ಮಡಿಕೇರಿ, ಅ.3: ಮಡಿಕೇರಿ ದಸರಾ ಜನೋತ್ಸವದ ಅಂಗವಾಗಿ ದಸರಾ ಬಹುಭಾಷಾ ಕವಿಗೋಷ್ಠಿ ಸಮಿತಿ ವತಿಯಿಂದ ಏರ್ಪಡಿಸಿಕೊಂಡು ಬರಲಾಗುತ್ತಿರುವ ಬಹುಭಾಷಾ ಕವಿಗೋಷ್ಠಿ ತಾ. 8ರಂದು ನಡೆಯಲಿದೆ. ಈಗಾಗಲೇ ಕವಿಗೋಷ್ಠಿಯಲ್ಲಿ ಭಾಗವಹಿಸಲಿರುವ ಕವಿಗಳು ಹಾಗೂ ಕವನಗಳನ್ನು ಆಯ್ಕೆ ಮಾಡಲಾಗಿದೆ.
ಆಹ್ವಾನಿತ ಕವಿಗಳಾಗಿ ಕನ್ನಡದಲ್ಲಿ ಕುಶಾಲನಗರದ ಸುನಿತಾ ಲೋಕೇಶ್, ಅರೆಭಾಷೆಯಲ್ಲಿ ಬೆಟ್ಟಗೇರಿಯ ಕಡ್ಲೇರ ತುಳಸಿ ಮೋಹನ್, ಕೊಡವ ಭಾಷೆಯಲ್ಲಿ ಮಡಿಕೇರಿಯ ಪತ್ರಕರ್ತ ಐತಿಚಂಡ ರಮೇಶ್ ಉತ್ತಪ್ಪ ಭಾಗವಹಿಸಲಿದ್ದಾರೆ. ಇನ್ನುಳಿದಂತೆ ಕನ್ನಡದಲ್ಲಿ ಮಡಿಕೇರಿಯ ಪುಷ್ಪ ಡಿ.ಹೆಚ್, ಮದೆನಾಡಿನ ಬಿ.ವಿ.ಸುಗುಣ, ಸುಂಟಿಕೊಪ್ಪದ ಎಸ್.ಜೆ.ಡಿಸೋಜಾ, ಮಡಿಕೇರಿಯ ಎಂ.ವಿ.ಕಾಳಮ್ಮ, ಬಾಗಲಕೋಟೆಯ ಬದರೀನಾಥ ಜಹಾಗೀರದಾರ, ಸೋಮವಾರಪೇಟೆಯ ಕೆ.ಪಿ. ಸುದರ್ಶನ್, ಕೆ.ಎಸ್. ಕಾಂಚನ, ನ.ಲ.ವಿಜಯ, ರಾಣಿ ರವೀಂದ್ರ, ಕೆ.ವಿ. ಪುಟ್ಟಣ್ಣ ಆಚಾರ್ಯ, ಎಂ.ಎ.ರುಬೀನ, ಬೆಟ್ಟಗೇರಿಯ ಎ.ಹೆಚ್. ಸತೀಶ್ಕುಮಾರ್, ಸೂರತ್ಕಲ್ನ ನವೀನ್ ಪಿರೇರ, ಸುಳ್ಯದ ಅನುರಾಧ ಕುರುಂಜಿ, ಮಡಿಕೇರಿಯ ಹೇಮಲತ ಪೋರ್ಣಪ್ರಕಾಶ್, ಆಂಗ್ಲ ಭಾಷೆಯಲ್ಲಿ ಶನಿವಾರಸಂತೆಯ ಹೆಚ್.ಪಿ. ಪ್ರೇಮ್ಕುಮಾರ್, ಮಡಿಕೇರಿಯ ಫಲ್ಗುಣ್ ಪೊನ್ನಣ್ಣ, ಅರೆಭಾಷೆಯಲ್ಲಿ ತಣ್ಣಿಮಾನಿಯ ರಂಜಿತ್ ದಾಮೋದರ್ ಕುದುಪಜೆ, ಮಡಿಕೇರಿಯ ಕೊಟ್ಟಕೇರಿಯನ ಲೀಲಾ ದಯಾನಂದ, ಕುಶಾಲನಗರದ ಕಾನಡ್ಕ ಡೀನಾ ದೇವಯ್ಯ, ಹೊಸ್ಕೇರಿಯ ಕೊಂಪುಳಿರ ಇಂದ್ರಾವತಿ ದೇವಯ್ಯ, ಮಡಿಕೇರಿಯ ಅಂಕಿತಾ ಪ್ರಭು, ಕೊಡವ ಭಾಷೆಯಲ್ಲಿ ಅರಮೇರಿಯ ಮಳುವಂಡ ನಳಿನಿ ಬಿಂದು, ಮಡಿಕೇರಿಯ ಗೌರಮ್ಮ ಮಾದಮಯ್ಯ, ವೀರಾಜಪೇಟೆಯ ಮುಲ್ಲೇಂಗಡ ರೇವತಿಪೂವಯ್ಯ, ಎಂ.ಕೆ.ನಳಿನಾಕ್ಷಿ, ಮಡಿಕೇರಿಯ ಪತ್ರಕರ್ತ ಎಂ.ಇ.ಮಹಮ್ಮದ್, ತುಳು ಭಾಷೆಯಲ್ಲಿ ಮಡಿಕೇರಿಯ ನೀರಬಿದಿರೆ ನಾರಾಯಣ, ಸೋಮವಾರಪೇಟೆಯ ದೀಪಿಕಾ ಸುದರ್ಶನ್, ಬ್ಯಾರಿ ಭಾಷೆಯಲ್ಲಿ ಮಡಿಕೇರಿಯ ಎಂ.ಅಬ್ದುಲ್ಲ, ಹಿಂದಿಯಲ್ಲಿ ಮಡಿಕೇರಿಯ ಎಂ.ಈ.ಮನೋಜ್, ತೆಲುಗಿನಲ್ಲ್ಲಿ ಕುಶಾಲನಗರದ ಸಬಲಂ ಬೋಜಣ್ಣ ರೆಡ್ಡಿ, ಮರಾಠಿಯಲ್ಲಿ ಮಡಿಕೇರಿಯ ಭೀಂರಾವ್ ವಾಷ್ಟರ್, ಕುಂಬಾರ ಭಾಷೆಯಲ್ಲಿ ಬೆಟ್ಟಗೇರಿಯ ಹೆಚ್.ವಿ. ಸುನಿತಾ ವಿಶ್ವನಾಥ್, ಕೊಂಕಣಿಯಲ್ಲಿ ವೀರಾಜಪೇಟೆಯ ಚಾಲ್ರ್ಸ್ ಡಿಸೋಜಾ, ಹವ್ಯಕ ಭಾಷೆಯಲ್ಲಿ ಮೂರ್ನಾಡಿನ ಪಿ.ವಿ.ಭಟ್, ತಮಿಳಿನಲ್ಲಿ ಪತ್ರಕರ್ತ ವಿಘ್ನೇಶ್ ಎಂ.ಭೂತನಕಾಡು, ಹಾಗೂ ಮಕ್ಕಳಾದ ಕೃತಜ್ಞಾ ಬೆಸೂರು, ಬೆಟ್ಟಗೇರಿಯ ಕಡ್ಲೇರ ಮೋಹಿತ್, ಮಡಿಕೇರಿಯ ಐತಿಚಂಡ ನಿಪಾ ಮುತ್ತಮ್ಮ ಕವನ ವಾಚನ ಮಾಡಲಿದ್ದಾರೆ ಎಂದು ಕವಿಗೋಷ್ಠಿ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ತಿಳಿಸಿದ್ದಾರೆ. ಕಳೆದ ಸಾಲಿನಿಂದ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗುತ್ತಿದ್ದು, ಈ ಬಾರಿ ಕೂಡ ಬಹುತೇಕ ಹೊಸಬರಿಗೆ ಹೆಚ್ಚಿನ ಅವಕಾಶ ನೀಡಲಾಗಿದೆ. ಹೊರ ಜಿಲ್ಲೆಯ ಪ್ರತಿಭಾನ್ವಿತರಿಗೂ ಅವಕಾಶ ದೊರೆತಿದೆ. ಈ ಬಾರಿ ಒಟ್ಟು 104 ಕವನಗಳು ಬಂದಿದ್ದು, ಈ ಪೈಕಿ ಆಯ್ಕೆ ಸಮಿತಿ 44 ಕವನಗಳನ್ನು ಆಯ್ಕೆ ಮಾಡಿರುವದಾಗಿ ಅವರು ತಿಳಿಸಿದ್ದಾರೆ.