ಮಡಿಕೇರಿ, ಡಿ. 1: ಕೊಡವ ಕುಟುಂಬಗಳ ನಡುವಿನ ಕೌಟುಂಬಿಕ ಕ್ರಿಕೆಟ್ ಉತ್ಸವವನ್ನು 2017ರಲ್ಲಿ ಬಾಳಲೆಯ ಅಳಮೇಂಗಡ ಕುಟುಂಬಸ್ಥರು ನಡೆಸುತ್ತಿದ್ದಾರೆ. 18ನೇ ವರ್ಷದ ಕ್ರಿಕೆಟ್ ಉತ್ಸವ ಇದಾಗಿದ್ದು, ಈ 2008ರಲ್ಲಿ ಕೌಟುಂಬಿಕ ಹಾಕಿ ಉತ್ಸವವನ್ನು ಯಶಸ್ವಿಯಾಗಿ ಆಯೋಜಿಸಿದ್ದ ಅನುಭವ ಹೊಂದಿರುವ ಅಳಮೇಂಗಡ ಕುಟುಂಬಸ್ಥರು ಆಯೋಜಿಸುತ್ತಿದ್ದಾರೆ. ಬಾಳೆಲೆಯ ವಿಜಯಲಕ್ಷ್ಮಿ

(ಮೂರನೇ ಪುಟದಿಂದ) ಪದವಿಪೂರ್ವ ಕಾಲೇಜು ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದೆ. ಮೈದಾನವನ್ನು ಸಮರ್ಪಕಗೊಳಿಸುವ ಕಾಮಗಾರಿಗೆ ಕುಟುಂಬಸ್ಥರು ಇಂದು ಭೂಮಿ ಪೂಜೆ ನೆರವೇರಿಸಿದರು.

ತಾ. 10 ರಂದು ಸಂಜೆ ಉತ್ಸವದ ಲೋಗೋ ಬಿಡುಗಡೆ ಕಾರ್ಯಕ್ರಮ ಬಾಳೆಲೆ ಕೊಡವ ಸಮಾಜದಲ್ಲಿ ನಡೆಯಲಿದೆ. ಇಂದು ಬೆಳಿಗ್ಗೆ ನಡೆದ ಭೂಮಿ ಪೂಜೆ ಸಂದರ್ಭ ಉತ್ಸವ ಸಮಿತಿ ಅಧ್ಯಕ್ಷ ಅಳಮೇಂಗಡ ಬೋಸು, ಉಪಾಧ್ಯಕ್ಷ ಸುರೇಶ್, ಕಾರ್ಯದರ್ಶಿ ಮೋಹನ್ ಚಂಗಪ್ಪ, ಖಜಾಂಚಿ ರವಿ, ಕುಟುಂಬದ ಮಾಜಿ ಅಧ್ಯಕ್ಷ ವಿಠಲ್, 2008ರ ಹಾಕಿ ಉತ್ಸವ ಸಮಿತಿ ಅಧ್ಯಕ್ಷರಾಗಿದ್ದ ಪೊನ್ನಪ್ಪ ಮತ್ತಿತರರು, ವಿಜಯಲಕ್ಷ್ಮಿ ಕಾಲೇಜು ಆಡಳಿತ ಮಂಡಳಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.