ಶ್ರೀಮಂಗಲ, ನ. 29 : ದ.ಕೊಡಗಿನ ಟಿ.ಶೆಟ್ಟಿಗೇರಿ ಗ್ರಾ.ಪಂ. ವ್ಯಾಪ್ತಿಯ ಈಸ್ಟ್ ನೆಮ್ಮಲೆ ಗ್ರಾಮದಲ್ಲಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಮಿಶ್ರತಳಿಯ ಗಬ್ಬದ ಹಸುವನ್ನು ಹುಲಿ ಧಾಳಿ ನೆಡೆಸಿ ಕೊಂದು ಬಹುತೇಕ ತಿಂದು ಹಾಕಿದೆ. ಹಸುವನ್ನು ಕೊಂದಿರುವ ಸ್ಥಳದಿಂದ ತುಸು ದೂರದಲ್ಲೇ ಕಾಫಿ ತೋಟದಲ್ಲಿ ಮಂಗಳವಾರ ತೋಟ ಕಾರ್ಮಿಕರಿಗೆ ಹುಲಿ ಪ್ರತ್ಯಕ್ಷವಾಗಿದ್ದು, ಕಾರ್ಮಿಕರನ್ನು ಕಂಡು ಕಾರ್ಮಿಕರ ಮೇಲೆ ಹುಲಿ ಎರಗಿದ್ದು ಅದೃಷ್ಟವಶಾತ್ ಹುಲಿಯಿಂದ ತಪ್ಪಿಸಿಕೊಂಡಿರುವ ಘಟನೆ ನಡೆದಿದೆ.
ಈಸ್ಟ್ ನೆಮ್ಮಲೆ ಗ್ರಾಮದ ಮಾಣೀರ ಕಾವೇರಮ್ಮ (ಕಮಲ) ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಹಸುವನ್ನು ಸೋಮವಾರ ರಾತ್ರಿ ಹುಲಿ ಧಾಳಿ ನಡೆಸಿದ್ದು ಹಗ್ಗದಲ್ಲಿ ಕಟ್ಟಿದ್ದ ಸ್ಥಿತಿಯಲ್ಲಿ ಹಸುವನ್ನು ಸಾಯಿಸಿ ಹಸುವಿನ ತಲೆಭಾಗ ಹಾಗೂ ಕಾಲಿನ ಭಾಗ ಹೊರತುಪಡಿಸಿ ಬಹುತೇಕ ಹಸುವಿನ ದೇಹವನ್ನು ತಿಂದು ಹಾಕಿದೆ.
ಬೆಳಿಗ್ಗೆ ಹಸುವನ್ನು ಮೇಯಲು ಕೊಟ್ಟಿಗೆಯಿಂದ ಹೊರಗಡೆ ಕಟ್ಟಲು ಆಗಮಿಸಿದ ಕಾವೇರಮ್ಮ ಅವರಿಗೆ ಹುಲಿ ಧಾಳಿಯ ವಿಚಾರ ತಿಳಿದಿದೆ.
ಘಟನೆ ನಡೆದ ಸ್ಥಳದ 200 ಮೀ. ದೂರದಲ್ಲಿ ಕಳ್ಳೇಂಗಡ ನಂದ ಅವರ ತೋಟ ಕೆಲಸದ ಕಾರ್ಮಿಕರು ಬೆಳಿಗ್ಗೆ 9 ಗಂಟೆಗೆ ಹುಲಿ ಧಾಳಿಯ, ಹುಲಿ ಇರುವಿಕೆಯ ಬಗ್ಗೆ ಯಾವದೇ ಮಾಹಿತಿ ಇಲ್ಲದೆ ಎಂದಿನಂತೆ ತೋಟಕ್ಕೆ ತೆರಳುತ್ತಿದ್ದ ಸಂದರ್ಭ ಕಾಫಿ ಗಿಡಗಳ ನಡುವೆ