ಸಿದ್ದಾಪುರ, ಜೂ. 18: ಇಲ್ಲಿನ ಅಂಚೆ ಕಚೇರಿಯಲ್ಲಿ ಕಳೆದ 4 ವರ್ಷಗಳಿಂದ ಕರ್ತವ್ಯ ನಿರ್ವಹಿಸಿ, ಪಾಲಿಬೆಟ್ಟ ಅಂಚೆ ಕಚೇರಿಗೆ ವರ್ಗಾವಣೆಗೊಂಡ ಸುಧಾ ಅವರನ್ನು ಅಂಚೆ ಕಚೇರಿಯ ಸಿಬ್ಬಂದಿಗಳು ಬೀಳ್ಕೊಟ್ಟರು.
ಸಿದ್ದಾಪುರ ಅಂಚೆ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಂಚೆ ಪಾಲಕ ಎಂ.ಕೆ. ಮೋಹನ್, ಸಿಬ್ಬಂದಿಗಳಾದ ಸ್ಮಿತಾ, ಮಂಜುನಾಥ್, ರಾಜು, ಬೋಜ ಹಾಗೂ ನಿವೃತ್ತ ಉದ್ಯೋಗಿ ಫಿಲಿಪ್ ಇದ್ದರು.