ಪಾಲಿಬೆಟ್ಟ, ಆ. 24: ಇಲ್ಲಿನ ಆಟೋ ಚಾಲಕರು ಮತ್ತು ಮಾಲೀಕರ ಸಂಘದ ಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಕುಶಾನಗರದ ಗುಡ್ಡೆಹೊಸೂರಿನಲ್ಲಿ ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿಯ ಹತ್ಯೆಯನ್ನು ಖಂಡಿಸಲಾಯಿತು.ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಆರೋಪಿಗಳನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಇದರ ಹಿಂದೆ ಅಡಗಿರುವ ದುಷ್ಟಶಕ್ತಿಗಳನ್ನು ಕಂಡು ಹಿಡಿದು ಅವರನ್ನು ಜಿಲ್ಲೆಯಿಂದ ಗಡಿಪಾರು ಮಾಡಬೇಕೆಂದು ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಆಗ್ರಹಿಸಿದರು. ಸಭೆಯಲ್ಲಿ ಸಂಘದ ಅಧ್ಯಕ್ಷ ಎಂ.ಕೆ. ವಿಜುಸುಬ್ರಮಣಿ, ಗೌರವಾಧ್ಯಕ್ಷ ದೂಜವೇಗೇಸ್, ಉಪಾಧ್ಯಕ್ಷ ರಾಜಪ್ಪ, ಕಾರ್ಯದರ್ಶಿ ನಾರಾಯಣ, ಖಜಾಂಚಿ ಮಹೇಶ್ ಉಪಸ್ಥಿತರಿದ್ದರು.