ಶ್ರೀಮಂಗಲ, ಡಿ.2 : ಯುಕೊ ಸಂಘಟನೆಯ ವಾರ್ಷಿಕ ಕಾರ್ಯಕ್ರಮವಾದ “ಕೊಡವ ಮಂದ್ ನಮ್ಮೆ”ಯ ತೃತೀಯ ವರ್ಷದ ಆಚರಣೆ ಜನವರಿ 1 ರ ಭಾನುವಾರದಂದು ಮೂರ್ನಾಡಿನ ಪಾಂಡಾಣೆ ನಾಡ್ ಮಂದ್ - ಮೈದಾನದಲ್ಲಿ ನಡೆಯಲಿದೆ ಎಂದು ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ತಿಳಿಸಿದ್ದಾರೆ. ಯುಕೋ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಂಜು ಚಿಣ್ಣಪ್ಪ, ಬಾಳೋಪಾಟ್‍ನಲ್ಲಿ, ‘ಪಾಂಡತ್ ಪಟ್ಟಿ’ ಎಂಬ ಖ್ಯಾತಿಯ, ಪಾಂಡಾಣೆ ನಾಡ್ ಮಂದ್‍ನ ಆಶೀರ್ವಾದ ದೊಂದಿಗೆ, ಭವ್ಯ ಮೆರವಣಿಗೆಯ ಮೂಲಕ ಮೂರ್ನಾಡಿನ ಪದವಿ ಪೂರ್ವ ಕಾಲೇಜು ಮೈದಾನಕ್ಕೆ ತೆರಳಿ, ಕೊಡಗಿನ ಪ್ರಖ್ಯಾತ ಮಂದ್‍ಗಳ ನಡುವೆ ಮಧ್ಯೆ ಪೈಪೋಟಿ ಕಾರ್ಯಕ್ರಮ ನಡೆಯಲಿದೆ, ಈ ಸಂದರ್ಭ ಪಾಂಡಾಣೆ ನಾಡ್ ಮಂದ್‍ಗೆ ಸಂಬಂದಿಸಿದ ಎಲ್ಲಾ ತಕ್ಕ ಮುಖ್ಯಸ್ಥರಿಗೆ ವಿಶೇಷ ಗೌರವ ಸಮರ್ಪಿಸಲಾಗುವದು ಎಂದು ಮಂಜು ಚಿಣ್ಣಪ್ಪ ತಿಳಿಸಿದರು.

ಈ ಕೊಡವ ಮಂದ್ ನಮ್ಮೆ ಆಚರಣೆಯ ಹಿಂದೆ ಕೊಡವ ಸಂಸ್ಕøತಿಯನ್ನು ಉಳಿಸಿ ಪೋಷಿಸುವ ಸ್ಪಷ್ಟ ಉದ್ದೇಶವಿದೆ. ಕೊಡವ ಸಂಸ್ಕøತಿಯಲ್ಲಿನ ವೈವಿದ್ಯತೆಯನ್ನು ಕೊಡವರ ಮಧ್ಯೆ ವಿನಿಮಯಗೊಳ್ಳುವ, ಹಾಗೂ ಯುವ ಪೀಳಿಗೆಗೆ ಕೊಡವ ಸಂಸ್ಕøತಿ ಯನ್ನು ಪರಿಚಯಿಸಿ ಮುಂದಿನ ಪೀಳಿಗೆಗೆ ಅದನ್ನು ಹಸ್ತಾಂತರಿಸುವ ಮಹತ್ತರ ಜವಾಬ್ದಾರಿಯನ್ನು ಅರಿತು ಯುಕೊ ಈ ಕೊಡವ ಮಂದ್ ನಮ್ಮೆಯನ್ನು ಹುಟ್ಟುಹಾಕಿದೆ. ಈ ಮಂದ್ ನಮ್ಮೆಯು ಕೊಡವ ಸಂಸ್ಕøತಿಯ ಮೇಲೆ ಯಶಸ್ವೀ ಪರಿಣಾಮ ಬೀರಿದ್ದು, ಕೊಡವ ಪಾರಂಪರಿಕ ಲೋಕದಲ್ಲಿ ಪರಿವರ್ತನೆಯ ಪರ್ವ ಪ್ರಾರಂಭ ವಾಗಿದೆ, ಕಳೆದ ಮೂರು ವರ್ಷಗಳ ಅವಧಿಯಲ್ಲಿ ದಶಕಗಳಿಂದ ಮುಚ್ಚಿಹೋಗಿದ್ದ

(ಮೊದಲ ಪುಟದಿಂದ) ಅನೇಕ ಮಂದ್‍ಗಳು ಸ್ವಯಂಪ್ರೇರಿತವಾಗಿ ಮರುಜೀವ ಪಡೆದುಕೊಂಡು ಮಂದ್ ನಮ್ಮೆಯಲ್ಲಿ ಭಾಗವಹಿಸಲು ಉತ್ಸುಕತೆ ತೋರುತ್ತಿವೆ ಎಂದು ಅವರು ಹೇಳಿದರು.

ವರ್ಷಂಪ್ರತಿ ನಡೆಯಲಿರುವ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ರಾಜಕೀಯದ ಸೋಂಕು ತಾಕದಂತೆ ಕಾಪಾಡಿಕೊಂಡು ಕೊಡವ ಸಾಂಪ್ರದಾಯಿಕ ಹಿರಿಮೆಯನ್ನು ಉಳಿಸಿಕೊಳ್ಳಬೇಕಾದÀ ಅನಿವಾರ್ಯತೆ ಯನ್ನು ಒತ್ತಿ ಹೇಳಿದ ಮಂಜು ಚಿಣ್ಣಪ್ಪ, ಈ ಮಂದ್ ನಮ್ಮೆಯ ಪಾವಿತ್ರ್ಯತೆ ಯನ್ನು ಯಾವದೇ ಬೆಲೆ ತೆತ್ತಾದರೂ ಉಳಿಸಿಕೊಳ್ಳಬೇಕಾಗಿದೆ ಎಂದರು. ಎಂದಿನಂತೆ ಮೂಲ ಸಂಸ್ಕøತಿಗೆ ಧಕ್ಕೆ ಬಾರದಂತೆ, ಕೆಲವೊಂದು ಹೊಸತನ ವನ್ನು ಅಳವಡಿಸಿಕೊಂಡು ವ್ಯವಸ್ಥಿತವಾಗಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಂಜು ಚಿಣ್ಣಪ್ಪ ಮಾಹಿತಿ ನೀಡಿದರು.

ಈ ವರ್ಷ 35ಕ್ಕೂ ಹೆಚ್ಚಿನ ಮಂದ್‍ಗಳು ಭಾಗವಹಿಸುವ ನಿರೀಕ್ಷೆ ಯಿದ್ದು, ಭಾಗವಹಿಸುವ ಎಲ್ಲಾ ಮಂದ್‍ಗಳಿಗೆ ವಿಷೇಷವಾಗಿ ‘ಮಂದ್ ಮರ್ಯಾದಿ’ ನೀಡಿ ಗೌರವ ನೀಡಿದ ನಂತರ ಮಂದ್-ಮಂದ್‍ಗಳ ನಡುವೆ ಸಾಂಸ್ಕøತಿಕ ಪೈಪೋಟಿ ನಡೆಸಲಾಗು ವದು, ಈ ಸಾಲಿನಲ್ಲಿ ಕೋಲಾಟ್, ಬೊಳಕಾಟ್, ಉಮ್ಮತಾಟ್, ಪರಿಯಕಳಿ, ಬಾಳೋಪಾಟ್, ಹಾಗೂ ವಾಲಗತಾಟ್ ಪೈಪೋಟಿಗಳನ್ನು ನಡೆಸಲಾಗುವದು.

ಕೊಡವ ಮಂದ್ ನಮ್ಮೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ, ಈ ವರ್ಷ ಆಕರ್ಷಕ ಕೊಡವ ಸಾಂಪ್ರದಾಯಿಕ ಆಭರಣಗಳ ಯೋಜನೆಯನ್ನು ಪರಿಚಯಿಸುತ್ತಿದ್ದು, ‘ಮೊದ ಜೊಪ್ಪೆ’ ಎಂಬ ಈ ಯೋಜನೆಯಲ್ಲಿ, ಜೋಮಾಲೆ, ಜೋಡಿ ಕಡಗ, ಪೀಚೆಕತ್ತಿ, ಅರ್ದ ಪವನ್ ಹಾಗೂ ಕಾಲು ಪವನ್ ಚಿನ್ನವನ್ನು ಬಹುಮಾನವಾಗಿ ನೀಡಲಾಗುವದು ಇದು ಈ ವರ್ಷದ ಮಂದ್ ನಮ್ಮೆಯ ಆಕರ್ಷಣೆಗಳಲ್ಲಿ ಒಂದು ಎಂದು ಮಾಹಿತಿ ನೀಡಿದರು.

ಕೊಡಗಿನ ಎಲ್ಲಾ ಸಾಂಪ್ರದಾಯಿಕ ಮಂದ್‍ಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪೈಪೋಟಿಗಳಲ್ಲಿ ಅತ್ಯಧಿಕ ಅಂಕಗಳೊಂದಿಗೆ ಹೊರಹೊಮ್ಮುವ ತಂಡಕ್ಕೆ 25000 ರೂಪಾಯಿಗಳ ನಗದು ಹಾಗೂ ಟ್ರೋಫಿಯನ್ನೊಳ ಗೊಂಡ ‘ಗಟ್ಟಿ ಮಂದ್’ ಪ್ರಶಸ್ತಿಯನ್ನು ನೀಡಲಾಗುವದು ಹಾಗೂ ಉಳಿದಂತೆ ಕೋಲಾಟ್, ಬೊಳಕಾಟ್, ಉಮ್ಮತಾಟ್ ಪೈಪೋಟಿಗಳಿಗೆ 5000,4000,3000,2000,1000 ರೂಪಾಯಿಗಳ ಐದು ಬಹುಮಾನಗಳು ಮತ್ತು ಆಕರ್ಷಕ ಟ್ರೋಫಿ ನೀಡಲಾಗುವದು. ಪರೆಯಕಳಿ ಪೈಪೋಟಿಗೆ 3000, 2500,2000,1500 ಹಾಗೂ 1000 ರೂಪಾಯಿಗಳ ನಗದು ಹಾಗು ಟ್ರೋಫಿ, ಹಾಗೂ ಬಾಳೋಪಾಟ್ ಪೈಪೋಟಿಗೆ 3000, 2500,2000 ರೂಪಾಯಿಗಳ ನಗದು ಹಾಗೂ ವೈಯಕ್ತಿಕ ಟ್ರೋಫಿ, ನೀಡಲಾಗುವದೆಂದು ಮಾಹಿತಿ ನೀಡಿದರು.

ಹಾಗೆಯೇ ವಾಲಗತಾಟ್‍ಗೆ ಪುರುಷರು, ಮಹಿಳೆಯರು ಹಾಗೂ ಮಕ್ಕಳಿಗೆ ಎರಡು ವಿಭಾಗಗಳು ಸೇರಿದಂತೆ 4 ವಿಭಾಗಗಳಿಗೆ 750,500,250 ರೂಪಾಯಿಗಳ ನಗದು ಬಹುಮಾನ ನೀಡಲಾಗುವದು. ಉಳಿದಂತೆ ಹಲವು ಪ್ರೋತ್ಸಾಹಕರ ಬಹುಮಾನಗಳನ್ನು ಸೇರಿಸಿ ಸುಮಾರು 2 ಲಕ್ಷಕ್ಕೂ ಹೆಚ್ಚಿನ ನಗದು ಬಹುಮಾನವನ್ನು ನೀಡಲಾಗುವದು ಎಂದು ಅವರು ಮಾಹಿತಿ ನೀಡಿದರು.

ಕಳೆದ ವರ್ಷದ ವಿಶೇಷ ಆಕರ್ಷಣೆಯಾದ ಪುರುಷರಿಗೆ ‘ಕೊಂಬಮೀಸೆರ ಬಂಬೊ’ ಹಾಗು ಮಹಿಳೆಯರಿಗೆ ‘ಬೋಜಿ ಜಡೆರ ಬೋಜಕ್ಕ’ ಎಂಬ ಸ್ಪರ್ಧೆ ಈ ವರ್ಷವೂ ಮುಂದುವರಿಯಲಿದ್ದು, ಕೊಡವ ಸಂಸ್ಕøತಿಗೆ ಭೂಷಣವಾಗಿದ್ದ ಮೀಸೆ ಹಾಗು ಜಡೆ ಸಂಸ್ಕøತಿಯನ್ನು ಪ್ರೋತ್ಸಾಹಿಸಲು ಈ ವಿಶೇಷ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ಹೇಳಿದರು. ಸಾವಿರಾರು ಅಭಿಮಾನಿಗಳು ಭಾಗವಹಿಸುವ ನಿರೀಕ್ಷೆಯಿದ್ದು, ಯುವ ಜನಾಂಗ ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ. ಈ ಕಾರ್ಯಕ್ರಮವನ್ನು ಅತ್ಯಂತ ಪರಿಣಾಮಕಾರಿಯಾಗಿ ನಡೆಸಲು ಗ್ರಾಮಸ್ಥರ ಸಹಕಾರದೊಂದಿಗೆ ಎಲ್ಲಾ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಕಳ್ಳಿಚಂಡ ರಾಬಿನ್ ಸುಬ್ಬಯ್ಯ, ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ, ಮಾದೇಟಿರ ತಿಮ್ಮಯ್ಯ ಹಾಜರಿದ್ದರು.