ವೀರಾಜಪೇಟೆ, ಆ. 18: ಸುಭಾಷ್‍ನಗರದಲ್ಲಿರುವ ಯುರೋಕಿಡ್ಸ್ ವತಿಯಿಂದ ಹೆಗ್ಗಳದಲ್ಲಿರುವ ವೃದ್ಧಾಶ್ರಮಕ್ಕೆ ರಕ್ಷಾ ಬಂಧನ ಪ್ರಯುಕ್ತ ಭೇಟಿ ನೀಡಿ ಅಲ್ಲಿ ವಾಸಿಸುತ್ತಿರುವ ವೃದ್ಧರಿಗೆ ಹಣ್ಣುಗಳು, ತಿಂಡಿ - ತಿನಿಸುಗಳನ್ನು ನೀಡಲಾಯಿತು. ಯುರೋಕಿಡ್ಸ್ ವ್ಯವಸ್ಥಾಪಕಿ ಬೊಟ್ಟೊಳಂಡ ಪ್ರತಿಮಾ ಪಳಂಗಪ್ಪ ನೇತೃತ್ವದಲ್ಲಿ ವಿತರಿಸಲಾಯಿತು. ಯುರೋಕಿಡ್ಸ್ ಮಕ್ಕಳು, ಷೋಷಕರು ಹಾಗೂ ಶಿಕ್ಷಕಿಯರು ಭಾಗವಹಿಸಿದ್ದರು.