ಗೋಣಿಕೊಪ್ಪಲು, ಅ. 23 : ಹಾಕಿ ಕೂರ್ಗ್ ವತಿಯಿಂದ ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನಡೆದ ಹಾಕಿ ಟೂರ್ನಿ ಫೈನಲ್‍ಗೆ ಹಾತೂರು ಹಾಗೂ ಯುಎಸ್‍ಸಿ ರೆಡ್ ತಂಡಗಳು ಪ್ರವೇಶ ಪಡೆದಿವೆ. ಮೊದಲ ಸೆಮಿ ಫೈನಲ್‍ನಲ್ಲಿ ಹಾತೂರು ತಂಡವು ಬೇಗೂರು ತಂಡವನ್ನು 1-0 ಗೋಲುಗಳ ಅಂತರದಿಂದ ಸೋಲಿಸಿತು. ಹಾತೂರು ಪರ 39 ನಿಮಿಷದಲ್ಲಿ ಗಣಪತಿ ಗೋಲು ಹೊಡೆದರು. ಬೇಗೂರು ತಂಡಕ್ಕೆ 3, ಹಾತೂರು ತಂಡಕ್ಕೆ 2 ಪೆನಾಲ್ಟಿ ಕಾರ್ನರ್ ದೊರೆಯಿತು.

ಎರಡನೇ ಸೆಮಿ ಫೈನಲ್‍ನಲ್ಲಿ ಯುಎಸ್‍ಸಿ ರೆಡ್ ತಂಡವು ಕಾಕೋಟುಪರಂಬು ತಂಡದ ವಿರುದ್ಧ 1-0 ಗೋಲುಗಳ ಅಂತರದಿಂದ ಜಯ ಸಾಧಿಸಿ ಫೈನಲ್‍ಗೆ ಲಗ್ಗೆ ಇಟ್ಟಿತು. ರೆಡ್ ಪರ 23 ನೇ ನಿಮಿಷದಲ್ಲಿ ಪಿಂಟೋ ಬಾರಿಸಿದ ಏಕೈಕ ಗೋಲು ಪಂದ್ಯದ ಗೆಲುವಿಗೆ ಕಾರಣವಾಯಿತು. ಉಭಯ ತಂಡಗಳಿಗೂ ತಲಾ 3 ಪೆನಾಲ್ಟಿ ಕಾರ್ನರ್ ದೊರೆಯಿತು.