ಮಡಿಕೇರಿ. ಜ.3 :ರಾಜ್ಯ ಸಹಕಾರ ಖಾತೆ ಸಚಿವ ಹೆಚ್.ಎಸ್.ಮಹದೇವಪ್ರಸಾದ್ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತೀವ್ರ ಸಂತಾಪ ಸೂಚಿಸಿದೆ.ನಗರದ ಹೊಟೇಲ್ ವ್ಯಾಲಿವ್ಯೂ ಸಭಾಂಗಣದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿದ ಪಕ್ಷದ ಪ್ರಮುಖರು ಮೌಲ್ಯಾಧಾರಿತ ರಾಜಕಾರಣಿಗೆ ಕಂಬನಿ ಮಿಡಿದರು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಬಾರ ಅಧ್ಯಕ್ಷರು ಹಾಗೂ ರೇಷ್ಮೆ ಮಾರಾಟ ಮಂಡಳಿಯ ಅಧ್ಯಕ್ಷ ಟಿ.ಪಿ. ರಮೇಶ್, ಕಾಂಗ್ರೆಸ್ ಪಕ್ಷ ಒಬ್ಬ ಉತ್ತಮ ಹಾಗೂ ಆದರ್ಶ ನಾಯಕನÀನ್ನು ಕಳೆದುಕೊಂಡಿದೆ ಎಂದು ಬೇಸರ ವ್ಯಕ್ತಪಡಿಸಿ ಪಕ್ಷಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಭಿಪ್ರಾಯಪಟ್ಟರು.
ಎಐಸಿಸಿ ಸಂಯೋಜಕಿ ಉಷಾ ನಾಯ್ಡು, ಕೆಪಿಸಿಸಿ ಕಾರ್ಯಕಾರಿಣಿಯ ಜಿಲ್ಲಾ ಉಸ್ತುವಾರಿ ನಾಯಕÀ ಎಸ್.ಎ. ಹುಸೇನ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಡಿಸಿಸಿಯ ನಿಕಟಪೂರ್ವ ಅಧ್ಯಕ್ಷ ಬಿ.ಟಿ. ಪ್ರದೀಪ್, ಹಿರಿಯ ಕಾಂಗ್ರೆಸ್ಸಿಗ ಮಿಟ್ಟು ಚಂಗಪ್ಪ, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಪಕ್ಷದ ಉಪಾಧ್ಯಕ್ಷರುಗಳಾದ ಪಿ.ಕೆ. ಪೊನ್ನಪ್ಪ, ರಾಜಮ್ಮ ರುದ್ರಯ್ಯ, ಉಸ್ಮಾನ್, ನಟೇಶ್ ಗೌಡ, ಜೋಸೆಫ್, ಶ್ಯಾಂ, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರುಗಳಾದ ಕೆ.ಎಂ. ಲೋಕೇಶ್, ಅಬ್ದುಲ್ ಸಲಾಂ, ಬಿ.ಎಸ್. ರಮಾನಾಥ್, ಧರ್ಮಜ ಉತ್ತಪ್ಪ, ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ವಾಸು ಕುಟ್ಟಪ್ಪ, ವಿವಿಧ ಮುಂಚೂಣಿ ಘಟಕಗಳ ಅಧ್ಯಕ್ಷರುಗಳಾದ ಕುಮುದಾ ಧರ್ಮಪ್ಪ, ಕೆ.ಎ.ಯಾಕೂಬ್, ಡಿ.ಎಸ್. ಹರ್ಷ, ಕೆಎಸ್‍ಆರ್‍ಟಿಸಿ ನಿಗಮದ ನಿರ್ದೇಶಕ ಶೌಕತ್ ಆಲಿ, ರಾಜ್ಯ ಕೆಎಸ್‍ಟಿಡಿಸಿ ಸದಸ್ಯರಾದ ಬಿ.ಎನ್. ಪ್ರಕಾಶ್, ಜಿಲ್ಲಾ ವಕ್ತಾರÀ ಕೆ.ಕೆ. ಮಂಜುನಾಥ್ ಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ಹಿಂದುಳಿದ ವರ್ಗದ ಜಿಲ್ಲಾಧ್ಯಕ್ಷÀರಾದ ಸರಾ ಚಂಗಪ್ಪ, ಬ್ಲಾಕ್ ಅಧ್ಯಕ್ಷ ಎಸ್.ಕೆ. ಸುಂದರ, ಕಾರ್ಮಿಕ ವಿಭಾಗದ ಜಿಲ್ಲಾ ಅಧ್ಯಕ್ಷ ವಿ.ಪಿ. ಶಶಿಧರ್, ಅರೆಭಾಷೆ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಜಿಲ್ಲಾ ಸಂಘಟನೆಯ ಸಂಯೋಜಕ ತೆನ್ನೀರ ಮೈನ, ಪ್ರಮುಖರಾದ ಕಾಡ್ಯಮಾಡ ಚೇತನ್, ಬೆಲ್ಲು ಬೋಪಯ್ಯ, ಎಂ.ಕೆ. ಹಕೀಂ, ಎಂ.ಎಸ್. ವೆಂಕಟೇಶ್, ಟಾಟು ಮೊಣ್ಣಪ್ಪ, ಜಿ.ಜಿ. ಮೋಹನ್, ನಿಸ್ಸಾರ್ ಅಹಮ್ಮದ್, ಎಂ.ಕೆ. ಬೋಪಣ್ಣ, ಎಸ್.ಮಧು, ಕೆ. ಮೊಣ್ಣಪ್ಪ, ಇಬ್ರಾಹಿಂ, ಸಾಜಿ ಅಚ್ಚುತನ್, ಗಣೇಶ್ ಮೊದಲಿಯಾರ್, ಟಿ.ಪಿ. ಹಮೀದ್, ರಾಜ್ಯ ಇಂಟಕ್ ಉಪಾಧ್ಯಕ್ಷ ಎನ್.ಎಂ. ಮುತ್ತಪ್ಪ, ಎಂ.ಇ. ಹನೀಫ್ ಮೊದಲಾ ದವರು ಸಭೆÉಯಲ್ಲಿ ಉಪಸ್ಥಿತರಿದ್ದು ಸಚಿವ ಮಹದೇವ ಪ್ರಸಾದ್ ನಿಧನಕ್ಕೆ ಶೋಕ ವ್ಯಕ್ತಪಡಿಸಿದರು. ಸಭೆಯಲ್ಲಿ ಎರಡು ನಿಮಿಷಗಳ ಕಾಲ ಮೌನ ಆಚರಿಸಲಾಯಿತು.