಗಿರಿ ಹಾಗೂ ಕೊಡಗು ಜಿಲ್ಲೆಗಳಿಂದ ತಲಾ 15 ಮಕ್ಕಳು ಹಾಗೂ ಸಿಬ್ಬಂದಿಗಳು ಜಿಲ್ಲೆಗೆ ಆಗಮಿಸಿದ್ದು ಈ 5 ಜಿಲ್ಲೆಗಳ ಸಾಂಸ್ಕøತಿಕ ವಿನಿಮಯವನ್ನು ಹಮ್ಮಿಕೊಂಡಿದ್ದು ಕೊಡಗು ಜಿಲ್ಲೆಯನ್ನು ಮುಖ್ಯ ಕೇಂದ್ರವನ್ನಾಗಿ ಆಯ್ಕೆ ಮಾಡಲಾಗಿದೆ. ವಿವಿಧ ಜಿಲ್ಲೆಗಳಿಂದ ಆಗಮಿಸಿದ ಮಕ್ಕಳಿಗೆ ತಾ. 11 ರಂದು ಸ್ಥಳೀಯ ಪ್ರೇಕ್ಷಣೀಯ ಸ್ಥಳಗಳ ವೀಕ್ಷಣೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದು,್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಗುವದು ಎಂದು ಮಾಹಿತಿ ನೀಡಿದರು. ಈ ಸಂದರ್ಭ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಬಾಲಭವನ ಸಮಿತಿ ಅಧ್ಯಕ್ಷೆ ಚಾರುಲತಾ ಸೋಮಲ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಸಹಾಯಕ ನಿರ್ದೇಶಕ ಜಯಶೀಲ, ಮಕ್ಕಳ ರಕ್ಷಣಾಧಿಕಾರಿ ನಾಗರಾಜು ಮತ್ತಿತರರು ಇದ್ದರು. ಸಂತ ಜೋಸೆಫರ ಶಾಲೆಯ ವಿದ್ಯಾರ್ಥಿನಿ ಮಾನಸಿ, ಯಾದಗಿರಿ ಜಿಲ್ಲೆಯ ಅಶ್ವಿನಿ, ಬೀದರ್ ಜಿಲ್ಲೆಯ ಸ್ನೇಹಾ, ವಿಜಯಪುರ ಜಿಲ್ಲೆಯ ಶ್ವೇತಾ ಅವರು ತಮ್ಮ ಜಿಲ್ಲೆಯ ಸಂಸ್ಕøತಿ, ಆಚಾರ-ವಿಚಾರ, ಪ್ರಾದೇಶಿಕ ವೈವಿದ್ಯತೆಗಳ ಬಗೆಗಿನ ಪರಿಚಯ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಬಾಲಭವನದ ವಿದ್ಯಾರ್ಥಿಗಳು ನಾಡಗೀತೆ ಹಾಗೂ ಗಾಳಿಬೀಡು ನವೋದಯ ಶಾಲಾ ವಿದ್ಯಾರ್ಥಿಗಳು ರೈತಗೀತೆಯನ್ನು ಹಾಡಿದರು.