ಗೋಣಿಕೊಪ್ಪಲು, ಅ. 4: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆಯುತ್ತಿರುವ ಹಾಕಿ ಲೀಗ್ ಕ್ವಾಲಿಫೈರ್ ಪಂದ್ಯಾವಳಿಯ ಇಂದಿನ ಪಂದ್ಯದಲ್ಲಿ ಅಮ್ಮತ್ತಿ ಸ್ಪೋಟ್ರ್ಸ್ ಕ್ಲಬ್ 12 ಗೋಲುಗಳ ಮೂಲಕ ಭರ್ಜರಿ ಜಯ ಸಾಧಿಸಿದೆ.

ಕೊಡವ ರಿಕ್ರಿಯೇಷನ್ ಅಸೋಸಿಯೇಷನ್ ತಂಡವನ್ನು 12-0 ಗೋಲುಗಳ ಮೂಲಕ ಸೋಲಿಸಿತು. ಅಮ್ಮತ್ತಿ ಪರ ಬಿದ್ದಪ್ಪ 1, 2 ನೇ ನಿಮಿಷದಲ್ಲಿ, ಮುಕೇಶ್ 7, 10, 27, 28, ಕಿರಣ್ 13, ಗಣಪತಿ 23, ನವೀನ್ 30, 18, ಮೋಹನ್ 37, 39 ನೇ ನಿಮಿಷದಲ್ಲಿ ಗೋಲು ಹೊಡೆದರು.

ವೀರಾಜಪೇಟೆ ಕೊಡವ ಸಮಾಜ ತಂಡವು ಪೊನ್ನಂಪೇಟೆ ಸ್ಪೋಟ್ರ್ಸ್ ಕ್ಲಬ್ ತಂಡವನ್ನು 6-0 ಗೋಲುಗಳ ಅಂತರದಲ್ಲಿ ಮಣಿಸಿತು. ವೀರಾಜಪೇಟೆ ತಂಡದ ಪರ ಆದಿಲ್ 5, 15, 24, 27 ನೇ ನಿಮಿಷಗಳಲ್ಲಿ 4 ಗೋಲು ಬಾರಿಸಿ ಮಿಂಚಿದರು. ದೇವಯ್ಯ 8 ನೇ ನಿಮಿಷದಲ್ಲಿ, ಸುದರ್ಶನ್ 22 ನೇ ನಿಮಿಷದಲ್ಲಿ ಗೋಲು ಹೊಡೆದರು.

ಯುಎಸ್‍ಸಿ ಗ್ರೀನ್ ತಂಡ ಗುಂಡಿಯತ್ ಅಯ್ಯಪ್ಪ ತಂಡವನ್ನು 2-0 ಗೋಲುಗಳಿಂದ ಸೋಲಿಸಿತು. 19 ನೇ ನಿಮಿಷದಲ್ಲಿ ಪೊನ್ನಣ್ಣ, 38 ರಲ್ಲಿ ಭರತ್ ಗೋಲು ಹೊಡೆದರು.

ಉಮಾ ಮಹೇಶ್ವರಿ ತಂಡವು ಬೇತು ವಿರುದ್ದ 1-0 ಗೋಲುಗಳಿಂದ ಜಯ ಸಾಧಿಸಿತು. ಕಾಮಾಕ್ಷಿ 32 ನೇ ನಿಮಿಷದಲ್ಲಿ ಏಕಮಾತ್ರ ಗೋಲು ಹೊಡೆದು ಗೆಲುವಿನ ರೂವಾರಿಯಾದರು.

ಜನರಲ್ ತಿಮ್ಮಯ್ಯ ತಂಡ ಡ್ರಿಬ್‍ಲ್ ಹೆಂಪ್ ತಂಡ ಎಉರು 4-1 ಗೋಲುಗಳ ಅಂತರದಲ್ಲಿ ಗೆಲುವು ಸಾಧಿಸಿತು. ಜನರಲ್ ತಿಮ್ಮಯ್ಯ ಪರ 20 ನೇ ನಿಮಿಷದಲ್ಲಿ ಮಂಜು, 26 ನೇ ನಿಮಿಷದಲ್ಲಿ ಪ್ರಜ್ವಲ್, 32 ರಲ್ಲಿ ಪೂವಣ್ಣ, 38 ರಲ್ಲಿ ಶಾಜಿಲ್, ಡ್ರಿಬ್‍ಲ್ ಪರ 24 ರಲ್ಲಿ ಚರ್ಮಣ ಗೋಲು ಬಾರಿಸಿದರು.

ಟಾಟಾ ಕಾಫಿ ತಂಡವು ಬಲಮುರಿ ವಿರುದ್ಧ 2-1 ಗೋಲುಗಳ ಜಯ ಸಾಧಿಸಿತು. ಟಾಟಾ ಪರ 4 ರಲ್ಲಿ ಮಾಚಯ್ಯ, 25 ರಲ್ಲಿ ರೋಶನ್, 31 ರಲ್ಲಿ ಬಲಮುರಿ ಪರ ಪ್ರಸಾದ್ ಗೋಲು ಬಾರಿಸಿದರು.