*ಗೋಣಿಕೊಪ್ಪ, ಆ. 4: ಸಮಾಜದಲ್ಲಿ ಗಂಡು ಮಗು ಮಾತ್ರ ಸಂಸಾರದ ಕಣ್ಣು ಎಂಬ ತಪ್ಪು ಕಲ್ಪನೆ ಇದೆ. ಗಂಡು ಮಗು ಮಾಡುವ ಸಂಸಾರದ ಎಲ್ಲಾ ಜವಾಬ್ದಾರಿಯನ್ನು ಹೆಣ್ಣು ಮಗು ಕೂಡ ನಿರ್ವಹಿಸುವ ಸಾಮಥ್ರ್ಯವನ್ನು ಪಡೆದಿದ್ದಾಳೆ. ಅಲ್ಲದೆ ಸಮಾಜ ಮತ್ತು ದೇಶವನ್ನು ಮುನ್ನಡೆಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾಳೆ. ಹೆಣ್ಣು ಗಂಡು ಎಂಬ ತಾರತಮ್ಯವನ್ನು ಸಮಾಜದಿಂದ ಹೋಗಲಾಡಿಸಿದರೆ ಮಾತ್ರ ಜನಸಂಖ್ಯಾ ಸ್ಫೋಟವನ್ನು ತಡೆಯಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಶ್ರೀರಂಗಪ್ಪ ಅಭಿಪ್ರಾಯ ವ್ಯಕ್ತ ಪಡಿಸಿದರು.
ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ತಾಲೂಕು ಆರೋಗ್ಯಾಧಿಕಾರಿಗಳ ಕಚೆÉೀರಿ, ವೀರಾಜಪೇಟೆ ತಾಲೂಕು ಪಂಚಾಯಿತಿ ಮತ್ತು ಗೋಣಿಕೊಪ್ಪಲು ಪ್ರೌಢÀಶಾಲೆ ಜಂಟಿ ಆಶ್ರಯದಲ್ಲಿ ನಡೆದ ವಿಶ್ವ ಜನ ಸಂಖ್ಯಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ಸಮಾಜದಲ್ಲಿ ಜನಸಂಖ್ಯಾ ಸ್ಫೋಟದ ಅರಿವು ಕಾರ್ಯಕ್ರಮವಾಗ ಬೇಕಾಗಿದ್ದು, ಪ್ರತಿಯೊಬ್ಬ ನಾಗರಿಕರು ಇದನ್ನು ಗಂಭೀರವಾಗಿ ಚಿಂತಿಸಬೇಕಾಗಿದೆ, ಒಂದು ವ್ಯಾಪ್ತಿಯಲ್ಲಿ ಜನ ಸಂಖ್ಯೆ ಹೆಚ್ಚಿದಂತೆ ಮೂಲ ಸೌಕರ್ಯದ ಕೊರತೆಯ ಜೊತೆ ಉತ್ತಮ ಜೀವನ ನಡೆಸಲು ತೊಂದರೆ ಅನುಭವಿಸುವಂತಾಗುತ್ತದೆ. ಅಲ್ಲದೆ ದಟ್ಟ ಜನ ಸಾಂದ್ರತೆಯಿಂದ ಸಾಂಕ್ರಾಮಿಕ ರೋಗಗಳು ಹರಡುವಂತಾಗುತ್ತದೆ ಎಂದು ತಿಳಿಸಿದರು.
ಕುಟುಂಬ ಕಲ್ಯಾಣಾಧಿಕಾರಿ ಡಾ. ಆಶಾ ಮಾತನಾಡಿ, ದಂಪತಿಗಳು ಚಿಕ್ಕ ಕುಟುಂಬ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಮನವಿ ಮಾಡಿದರು.
ಉತ್ತಮ ಸಂಸಾರ ಮತ್ತು ಮಕ್ಕಳ ಜನನದ ಅಂತರ ಕಾಯ್ದುಕೊಳ್ಳಲು ಇಲಾಖೆಯಿಂದ ಸಾಕಷ್ಟು ಪರಿಣಾಮಕಾರಿ ಯೋಜನೆಗಳನ್ನು ನೀಡುತ್ತಿದ್ದು, ದಂಪತಿಗಳು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಜಿ.ಪಂ. ಸದಸ್ಯ ಚೀಯಕ್ ಪೂವಂಡ ಬೋಪಣ್ಣ ಮಾತನಾಡಿ ಹಿಂದಿನ ತಲೆಮಾರಿನಲ್ಲಿ 8 ರಿಂದ 10 ಮಕ್ಕಳನ್ನು ಕಂಡ ಸಂಸಾರದಲ್ಲಿ ಇಂದು 1-2 ಮಕ್ಕಳನ್ನು ಕಾಣುತ್ತಿದ್ದೇವೆ. ಜನ ಸಂಖ್ಯಾ ನಿಯಂತ್ರಣಕ್ಕೆ ನಮ್ಮ ಕೊಡುಗೆಯನ್ನು ನೀಡುತ್ತಿದ್ದೇವೆ. ಆದರೆ ಯಾರು ಇದರ ಬಗ್ಗೆ ಹೆಚ್ಚು ಒಲವನ್ನು ತೋರುತ್ತಿಲ್ಲವೋ ಅವರಲ್ಲಿ ಅರಿವು ಕಾರ್ಯಕ್ರಮವನ್ನು ಮಾಡಬೇಕಾಗಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ತಾ.ಪಂ ಉಪಾಧ್ಯಕ್ಷ ನೆಲ್ಲಿರ ಚಲನ್, ತಾ.ಪಂ ಸದಸ್ಯ ಜಯ ಪೊವಯ್ಯ, ಗೋಣಿಕೊಪ್ಪಲು ಗ್ರಾ.ಪಂ. ಸದಸ್ಯರಾದ ರತಿ, ರಾಮಕೃಷ್ಣ, ತಾಲೂಕು ವೈದ್ಯಾಧಿಕಾರಿ ಡಾ. ಯತಿರಾಜ್, ಪ್ರೌಢಶಾಲೆ ಮುಖ್ಯ ಶಿಕ್ಷಕ ರತೀಶï ರೈ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಚೈತನ್ಯ ಕೃಷ್ಣ, ಆಶಾ ಕಾರ್ಯಕರ್ತರು ಮತ್ತು ಮಕ್ಕಳಿಗೆ ಜನಸಂಖ್ಯಾ ಸ್ಫ್ಪೋಟದ ಮಾಹಿತಿಯನ್ನು ನೀಡಿದರು.