ಸುಂಟಿಕೊಪ್ಪ, ಡಿ. 21: ಕರ್ನಾಟಕ ಅರಣ್ಯ ಇಲಾಖೆ, ಕ್ಲಬ್ ಮಹೀಂದ್ರ ರೆಸಾರ್ಟ್ನ ಮಡಿಕೇರಿ ಹಾಗೂ ವೀರಾಜಪೇಟೆ, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಹಾಗೂ ಸುಂಟಿಕೊಪ್ಪ ಸರ್ಕಾರಿ ಪ್ರೌಢ ಶಾಲೆಯ ಇಕೋ-ಕ್ಲಬ್ ಸಹಯೋಗ ದೊಂದಿಗೆ ಸ್ವಚ್ಛ ಭಾರತ ಅಭಿಯಾನ ಯೋಜನೆಯಡಿ ಸುಂಟಿಕೊಪ್ಪ - ಮಡಿಕೇರಿ ನಡುವಿನ ಹೆದ್ದಾರಿ ರಸ್ತೆಯಂಚಿನಲ್ಲಿ ಶ್ರಮದಾನದ ಮೂಲಕ ಸ್ವಚ್ಛತಾ ಕಾರ್ಯ ನಡೆಸಲಾಯಿತು.
ಸುಂಟಿಕೊಪ್ಪ ಗದ್ದೆಹಳ್ಳ ಬಳಿಯಿಂದ ಆರಂಭಗೊಂಡ ಸ್ವಚ್ಛತಾ ಅಭಿಯಾನದಲ್ಲಿ ಅರಣ್ಯ ಇಲಾಖೆ ಹಾಗೂ ಕ್ಲಬ್ ಮಹೀಂದ್ರ ರೆಸಾರ್ಟ್ನ ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಪೌರ ಕಾರ್ಮಿಕರು ಜೊತೆಗೂಡಿ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡÀರು.
ಚರಂಡಿ ಹಾಗೂ ರಸ್ತೆಯಂಚಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಸ-ಕಡ್ಡಿ, ಬಳಸಿ ಎಸೆಯಲ್ಪಟ್ಟಿದ್ದ ಗ್ಲಾಸ್ ಹಾಗೂ ಪ್ಲಾಸ್ಟಿಕ್ ಬಾಟಲ್, ಪ್ಲಾಸ್ಟಿಕ್ ಕವರ್ ಮತ್ತಿತರ ಘನ ತ್ಯಾಜ್ಯವನ್ನು ಹೆಕ್ಕುವ ಮೂಲಕ ರಸ್ತೆಯ ಎರಡು ಬದಿಯನ್ನು ಸ್ವಚ್ಛಗೊಳಿಸಿದರು.
ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದ ಕ್ಲಬ್ ಮಹೀಂದ್ರ ರೆಸಾರ್ಟ್ನ ಮಡಿಕೇರಿ ಕೇಂದ್ರದ ರೆಸಿಡೆನ್ಸಿಯಲ್ ಮೆನೇಜರ್ ಸ್ವಪನ್ ಕುಮಾರ್ ದಾಸ್ ಮಾತನಾಡಿ, ಯಾರೂ ಕೂಡ ಕಸ ಕೊಳೆ ಮತ್ತಿತರ ಬೇಡವಾದ ಯಾವದೇ ತ್ಯಾಜ್ಯವನ್ನು ರಸ್ತೆ ಬದಿ ಸೇರಿದಂತೆ ಎಲ್ಲೆಂದರಲ್ಲಿ ಎಸೆಯದೇ ಅದನ್ನು ಎತ್ತಿ ಕಸದ ತೊಟ್ಟಿಯಲ್ಲಿ ಹಾಕಬೇಕು. ವಿದ್ಯಾರ್ಥಿಗಳು ಚಿಕ್ಕಂದಿನಿಂದಲೇ ಸ್ವಚ್ಛತೆ ಬಗ್ಗೆ ಅರಿವು ಬೆಳೆಸಿಕೊಂಡು ಜನರಲ್ಲಿ ಪರಿಸರ ಸ್ವಚ್ಛತೆ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು. ಸ್ವಚ್ಛತಾ ಅಭಿಯಾನದ ಮಹತ್ವ ಕುರಿತು ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ ಇಕೋ-ಕ್ಲಬ್ನ ಪರಿಸರ ಮಿತ್ರ ಶಿಕ್ಷಕ ಪರಿಸರ ಜಾಗೃತಿ ಆಂದೋಲನದ ಸಂಚಾಲಕ ಟಿ.ಜಿ. ಪ್ರೇಮಕುಮಾರ್ ಮಾಹಿತಿ ನೀಡಿದರು.
ಸುಂಟಿಕೊಪ್ಪ ಗ್ರಾ.ಪಂ.ಅಧ್ಯಕ್ಷೆ ರೋಸ್ಮೇರಿ ರಾಡ್ರಿಗಸ್ ಮಾತನಾಡಿ, ಪ್ರತಿಯೊಬ್ಬರೂ ಸ್ವಚ್ಛತಾ ಕಾರ್ಯಕ್ಕೆ ಕೈಜೋಡಿಸಬೇಕು ಎಂದರು.
ಸುಂಟಿಕೊಪ್ಪ ಗ್ರಾ.ಪಂ.ಮಾಜಿ ಅಧ್ಯಕ್ಷ ಕೆ.ಇ.ಕರೀಂ, ಸದಸ್ಯೆ ನಾಗರತ್ನ, ಆರ್ಎಫ್ಓ ದಯಾನಂದ, ಕ್ಲಬ್ ಮಹೀಂದ್ರ ರೆಸಾರ್ಟ್ನ ವೀರಾಜಪೇಟೆ ಕೇಂದ್ರದ ರೆಸಿಡೆನ್ಸಿಯಲ್ ಮೆನೇಜರ್ ಎಂ.ಎಸ್. ಮಹೇಶ್, ಕ್ಲಬ್ ಮಹೀಂದ್ರದ ಮಾನವ ಸಂಪನ್ಮೂಲ ವಿಭಾಗದ ಅಧಿಕಾರಿಗಳಾದ ವಿನೋದ್ಕುಮಾರ್, ನವೀನ್, ಶರತ್, ಅಯ್ಯಪ್ಪ, ಡಾ|| ನಾಗಮಣಿ, ಸೋಮಿ ಮತ್ತಿತರರು ಇದ್ದರು.
ಸಚ್ಛತಾ ಕಾರ್ಯದಲ್ಲಿ ಶಾಲಾ ವಿದ್ಯಾರ್ಥಿಗಳು ಸೇರಿದಂತೆ 85 ಮಂದಿ ಸ್ವಯಂ ಸೇವಕರು ಪಾಲ್ಗೊಂಡಿದ್ದರು. ಗದ್ದೆಹಳ್ಳ ಬಳಿಯಿಂದ ಮಡಿಕೇರಿ ರಸ್ತೆಯಲ್ಲಿ 2 ಕಿ.ಮೀ. ಕ್ರಮಿಸಿ ಕೆದಕಲ್ ತನಕ ಶ್ರಮದಾನ ನಡೆಸಲಾಯಿತು.