ಮಡಿಕೇರಿ, ನ. 27: ಜಿಲ್ಲೆಯಲ್ಲಿ ಈ ವರ್ಷ ಅಕ್ಟೋಬರ್ 16 ರವರೆಗೆ ನಡೆಸಿದ ಆರೋಗ್ಯ ಪರೀಕ್ಷೆಯಲ್ಲಿ 121 ಮಂದಿ ಹೆಚ್‍ಐವಿ ಸೋಂಕಿತರು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿರುವ 685 ಮಹಿಳಾ ಲೈಂಗಿಕ ಕಾರ್ಯಕರ್ತರಲ್ಲಿ 10 ಮಂದಿ ಹೆಚ್‍ಐವಿ ಪೀಡಿತರಾಗಿದ್ದಾರೆ ಎಂದು ಜಿಲ್ಲಾ ಪ್ರಬಾರ ಏಡ್ಸ್ ನಿಯಂತ್ರಣಾಧಿಕಾರಿ ಡಾ| ಶಿವಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸುಮಾರು 685 ಮಹಿಳಾ ಲೈಂಗಿಕ ಕಾರ್ಯಕರ್ತರು ಹಾಗೂ 123 ಮಂದಿ ಪುರುಷ ಪುರುಷರೊಂದಿಗೆ ಲೈಂಗಿಕ ಸಂಪರ್ಕ ಹೊಂದಿರುವವರು ಇದ್ದಾರೆ. ಇವರುಗಳಿಗೆ ಮೂರು ತಿಂಗಳಿಗೊಮ್ಮೆ ಹೆಚ್‍ಐವಿ ಪರೀಕ್ಷೆ ನಡೆಸಲಾಗುತ್ತಿದ್ದು, 10 ಮಂದಿ ಮಹಿಳೆÉಯರು ಹಾಗೂ 8 ಮಂದಿ ಪÀÅರುಷರಲ್ಲಿ ಹೆಚ್‍ಐವಿ ಇರುವದು ದೃಢಪಟ್ಟಿದೆ ಎಂದು ತಿಳಿಸಿದರು. ದೇಶದಲ್ಲಿ ಹೆಚ್‍ಐವಿ ಸೋಂಕಿತÀ ರಾಜ್ಯಗಳಲ್ಲಿ ಕರ್ನಾಟಕ 5ನೇ ಸ್ಥಾನದಲ್ಲಿದ್ದು, ಕೊಡಗು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಅತ್ಯಂತ ಕಡಿಮೆ ಇದೆ ಎಂದು ಡಾ. ಶಿವಕುಮಾರ್ ಹೇಳಿದರು.

ಹೆಚ್‍ಐವಿ ಸೋಂಕಿತ ತಾಯಂದಿರಿಗೆ ಹುಟ್ಟಿದ 6 ವಾರದಿಂದ 18 ತಿಂಗಳ ಒಳಗಿನ 82 ಮಕ್ಕಳನ್ನು ಪರೀಕ್ಷೆಗೆ ಒಳಪಡಿಸಿದಾಗ 3 ಮಕ್ಕಳು ಹೆಚ್‍ಐವಿ ಸೋಂಕಿಗೆ ಒಳಗಾಗಿರುವದು ಕಂಡು ಬಂದಿದೆ. ಜಿಲ್ಲೆಯಲ್ಲಿ 2015 ರಲ್ಲಿ ಮಡಿಕೇರಿ ತಾಲೂಕಿನಲ್ಲಿ 24, ಸೋಮವಾರಪೇಟೆ ತಾಲೂಕಿನಲ್ಲಿ 45, ವೀರಾಜಪೇಟೆ ತಾಲೂಕಿನಲ್ಲಿ 75 , ಗಡಿಭಾಗದ ಜಿಲ್ಲೆಗಳಲ್ಲಿ 27 ಹೀಗೆ ಒಟ್ಟು 171 ಮಂದಿಯಲ್ಲಿ ಹೆಚ್‍ಐವಿ ಸೋಂಕಿರುವದನ್ನು ಪತ್ತೆ ಹಚ್ಚಲಾಗಿದೆ.

2016 ಅಕ್ಟೋಬರ್ 16ರವರೆಗೆ ನಡೆಸಿದ ಪರೀಕ್ಷೆಯಲ್ಲಿ ಮಡಿಕೆÉೀರಿ ತಾಲೂಕು 16, ಸೋಮವಾರಪೇಟೆ ತಾಲೂಕು 35, ವೀರಾಜಪೇಟೆ ತಾಲೂಕು 55 ಹಾಗೂ ಗಡಿ ಜಿಲ್ಲೆಗಳಲ್ಲಿ 15 ಹೀಗೆ ಒಟ್ಟು 121 ಮಂದಿಯಲ್ಲಿ ಹೆಚ್‍ಐವಿ ಸೋಂಕು ಪತ್ತೆಯಾಗಿದೆ. ಕೊಡಗು ಜಿಲ್ಲೆಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಇತರ ಜಿಲ್ಲೆಗಳಿಂದ ಲೈಂಗಿಕ ಕಾರ್ಯಕರ್ತೆಯರು ಬರುವ ಸಾಧ್ಯತೆಗಳಿರುವದರಿಂದ ಸೋಂಕು ಹರಡುತ್ತಿರುವದು ಗಮನಕ್ಕೆ ಬಂದಿದೆ. ಪಕ್ಕದ ಜಿಲ್ಲೆಯಾದ ಹಾಸನ, ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ, ಹುಣಸೂರು ಹಾಗೂ ಇತರ ಊರುಗಳ ಹೆಚ್‍ಐವಿ ಸೋಂಕಿತರು ಕೂಡ ಕೊಡಗಿನ ಪರೀಕ್ಷಾ ಕೇಂದ್ರಗಳಲ್ಲಿ ದಾಖಲಾಗುತ್ತಿರುವದರಿಂದ ಹೆಚ್‍ಐವಿ ಸೋಂಕಿತರ ಸಂಖ್ಯೆ ಹೆಚ್ಚು ಎಂದು ಗೋಚರಿಸುತ್ತದೆ. ಇದೇ ರೀತಿ ಜಿಲ್ಲೆಯ ಹೆಚ್‍ಐವಿ ಸೋಂಕಿತರು ಕೂಡ ಸಮಾಜಕ್ಕೆ ಅಂಜಿ ಇತರ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆಯುವದು ಸಾಮಾನ್ಯವಾಗಿದೆ ಎಂದು ಡಾ. ಶಿವಕುಮಾರ್ ಮಾಹಿತಿ ನೀಡಿದರು. 2009ರಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಎಆರ್‍ಟಿ ಕೇಂದ್ರ ಆರಂಭಗೊಂಡಿದ್ದು, 2016 ಅಕ್ಟೋಬರ್ 16 ರವರೆಗೆ 1397 ಹೆಚ್‍ಐವಿ ಸೋಂಕಿತರು ನೋಂದಾಯಿ ಸಲ್ಪಟ್ಟಿದ್ದಾರೆ. ಇವರಲ್ಲಿ 953 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೆಚ್‍ಐವಿ ಸೋಂಕಿತರಲ್ಲಿ ಕ್ಷಯ ರೋಗ ಸಾಮಾನ್ಯವಾಗಿದ್ದು, 2014 ರಲ್ಲಿ 12 ಕ್ಷಯ ರೋಗಿಗಳಿಗೆ ಮತ್ತು 2015 ರಲ್ಲಿ 5 ಮಂದಿಗೆ ಹೆಚ್‍ಐವಿ ಸೋಂಕು ಕಂಡು ಬಂದಿದೆ. ಜಿಲ್ಲೆಯ ಒಟ್ಟು ಹೆಚ್‍ಐವಿ ಸ್ಥಿತಿಗತಿ ಬಗ್ಗೆ ಶೇಕಡಾವಾರು ಲೆಕ್ಕದ ಪ್ರಕಾರ 2014 ರಲ್ಲಿ ಹಾಗೂ 15 ರಲ್ಲಿ ಸಾಮಾನ್ಯರಲ್ಲಿ ಶೇ.0.8 ಹಾಗೂ ಗರ್ಭಿಣಿಯರಲ್ಲಿ 2014 ರಲ್ಲಿ 0.15 ಮತ್ತು 2015 ರಲ್ಲಿ 0.11 ರಷ್ಟು ಸೋಂಕಿತರು ಕಂಡು ಬಂದಿದ್ದಾರೆ. ಜಿಲ್ಲೆಯಲ್ಲಿ 38 ಐಸಿಟಿಸಿ ಕೇಂದ್ರ, 1 ಎಆರ್‍ಟಿ ಕೇಂದ್ರ, 3 ಲಿಂಕ್ ಎಆರ್‍ಟಿ ಕೇಂದ್ರ, 4 ಇಐಡಿ ಕಾರ್ಯನಿರ್ವಹಿಸುತ್ತಿದ್ದು, ಸ್ವಯಂ ಸೇವಾ ಸಂಸ್ಥೆಗಳಾದ ಆಶೋದಯ ಸಮಿತಿ, ಆಶಾ ಕಿರಣ, ಒಡಿಪಿ, ಸ್ನೇಹಾಶ್ರಯ ಸಮಿತಿ, ಸರ್ವೋದಯ ಹೆಚ್‍ಐವಿ ಬಾಧಿತರ ಸಂಘ ಇವುಗಳು ಹೆಚ್‍ಐವಿ ಸೋಂಕಿತರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ಮತ್ತು ಜಾಗೃತಿ ಮೂಡಿಸುವ ಸೇವೆಯಲ್ಲಿ ತೊಡಗಿಸಿಕೊಂಡಿವೆ ಎಂದು ಡಾ| ಶಿವಕುಮಾರ್ ತಿಳಿಸಿದರು. ಇಡೀ ವಿಶ್ವದಲ್ಲಿ 36.7 ಮಿಲಿಯನ್ ಜನರು ಹೆಚ್‍ಐವಿ ಸೋಂಕಿತರಾಗಿದ್ದು, ಇವರಲ್ಲಿ