ಕುಶಾಲನಗರ, ಅ 07: ಹಾರಂಗಿ ಜಲಾಶಯದಿಂದ ನದಿಗೆ ಮತ್ತು ಕಾಲುವೆಗೆ ಒಟ್ಟು 5500 ಕ್ಯೂಸೆಕ್ ಪ್ರಮಾಣದ ನೀರು ಹರಿಯುತ್ತಿದೆ. ಕಳೆದ ಮೂರು ದಿನಗಳಿಂದ ಜಲಾಶಯದಿಂದ ನೀರು ಹರಿಸಲಾಗುತ್ತಿದ್ದು ಇದುವರೆಗೆ 7 ಅಡಿಗಳಷ್ಟು ನೀರು ಹೊರ ಹರಿದಿದೆ ಎಂದು ಅಣೆಕಟ್ಟೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.

ಜಲಾಶಯಕ್ಕೆ 500 ಕ್ಯೂಸೆಕ್ ಪ್ರಮಾಣದ ನೀರು ಹರಿದು ಬರುತ್ತಿದ್ದು ಇದೀಗ ಜಲಾಶಯದಲ್ಲಿ ನೀರಿನ ಸಂಗ್ರಹ ಮಟ್ಟ 2847.06 ಗೆ ಇಳಿದಿದೆ.