*ಗೋಣಿಕೊಪ್ಪ, ಜು. 25: ಕನ್ನಡ ಜಾಗೃತಿ ಅಭಿಯಾನಕ್ಕೆ ತಾ. 27ರಂದು (ನಾಳೆ) ಕನ್ನಡ ಸಾಹಿತ್ಯ ಪರಿಷತ್ತು ವೀರಾಜಪೇಟೆ ತಾಲೂಕು ಘಟಕ ವತಿಯಿಂದ ಚಾಲನೆ ನೀಡಲಾಗುವದು ಎಂದು ಕಸಾಪ ಕಾರ್ಯದರ್ಶಿ ಚಮ್ಮಟೀರ ಪ್ರವೀಣ್ ತಿಳಿಸಿದ್ದಾರೆ.

ಅಂದು ಬೆಳಗ್ಗೆ 11 ಗಂಟೆಗೆ ವೀರಾಜಪೇಟೆ ಬಸ್ ನಿಲ್ದಾಣದಲ್ಲಿ ಕಸಾಪ ಜಿಲ್ಲಾ ಅಧ್ಯಕ್ಷ ಲೊಕೇಶ್ ಸಾಗರ್ ಚಾಲನೆ ನೀಡಲಿದ್ದಾರೆ. ತಾಲೂಕು ಘಟಕ ಅಧ್ಯಕ್ಷ ಮುಲ್ಲೆಂಗಡ ಮಧೋಶ್ ಪೂವಯ್ಯ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ. ಮುಖ್ಯ ಅಥಿತಿಗಳಾಗಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ತಾಲೂಕು ದಂಡಾಧಿಕಾರಿ ಮಹದೇವಸ್ವಾಮಿ, ಪೊಲೀಸ್ ಉಪಾಧ್ಯಕ್ಷ ನಾಗಪ್ಪ, ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಮಾದಪಂಡ ಕಾವೇರಪ್ಪ, ಖಾಸಗಿ ಬಸ್ ಕಾರ್ಮಿಕರ ಸಂಘದ ಅಧ್ಯಕ್ಷ ಮುಲ್ಲೆಂಗಡ ಅಶೋಕ್, ಕರ್ನಾಟಕ ಸಂಘ ಅಧ್ಯಕ್ಷ ಮಾಲೇಟಿರ ಬೆಲ್ಲು ಬೋಪಯ್ಯ, ವಿಶೇಷ ಆಹ್ವಾನಿತರಾಗಿ ಕಸಾಪ ಪೊನ್ನಂಪೇಟೆ ಹೋಬಳಿ ಅಧ್ಯಕ್ಷ ಡಾ. ಚಂದ್ರಶೇಖರ್ ಅಮ್ಮತಿ ಹೋಬಳಿ ಅಧ್ಯಕ್ಷ ಎಂ.ಎಸ್ ವೆಂಕಟೇಶ್, ಶ್ರೀಮಂಗಲ ಹೋಬಳಿ ಅಧ್ಯಕ್ಷ ಚೆಟ್ಟಂಗಡ ರವಿ ಸುಬ್ಬಯ್ಯ ಉಪಸ್ಥಿತರಿರುವರು ಎಂದು ತಿಳಿಸಿದ್ದಾರೆ.