ಮಡಿಕೇರಿ, ಸೆ. 14: ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿ ವತಿಯಿಂದ ಅ. 9 ರಂದು ನಗರದ ಗಾಂಧಿ ಮೈದಾನದಲ್ಲಿ ಮಕ್ಕಳ ದಸರಾ ಆಯೋಜಿಸಲಾಗಿದೆ.
ಜಿಲ್ಲೆಯ ಶಾಲಾ ವಿದ್ಯಾರ್ಥಿ ಗಳಿಗಾಗಿ ನಾಲ್ಕನೇ ವರ್ಷದ ಮಕ್ಕಳ ದಸರಾದಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಕ್ಕಳಿಗಾಗಿ ಮಕ್ಕಳ ಸಂತೆ, ಮಕ್ಕಳ ಮಂಟಪ, ಛದ್ಮವೇಷÀ ಸ್ಪರ್ಧೆಗಳು ಆಯೋಜಿತವಾಗಿದೆ. ಮಕ್ಕಳ ಸಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗಗಳಲ್ಲಿ ನಡೆಯಲಿದೆ. ಮಕ್ಕಳ ಸಂತೆಯಲ್ಲಿ ಸಂತೆ ವ್ಯಾಪಾರ ಮತ್ತು ಅಂಗಡಿ ವ್ಯಾಪಾರಗಳು ಪ್ರತ್ಯೇಕ ವಿಭಾಗದಲ್ಲಿ ಆಯೋಜಿತವಾಗಿದೆ. ಛದ್ಮವೇಷ ಸ್ಪರ್ಧೆಯು 4 ವರ್ಷದೊಳಗೆ, 5 ರಿಂದ 8, 9 ರಿಂದ 12 ವರ್ಷದೊಳಗಿನ ವಿಭಾಗದಲ್ಲಿ ಆಯೋಜಿತವಾಗಿದೆ.
ಈ ಬಾರಿ ಪ್ರಾಥಮಿಕ ಮತ್ತು ಪ್ರೌಢÀಶಾಲಾ ವಿಭಾಗಗಳಲ್ಲಿ ಮಕ್ಕಳಿಗೆ ಸೈನ್ಸ್ ಮಾಡೆಲಿಂಗ್ ಮತ್ತು ಕ್ಲೇ ಮಾಡೆಲಿಂಗ್ ಸ್ಪರ್ಧೆ ಆಯೋಜಿತವಾಗಿದೆ. ಮಕ್ಕಳ ದಸರಾ ಸ್ಪರ್ಧೆಗಳು ಅ. 9 ರಂದು ಭಾನುವಾರ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿದೆ. ಮಡಿಕೇರಿ ರೋಟರಿ ಮಿಸ್ಟಿ ಹಿಲ್ಸ್ ಮಕ್ಕಳ ದಸರಾ ಆಯೋಜನೆಗೆ ಐದನೇ ವರ್ಷವೂ ತನ್ನ ಸಹಯೋಗ ನೀಡಿದೆ ಎಂದು ದಸರಾ ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಅನಿಲ್ ಎಚ್.ಟಿ. ತಿಳಿಸಿದ್ದಾರೆ.
ಮಕ್ಕಳ ದಸರಾದ ವಿವಿಧ ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಲು ತಾ.24 ಕೊನೆಯ ದಿನವಾಗಿದೆ. ಹೆಸರು ನೋಂದಣಿಗೆ ಸಂಪರ್ಕ ಸಂಖ್ಯೆಗಳು - ಶಶಿಮೊಣ್ಣಪ್ಪ -9448422321 , ಲಕ್ಷ್ಮೀಪ್ರಸಾದ್ ಪೆರ್ಲ -9448433366 ಶ್ರೀಧರ ಹೂವಲ್ಲಿ - 9481773066.
ಮಕ್ಕಳ ದಸರಾ ದಿನದಂದು ಸಂಜೆ 6 ಗಂಟೆಯಿಂದ ಗಾಂಧಿ ಮೈದಾನದ ಕಲಾಸಂಭ್ರಮ ವೇದಿಕೆಯಲ್ಲಿ ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿ ತಂಡಗಳಿಗಾಗಿ ಪ್ರತ್ಯೇಕ ವಿಭಾಗಗಳಲ್ಲಿ ನೃತ್ಯ ಸ್ಪರ್ಧೆ ಆಯೋಜಿಸಲಾಗಿದೆ. ಶಾಲಾ ತಂಡಗಳು ನೃತ್ಯ ಸ್ಪರ್ಧೆಗೆ ಹೆಸರು ನೋಂದಾಯಿಸಲು ತಾ.24 ಕೊನೆಯ ದಿನವಾಗಿದೆ. ಹೆಸರು ನೋಂದಣಿಗೆ ಸಂಪರ್ಕ ಸಂಖ್ಯೆಗಳು - ಸಂಗೀತ ಪ್ರಸನ್ನ 9591173292 - ಸವಿತಾ ರಾಕೇಶ್ -7026360963 ವೀಣಾಕ್ಷಿ -8762303208.
ಮಕ್ಕಳಿಗಾಗಿ ಜನಪದ ಕ್ರೀಡಾ ಸ್ಪರ್ಧೆ
ಕೊಡಗು ಜಿಲ್ಲಾ ಜಾನಪದ ಪರಿಷತ್, ಮಡಿಕೇರಿ ತಾಲೂಕು ಜನಪದ ಪರಿಷತ್ ಮತ್ತು ದಸರಾ ಸಾಂಸ್ಕøತಿಕ ಸಮಿತಿ ಸಂಯುಕ್ತಾಶ್ರಯದಲ್ಲಿ ಮಕ್ಕಳ ದಸರಾ ಅಂಗವಾಗಿ ಇದೇ ಮೊದಲ ಬಾರಿಗೆ ಅ.9 ರಂದು ಭಾನುವಾರ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಕೊಡಗು ಜಿಲ್ಲೆಯ ವಿದ್ಯಾರ್ಥಿಗಳಿಗಾಗಿ ವಿವಿಧ ಜನಪದ ಕ್ರೀಡಾಸ್ಪರ್ಧೆ ಆಯೋಜಿಸಲಾಗಿದೆ.
ಚನ್ನಮಣೆ, ಬುಗುರಿ, ಗೋಲಿಯಾಟ, ಬಳೆ ಆಟ, ಕಲ್ಲಾಟ, ಕುಂಟೋಬಿಲ್ಲೆ, ಚೌಕಬಾರ ಸ್ಪರ್ಧೆಗಳನ್ನು 12 ವರ್ಷದೊಳಗಿನ ಮಕ್ಕಳಿಗಾಗಿ ಆಯೋಜಿಸಲಾಗಿದೆ. ಈ ಮೂಲಕ ಗ್ರಾಮೀಣ ಜನಪದ ಕ್ರೀಡೆಗಳಿಗೆ ಉತ್ತೇಜನ ನೀಡುವದು ಈ ಸ್ಪರ್ಧೆಯ ಉದ್ದೇಶವಾಗಿದೆ ಎಂದು ಜಿಲ್ಲಾ ಜನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ ತಿಳಿಸಿದ್ದಾರೆ.
ಮಕ್ಕಳ ದಸರಾ ಜನಪದ ಕ್ರೀಡಾ ಸ್ಪರ್ಧೆಗೆ ಹೆಸರು ನೋಂದಾಯಿಸಲು ಕೊನೇ ದಿನಾಂಕ ತಾ.24 ಆಗಿದೆ. ಹೆಸರು ನೋಂದಾಯಿಸಲು ಸಂಪರ್ಕ ಸಂಖ್ಯೆಗಳು - ಮುನೀರ್ ಅಹಮ್ಮದ್ - 9886181613. ರಾಜೇಶ್ - 9448587882. ಸಂಪತ್ ಕುಮಾರ್ - 9448614999. ನವೀನ್ ಅಂಬೆಕಲ್ - 9448005642. ಜಯಲಕ್ಷೀ - 9845732271. ಸಿದ್ದರಾಜು - 9449405609.