ಸಿದ್ದಾಪುರ, ಸೆ. 9: ಹುಲಿ ಧಾಳಿಗೆ ಹಸುವೊಂದು ಮೃತಪಟ್ಟಿರುವ ಘಟನೆ ಸಮೀಪದ ಚೆನ್ನಂಗಿ ಗ್ರಾಮದ ಗುಡ್ಲೂರಿನಲ್ಲಿ ನಡೆದಿದೆ. ಚೆನ್ನಯ್ಯನಕೋಟೆ ಗ್ರಾ.ಪಂ. ವ್ಯಾಪ್ತಿಯ ಚೆನ್ನಂಗಿ ಗ್ರಾಮದ ಗುಡ್ಲೂರು ನಿವಾಸಿ ನಾಣಯ್ಯ ಎಂಬವರ ಮನೆ ಬಳಿಯ ಕೊಟ್ಟಿಗೆಯಲ್ಲಿ ಮಲಗಿದ್ದ ಹಸು ಮೇಲೆ ರಾತ್ರಿ ಹುಲಿ ಧಾಳಿ ನಡೆಸಿದೆ. ಪರಿಣಾಮ ಹಸು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಲಿ ಧಾಳಿ ತಿಳಿಯುತ್ತಿದ್ದಂತೆ ಗ್ರಾಮಸ್ಥರು ಭಯಬೀತರಾಗಿದ್ದು, ಕೂಡಲೇ ಹುಲಿಯನ್ನು ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.

ಸ್ಥಳಕ್ಕೆ ತಾ.ಪಂ. ಸದಸೆÀ್ಯ ಚಿನ್ನಮ್ಮ, ಕಾವೇರಮ್ಮ ಭೇಟಿ ನೀಡಿ, ಈ ಭಾಗದಲ್ಲಿ ಈಗಾಗಲೇ ವನ್ಯ ಜೀವಿಗಳ ಉಪಟಳ ತೀವ್ರವಾಗಿದ್ದು, ಕೂಡಲೇ ಅರಣ್ಯ ಇಲಾಖೆ ಹುಲಿ ಹಾಗೂ ಚಿರತೆಯನ್ನು ಸೆರೆಹಿಡಿಯಬೇಕೆಂದು ಒತ್ತಾಯಿಸಿದರು.

-ವಾಸು