ಮಡಿಕೇರಿ, ಜೂ. 10: ಕರ್ನಾಟಕ ಬ್ಯಾಡ್‍ಮಿಂಟನ್ ಸಂಸ್ಥೆ ಬೆಂಗಳೂರು ಹಾಗೂ ಕೊಡಗು ಜಿಲ್ಲಾ ಬ್ಯಾಡ್‍ಮಿಂಟನ್ ಸಂಸ್ಥೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ ಉಚಿತ ಬ್ಯಾಡ್‍ಮಿಂಟನ್ ತರಬೇತಿ ಮುಕ್ತಾಯಗೊಂಡಿತು. ಸಮಾರಂಭವನ್ನು ಕೊಡಗು ಜಿಲ್ಲಾ ಬ್ಯಾಡ್‍ಮಿಂಟನ್ ಸಂಸ್ಥೆಯ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ ಹಾಗೂ ಕೊಡಗು ಜಿಲ್ಲಾ ಬ್ಯಾಡ್‍ಮಿಂಟನ್ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಧರಣೇಂದ್ರ ಅವರ ಉಪಸ್ಥಿತಿಯಲ್ಲಿ ನೆರವೇರಿಸಲಾಯಿತು. ಈ ಸಂದರ್ಭ ಬ್ಯಾಡ್‍ಮಿಂಟನ್ ತರಬೇತುದಾರ ಮೇದುರ ಅರುಣ್ ಪೆಮ್ಮಯ್ಯ ಉಪಸ್ಥಿತರಿದ್ದರು.