ವೀರಾಜಪೇಟೆ, ಆ. 12: ಸ್ವಾತಂತ್ರೋತ್ಸವದ ಪ್ರಯುಕ್ತ ವೀರಾಜಪೇಟೆ ರೋಟರಿ ಕ್ಲಬ್ನಿಂದ ಮೆರಥಾನ್ ಓಟದ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ರಾಬಿನ್ ಮಂದಪ್ಪ ತಿಳಿಸಿದರು.ರೋಟರಿ ಕ್ಲಬ್ನಿಂದ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ರಾಬಿನ್ ಅವರು ಪಾಲಂಗಾಲದ ಮಹೇಂದ್ರ ಕ್ಲಬ್ನ ಸಹಯೋಗದೊಂದಿಗೆ ಆಗಸ್ಟ್ 21ರಂದು ಸ್ಪರ್ಧೆ ನಡೆಯಲಿದ್ದು ಅಂದು ಬೆಳಿಗ್ಗೆ 8-30 ಗಂಟೆಗೆ ಮೆರಥಾನ್ ಓಟದ ಸ್ಪರ್ಧೆಯನ್ನು ರಾಷ್ಟ್ರದ ಮೆರಥಾನ್ ಅಥ್ಲೆಟಿಕ್ ಎಂ.ಸ್ಫೂರ್ತಿ ಸೀತಮ್ಮ ಉದ್ಘಾಟಿಸಿಲಿದ್ದಾರೆ. ಪುರುಷರಿಗೆ ಬೆಳಿಗ್ಗೆ 8-30 ಗಂಟೆಗೆ ಅಮ್ಮತ್ತಿಯ ಪೊಲೀಸ್ ಠಾಣೆಯ ಮುಂಭಾಗದ ರಸ್ತೆಯಿಂದ, ಮಹಿಳೆಯರಿಗೆ (ಜೂನಿಯರ್ಸ್) ಕೊಮ್ಮೆತೋಡು ಜಂಕ್ಷನ್ನಿಂದ ವೀರಾಜಪೇಟೆ ಪಟ್ಟಣದ ಸಿದ್ದಾಪುರ ತಿರುವಿನ ನೆಲ್ಲಮಕ್ಕಡ ಮೋಹನ್ ಮನೆಯವರೆಗೆ ಮೆರಥಾನ್ ಓಟದ ಸ್ಫರ್ಧೆ ಹಮ್ಮಿಕೊಳ್ಳಲಾಗಿದೆ ಎಂದರು.
ಕ್ಲಬ್ನ ಸದಸ್ಯ ಆದಿತ್ಯ ಮಾತನಾಡಿ ಓಟದ ಪ್ರತಿಭೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆ ಆಯೋಜಿಸಲಾಗಿದೆ. ಕ್ರೀಡೆಗಳಲ್ಲಿ ಮೆರಥಾನ್ ಒಂದು ವಿಶಿಷ್ಟ ಸ್ಪರ್ಧೆಯಾಗಿದ್ದು ಯಾವದೇ ಬೇಧ ಭಾವವಿಲ್ಲದೆ ಪ್ರತಿಯೊಬ್ಬರು ಓಟದಲ್ಲಿ ಭಾಗವಹಿಸಬಹುದು, ಆಸಕ್ತರು ಹೆಚ್ಚಿನ ಮಾಹಿತಿಗಳಿಗೆ ಮೊಬೈಲ್ ಸಂಖ್ಯೆ 9731121119 ಅಥವಾ 9742402682 ನಂಬರನ್ನು ಸಂಪರ್ಕಿಸಬಹುದು ಎಂದು ಹೇಳಿದರು. ರೋಟರಿ ಸದಸ್ಯ ಚೇತನ್ ಮುತ್ತಣ್ಣ ಮಾತನಾಡಿ, ವಿಜೇತರಿಗೆ ಆಕರ್ಷಕ ರೋಲಿಂಗ್ ಟ್ರೋಫಿ ಹಾಗೂ ನಗದು ಬಹುಮಾನ ನೀಡಲಾಗುವದು ಎಂದು ತಿಳಿಸಿದರು.