ಗೋಣಿಕೊಪ್ಪಲು, ಅ. 5: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಕ್ವಾಲಿಫೈರ್ ಪಂದ್ಯಾವಳಿಯಲ್ಲಿ ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್, ಆರ್ಎಸ್ಸಿ ಬಾಡಗ, ಯುಎಸ್ಸಿ ಗ್ರೀನ್ ಹಾಗೂ ಟಾಟಾ ಕಾಫಿ ತಂಡಗಳು ಲೀಗ್ ಹಂತಕ್ಕೆ ಪ್ರವೇಶ ಪಡೆದಿವೆ.
4 ದಿನಗಳ ಕಾಲ ನಡೆದ ಕ್ವಾಲಿಫೈರ್ ಪಂದ್ಯಾವಳಿಯಲ್ಲಿ ಅಂಕ ಪಡೆಯುವ ಮೂಲಕ ಪ್ರವೇಶ ಪಡೆದಿವೆ.
ಬುದವಾರ ನಡೆದ ಪಂದ್ಯಗಳಲ್ಲಿ ಎಫ್ಎಂಸಿ, ಡ್ರಿಬ್ಲ್ ಹೆಂಪ್, ಗುಂಡಿಯತ್ ಅಯ್ಯಪ್ಪ, ಟಾಟಾ ಕಾಫಿ ಹಾಗೂ ಬಲಮುರಿ ತಂಡಗಳು ಜಯ ಸಾಧಿಸಿದವು.
ಎಫ್ಎಂಸಿ ತಂಡವು ಎಸ್ಕೆಎಸ್ ವಿರುದ್ಧ 4-2 ಗೋಲುಗಳ ಜಯ ಸಾಧಿಸಿದವು. ವಿಜೇತ ತಂಡದ ಪರ 3 ಹಾಗೂ 12 ನೇ ನಿಮಿಷದಲ್ಲಿ ಪ್ರವೀಣ್, 7 ರಲ್ಲಿ ಪ್ರಶಾಂತ್, 11 ರಲ್ಲಿ ಕವನ್, ಎಸ್ಕೆಎಸ್ ಪರ 4 ರಲ್ಲಿ ದರ್ಶನ್, 16 ರಲ್ಲಿ ಪ್ರವೀಣ್ ಗೋಲು ಹೊಡೆದರು.
ಡ್ರಿಬ್ಲ್ ಹೆಂಪ್ ತಂಡವು ಕೆಆರ್ಎ ತಂಡವನ್ನು 5-0 ಗೋಲುಗಳಿಂದ ಸೋಲಿಸಿತು. ಹೆಂಪ್ ಪರ 2 ರಲ್ಲಿ ಸೋಫಿನಾ, 7 18, 23, 38 ರಲ್ಲಿ ಚರ್ಮಣ, ಕೆಆರ್ಎ ಪರ 28 ರಲ್ಲಿ ಚರ್ಮಣ ಗೋಲು ಬಾರಿಸಿದರು.
ಗುಂಡಿಯತ್ ಅಯ್ಯಪ್ಪ ತಂಡವು 1-0 ಗೋಲು ಅಂತರದಲ್ಲಿ ಉಮಾಮಹೇಶ್ವರಿ ವಿರುದ್ಧ ಜಯ ಸಾಧಿಸಿತು. ವಿಜೇತ ತಂಡಕ್ಕೆ ವಾಸು 12 ನೇ ನಿಮಿಷದಲ್ಲಿ ಹೊಡೆದ ಜಯ ಸಾಧಿಸಲು ಕಾರಣವಾಯಿತು.
ಯುಎಸ್ಸಿ ಗ್ರೀನ್ 4-0 ಅಂತರದಲ್ಲಿ ಬೇತುವನ್ನು ಮಣಿಸಿತು. 34 ರಲ್ಲಿ ವಿಶಾಲ್, 36, 37 ರಲ್ಲಿ ಪೊನ್ನಣ್ಣ ಹಾಗೂ 39 ರಲ್ಲಿ ಭರತ್ ಗೋಲು ಹೊಡೆದರು.
ಟಾಟಾ ಕಾಫಿ ತಂಡ 3-2 ಗೋಲುಗಳಿಂದ ವಿರಾಜಪೇಟೆ ಕೊಡವ ಸಮಾಜವನ್ನು ಮಣಿಸಿತು. ಟಾಟಾ ಪರ 10 ಹಾಗೂ 34 ರಲ್ಲಿ ಗಣಪತಿ, 31 ರಲ್ಲಿ ಧವನ್, ಕೊಡವ ಸಮಾಜ ಪರ 14 ರಲ್ಲಿ ಗಣಪತಿ, 34 ರಲ್ಲಿ ಶ್ಯಾಮ್ ಗೋಲು ಹೊಡೆದರು.
ಬಲಮುರಿ ತಂಡಕ್ಕೆ ಎಸ್ಹೆಚ್ಪಿ ವಿರುದ್ಧ 3-1 ಅಂತರದ ಗೆಲುವು ಲಭಿಸಿತು. ಬಲಮುರಿ ಪರ 16 ಹಾಗೂ 39 ರಲ್ಲಿ ಶ್ಯಾಮ್, 19 ರಲ್ಲಿ ತಿಮ್ಮಯ್ಯ, ಎಸ್ಹೆಚ್ಪಿ ಪರ 12 ನೇ ನಿಮಿಷದಲ್ಲಿ ಆಶಿಕ್ ಗೋಲು ಹೊಡೆದರು.