ನಾಪೆÇೀಕ್ಲು, ನ. 18: ಸಮೀಪದ ಕಕ್ಕಬೆ ಪಟ್ಟಣದ ಬಳಿ ಕಕ್ಕಬೆ ಹೊಳೆಯಲ್ಲಿ ಅಸ್ತಿಪಂಜರದ ರೀತಿಯಲ್ಲಿ ಮಹಿಳೆಯ ಮೃತ ದೇಹ ಪತ್ತೆಯಾಗಿದೆ. ಮೃತ ಮಹಿಳೆ ಮುತ್ತಾರ್ಮುಡಿ ಗ್ರಾಮದ ದಿನೇಶ್ ಅವರ ಪತ್ನಿ ಜ್ಯೋತಿ (22) ಎಂದು ತಿಳಿದು ಬಂದಿದೆ. ಈಕೆ ಕಳೆದ 1 ತಿಂಗಳ ಹಿಂದೆ ಕಕ್ಕಬೆಯ ಕುಂಜಿಲ ಗ್ರಾಮದ ನಿವಾಸಿ ತನ್ನ ಅಣ್ಣ ಶಾಂತರಾಜ್ ಮನೆಗೆಂದು ತನ್ನ ಮನೆ (ಮುತ್ತಾರ್ಮುಡಿ)ಯಿಂದ ಹೊರಟಿದ್ದಳು. ನಂತರ ಅಣ್ಣನ ಮನೆಗೂ ಬಾರದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯ ಮೂರ್ನಾಡು ಪೆÇಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈಕೆಯ ಪತ್ತೆಗೆ ಪೆÇಲೀಸರು ಕ್ರಮಕೈಗೊಂಡಿದ್ದರೂ ಯಾವದೇ ಪ್ರಯೋಜನವಾಗಿರಲಿಲ್ಲ. ಇಂದು ಮೃತ ದೇಹ ಕಕ್ಕಬೆ ಹೊಳೆ ಯಲ್ಲಿ ಪತ್ತೆಯಾಗಿದೆ. ಮೃತ ದೇಹವು ಸಂಪೂರ್ಣ ಕೊಳೆತು ಹೋಗಿದ್ದು, ಅಸ್ತಿಪಂಜರದಂತಾಗಿದೆ. ಈಕೆ ಮೃತಪಟ್ಟು ಸುಮಾರು 20 ದಿನ ಗಳಾಗಿರಬಹುದೆಂದು ಪೆÇಲೀಸರು ತಿಳಿಸಿದ್ದಾರೆ.

ಕಳೆದ ಒಂದೂವರೆ ವರ್ಷದ ಹಿಂದೆ ಈಕೆಯನ್ನು ಮುತ್ತಾರ್ಮುಡಿ ಗ್ರಾಮದ ಮೊಗೇರ ಸೇಪು ಎಂಬವರ ಪುತ್ರ ದಿನೇಶ್‍ಗೆ ವಿವಾಹ ಮಾಡಿ ಕೊಡಲಾಗಿತ್ತು.

ವೈದ್ಯಕೀಯ ಪರೀಕ್ಷೆಯ ನಂತರ ಮೃತದೇಹವನ್ನು ವಾರೀಸುದಾರರಿಗೆ ಒಪ್ಪಿಸಲಾಗಿದೆ. ಸ್ಥಳಕ್ಕೆ ನಾಪೆÇೀಕ್ಲು ಠಾಣಾಧಿಕಾರಿ ಬಿ.ಎಸ್. ವೆಂಕಟೇಶ್, ಎ.ಎಸ್.ಐ ದೇವರಾಜ್, ಹೆಡ್ ಕಾನ್ಸ್ಟೆಬಲ್ ಅಪ್ಪಾಜಿ, ಸಿಬ್ಬಂದಿ ಮಹೇಶ್ ಭೇಟಿ ನೀಡಿ ಸೂಕ್ತ ಕ್ರಮಕೈಗೊಳ್ಳುವದರೊಂದಿಗೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.