ಮಡಿಕೇರಿ, ಜೂ. 12: ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಹೆಮ್ಮೆತ್ತಾಳು ಗ್ರಾಮದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ನೂತನವಾಗಿ ನಿರ್ಮಿಸಲಾಗಿರುವ ಸ್ಮಶಾನದ ಬಳಿ ಹಾಗೂ ಚಾಮುಂಡೇಶ್ವರಿ ದೇವಾಲಯ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಹೆಮ್ಮೆತ್ತಾಳು ವಾರ್ಡ್‍ನ ಗ್ರಾ.ಪಂ. ಸದಸ್ಯ ಬಿ.ಎನ್. ರಮೇಶ್ ಹಾಗೂ ಎಂ.ಎ. ರತಿ ಅವರುಗಳು ಗಿಡಗಳನ್ನು ನೆಟ್ಟರು. ಈ ಸಂದರ್ಭ ರಾಟೆಮನೆ ಕಾಲೋನಿ ನಿವಾಸಿಗಳು, ದೇವಸ್ಥಾನ ಸಮಿತಿ ಸದಸ್ಯರು ಪಾಲ್ಗೊಂಡಿದ್ದರು.