ಮಡಿಕೇರಿ, ನ. 21: ಕೊಡಗಿನ ಹಿಂದೂ ಹಾಗೂ ಮುಸಲ್ಮಾನರ ನಡುವಿನ ಬಾಂಧವ್ಯದಲ್ಲಿ ಯಾವದೇ ರೀತಿಯ ಒಡಕನ್ನು ಮೂಡಿಸಲು ಕೋಮುವಾದಿಗಳಿಗೆ ಸಾಧ್ಯವಿಲ್ಲವೆಂದು ಕೊಡಗು ಮುಸ್ಲಿಂ ಹಿತರಕ್ಷಣಾ ವೇದಿಕೆ ಅಭಿಪ್ರಾಯಪಟ್ಟಿದೆ.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಜಿಲ್ಲಾಧ್ಯಕ್ಷ ಪಿ.ಎ. ಹನೀಫ್, ಜಿಲ್ಲೆಯಲ್ಲಿ ಕೆಲವರು ಕುಕೃತ್ಯಗಳನ್ನು ನಡೆಸುವ ಮೂಲಕ ಕೋಮು ಗಲಭೆಗೆ ಪ್ರಚೋದನೆ ನೀಡುತ್ತಿದ್ದಾರೆ ಎಂದು ಆರೋಪಿಸಿ ದರು. ಐಗೂರು ಗ್ರಾಮದಲ್ಲಿ ಮಸೀದಿಯಲ್ಲಿದ್ದ ಕುರ್ಆನ್ಗೆ ಹಾಗೂ ಪದ್ಮನಾಭ ಎಂಬವರಿಗೆ ಸೇರಿದ ಕಾರಿಗೆ ಬೆಂಕಿ ಹಚ್ಚಿದ ಘಟನೆಯನ್ನು ಅವರು ತೀವ್ರವಾಗಿ ಖಂಡಿಸಿದರು.
ಎರಡೂ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಶಾಂತಿ ಸಭೆಯನ್ನು ನಡೆಸಬೇಕೆಂದು ಒತ್ತಾಯಿಸಿದರು.
ಸಂಸದೆ ಶೊಭಾ ಕರಂದ್ಲಾಜೆ ಅವರು, ಕುರ್ಆನ್ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಮತ್ತು ಬೇಜವಾಬ್ದಾರಿತನದ ಹೇಳಿಕೆಯನ್ನು ನೀಡುವ ಮೂಲಕ ತಮ್ಮ ಸಂಸ್ಕøತಿಯನ್ನು ಬಹಿರಂಗಗೊಳಿಸಿ ದ್ದಾರೆ ಎಂದು ಟೀಕಿಸಿದರು. ಸೌಜನ್ಯಕ್ಕಾದರು ಜಿಲ್ಲೆಯ ಶಾಸಕರುಗಳು ಹಾಗೂ ಸಂಸದರು ಕುರ್ಆನ್ ಸುಟ್ಟ ಪ್ರದೇಶಕ್ಕೆ ಭೇಟಿ ನೀಡಿ ಸಾಂತ್ವನ ಹೇಳದೆ ಬೇಸರ ಮೂಡಿಸಿದ್ದಾರೆ ಎಂದು ಹೇಳಿದರು. ಐಗೂರಿನಲ್ಲಿ ನಡೆದಿರುವ ಒಟ್ಟು ಪ್ರಕರಣವÀನ್ನು ಸಿಐಡಿ ತನಿಖೆಗೆ ಒಪ್ಪಿಸಿದಾಗ ಮಾತ್ರ ನೈಜ ಆರೋಪಿಗಳು ಪತ್ತೆಯಾಗುತ್ತಾರೆ ಎಂದು ಹೇಳಿದ ಅವರು, ಜಿಲ್ಲಾ ಪೊಲೀಸರ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಕಾರ್ಯದರ್ಶಿ ಡಿ.ಐ. ಎಜಾಸ್ ಅಹಮ್ಮದ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಹಿಂದು ಹಾಗೂ ಮುಸಲ್ಮಾನರಲ್ಲಿ ಒಡಕನ್ನು ಮೂಡಿಸಲು ಕೋಮು ಶಕ್ತಿಗಳು ಪ್ರಯತ್ನಿಸುತ್ತಿವೆ. ಆದರೆ, ಪ್ರಜ್ಞಾವಂತರ ಜಿಲ್ಲೆಯಾಗಿರುವ ಕೊಡಗಿನಲ್ಲಿ ಯಾವದೇ ಕಾರಣಕ್ಕೂ ಹಿಂದು ಹಾಗೂ ಮುಸಲ್ಮಾನರ ನಡುವೆ ಕೋಮು ಸೌಹಾರ್ದತೆ ಹೆಚ್ಚಾಗುತ್ತದೆಯೇ ಹೊರತು ಕಡಿಮೆಯಾಗುವದಿಲ್ಲ.
ಜಾತ್ಯತೀತ ನಿಲುವಿನ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಕುರ್ಆನ್ ಸುಟ್ಟ ಮಸೀದಿಗೆ ಭೇಟಿ ನೀಡದೆ ಇರುವದು ಆಶ್ಚರ್ಯವನ್ನು ತಂದಿದೆ. ಜಿಲ್ಲೆಯಲ್ಲಿ ಯಾರೇ ಕೋಮು ಪ್ರಚೋದನೆ ನೀಡಿದರೂ ಹಿಂದೂ ಹಾಗೂ ಮುಸಲ್ಮಾನರ ನಡುವೆ ಇರುವ ಸಾಮರಸ್ಯವನ್ನು ಕದಡಲು ಸಾಧ್ಯವಿಲ್ಲ. ಕುರ್ಆನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರಪೇಟೆ ಹಾಗೂ ಕೊಡ್ಲಿಪೇಟೆಯಲ್ಲಿ ಪ್ರತಿಭಟನೆ ನಡೆಸಿದವರಿಗೆ ಪೊಲೀಸರು ನೋಟೀಸ್ ನೀಡಿದ್ದು, ಇದು ಸರಿಯಾದ ಕ್ರಮವಲ್ಲ.
ಐಗೂರು ಘಟನೆಯನ್ನು ಖಂಡಿಸಿ ತಾ. 22 ರಂದು (ಇಂದು) ವೀರಾಜಪೇಟೆಯ ಗಡಿಯಾರ ಕಂಬದ ಬಳಿ ವೇದಿಕೆ ವತಿಯಿಂದ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಎಜಾಸ್ ಅಹಮ್ಮದ್ ತಿಳಿಸಿದರು.
ಗೋಷ್ಠಿಯಲ್ಲಿ ಉಪಾಧ್ಯಕ್ಷ ರೋಷನ್ ಖಾನ್ ಹಾಗೂ ಸಂಘಟನಾ ಕಾರ್ಯದರ್ಶಿ ಎ.ಎ. ಶಫೀಕ್ ಉಪಸ್ಥಿತರಿದ್ದರು.