ಸುಂಟಿಕೊಪ್ಪ, ಜ. 10: ಸೋಮವಾರಪೇಟೆ ತಾಲೂಕಿನ ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಚುನಾವಣೆಯಲ್ಲಿ ಪ್ರತಿಷ್ಠೆಯ ಹರದೂರು ಹಾಗೂ ಬೇಳೂರು ಕ್ಷೇತ್ರದಲ್ಲಿ ರಾಜಕೀಯ ಘಟಾನುಘಟಿಗಳ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದ್ದು ರಾಜಕೀಯ ಕಣ ರಂಗೇರಿದೆ.ಹರದೂರು ಸಾಮಾನ್ಯ ಕ್ಷೇತ್ರದಿಂದ ಸುಂಟಿಕೊಪ್ಪ ಪ್ರಾಥಮಿಕ ಕೃಷಿಪತ್ತಿನ ಅಧ್ಯಕ್ಷÀ ಕಾಂಗ್ರೆಸ್‍ನ ಎನ್.ಸಿ. ಪೊನ್ನಪ್ಪ (ಕ್ಲೈವಾ) ಹಾಗೂ ಮಾದಾಪುರ ಪ್ರಾಥಮಿಕ ಕೃಷಿ ಪತ್ತಿನ ಅಧ್ಯಕ್ಷÀ ಬಿಜೆಪಿಯ ಬಿಜ್ಜಂಡ ಮೊಣ್ಣಪ್ಪ ಅಲಿಯಾಸ್ ಸುಬ್ರಮಣಿ ಅವರ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಇಬ್ಬರೂ ಕೊಡವ ಜನಾಂಗದವರಾಗಿದ್ದು, ರೈತರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಯುವ ನಾಯಕರುಗಳು ಗೆಲುವಿಗಾಗಿ ಮತದಾರರ ಕದ ತಟ್ಟುತ್ತಿದ್ದಾರೆ. ಹಗಲು-ರಾತ್ರಿ ಮತಯಾಚನೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ತೆರಳುತ್ತಿದ್ದು, ಕಾಂಗ್ರೆಸ್-ಬಿಜೆಪಿ ನಡುವೆ ದೊಡ್ಡ ಸಮರವೇ ಎದುರಾಗಿರುವದು ಕಂಡು ಬರುತ್ತಿದೆ. ಹರದೂರು, ನಾಕೂರು-ಶಿರಂಗಾಲ, ಸುಂಟಿಕೊಪ್ಪ, ಗರಗಂದೂರು, ಗದ್ದೆಹಳ್ಳ ವಿಭಾಗ ಈ ಕ್ಷೇತ್ರಕ್ಕೆ ಸೇರುತ್ತದೆ.

ಬೇಳೂರು ಕ್ಷೇತ್ರ: ಬೇಳೂರು ಎ.ಪಿ.ಎಂ.ಸಿ. ಕ್ಷೇತ್ರದಲ್ಲಿ ಬಿಜೆಪಿಯ ದೊಡ್ಡೇಗೌಡ್ನಮನೆ ಎಸ್. ಪೊನ್ನಪ್ಪ ಮಾಜಿ ತಾ.ಪಂ. ಸದಸ್ಯರು ಹಾಗೂ ಜೆಡಿಎಸ್-ಕಾಂಗ್ರೆಸ್ ಬೆಂಬಲಿತ ಮಾಜಿ ಜಿ.ಪಂ. ಸದಸ್ಯ ಅರೆಗೌಡ ಜನಾಂಗದ ಮೂಡಗದ್ದೆ ದಾಮೋದರ ಎಂಬವರ ನಡುವೆ ನೇರ ಸ್ಪರ್ಧೆ ನಡೆಯುತ್ತಿದೆ. ಇಬ್ಬರೂ ಮೂಲತಃ ಜನತಾ ಪರಿವಾರದವ ರಾಗಿದ್ದು, ಮಾಜಿ ಸಚಿವ ಬಿ.ಎ. ಜೀವಿಜಯ ಅವರ ಶಿಷ್ಯರಾಗಿದ್ದಾರೆ. ರಾಜಕೀಯ ಸ್ಥಿತ್ಯಂತರದಲ್ಲಿ ನೆಲೆ ಕಂಡುಕೊಳ್ಳಲು ಬೇರೆ-ಬೇರೆ ಪಕ್ಷವನ್ನು ಅವಲಂಬಿಸಿದ್ದಾರೆ.

ಕೃಷಿಕÀ ಮತದಾರರ ಮನ ಗೆಲ್ಲಲು ರಾಜಕೀಯ ಕರಗತ ಮಾಡಿಕೊಂಡಿರುವ ಇಬ್ಬರು ಹಿರಿಯ ರಾಜಕಾರಣಿಗಳು ಅಖಾಡಕ್ಕೆ ಧುಮಿಕ್ಕಿದ್ದು, ಯಾರು ಗೆದ್ದರೂ ಅಲ್ಪ ಮತದ ಅಂತರದಿಂದ ಗೆಲ್ಲಬಹು ದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಶಾಸಕ ಅಪ್ಪಚ್ಚು ರಂಜನ್ ಅವರ ಸ್ವಕ್ಷೇತ್ರ ಮಾದಾಪುರ ಕುಂಬೂರು ಈ ಕ್ಷೇತ್ರಕ್ಕೆ ಬರುವದರಿಂದ ಪ್ರತಿಷ್ಠೆಯ ಕಣವಾಗಿ ಬಿಂಬಿತವಾಗಿದೆ. ಬೇಳೂರು ಕೆಂಚಮ್ಮನಬಾಣೆ ಕರ್ಕಳ, ಐಗೂರು, ಯಡವಾರೆ ಈ ಕ್ಷೇತ್ರಕ್ಕೆ ಒಳಪಡಲಿದೆ.