ಸೋಮವಾರಪೇಟೆ,ಅ.28: ಸ್ವಾಮಿ ವಿವೇಕಾನಂದ ಶಿಷ್ಯೆಯಾಗಿ ಭಾರತಕ್ಕೆ ಬಂದು ಅಧ್ಯಾತ್ಮಿಕ ಸಾಧನೆ ಮಾಡಿದ ಸೋದರಿ ನಿವೇದಿತಾ ಅವರ 150ನೇ ಜನ್ಮ ದಿನಾಚರಣೆಯನ್ನು ಸೋಮವಾರಪೇಟೆ ತಾಲೂಕು ಬಿಜೆಪಿ ಮಹಿಳಾ ಮೋರ್ಚಾದಿಂದ ಆಚರಿಸಲಾಯಿತು.ಇಲ್ಲಿನ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ನಿವೇದಿತಾ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಉದ್ಘಾಟಿಸಲಾಯಿತು. ಸೊದರಿ ನಿವೇದಿತ ಅವರ ಜೀವನ ಚರಿತ್ರೆಯ ಬಗ್ಗೆ ತಾಲೂಕು ಅಧ್ಯಕ್ಷೆ ನಳಿನಿ ಗಣೇಶ್ ವಿವರಿಸಿದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯೆ ಸುಮಾ ಸುದೀಪ್, ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಜಾನಕಿ ಗಂಗಾಧರ್, ತಾಲೂಕು ಪ್ರಧಾನ ಕಾರ್ಯದರ್ಶಿ ತಂಗಮ್ಮ ಟೀಚರ್, ಉಪಾಧ್ಯಕ್ಷರುಗಳಾದ ನಿರ್ಮಲ ಸುರೇಶ್, ಮಮತ ಗಣೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.